ಗ್ಯಾಸ ವಿತರಣೆ ಸರಿಪಡಿಸಲು ಕರವೇ ಒಕ್ಕೂಟ ಮನವಿ
Karave union appeals to fix gas distribution
ಘಟಪ್ರಭಾ 04: ಗೋಕಾಕ ಹಾಗೂ ಮೂಡಲಗಿ ತಾಲ್ಯೂಕಾದ್ಯಂತ ಕಳೆದ ಒಂದು ತಿಂಗಳಿನಿಂದ ಅಡುಗೆ ಅನಿಲ(ಗ್ಯಾಸ್) ಸಮಸ್ಯೆಯಾಗಿದ್ದು ಇದನ್ನು ಖಂಡಿಸಿ ಗ್ಯಾಸ್ ಏಜೆನ್ಸಿ ವಿರುದ್ಧ ಘಟಪ್ರಭಾ ನಗರದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಘಟಪ್ರಭಾದ ಮೃತ್ಯಂಜಯ ವೃತದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮನವಿ ಸಲ್ಲಿಸಿ ಮಾತನಾಡಿದ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ. ಕೆಂಪಣ್ಣ ಚೌಕಶಿ ಅಡುಗೆ ಅನಿಲ(ಗ್ಯಾಸ್) ಏಜೆನ್ಸಿ ತಾಲೂಕಾದ್ಯಂತ ವಿಪರೀತ ಸಮಸ್ಯೆಯಾಗಿದ್ದು ಗ್ರಾಮೀಣ ಭಾಗದ ಜನರಿಗೆ, ಹೋಟೆಲ್ ಗ್ರಾಹಕರಿಗೆ, ದಿನ ಸಂಚರಿಸುವ ಆಟೋ ಚಾಲಕರಿಗೆ, ಹಾಗೂ ಸಣ್ಣ ಪುಟ್ಟ ಬೀದಿ ವ್ಯಾಪಾರಸ್ಥರಿಗೆ, ತುಂಬಾ ತೊಂದರೆ ಆಗುತ್ತಿದ್ದು. ಇದಲ್ಲದೇ ಕೆಲ ಗ್ಯಾಸ್ ವಿತರಕರು ನಿಗದಿತ ಬೆಲೆಗಿಂತ ಜಾಸ್ತಿ ಹಣ ಪಡೆಯುತ್ತಿದ್ದು.
ಜಾಸ್ತಿ ಹಣ ಪಡೆಯುವರ ಏಜೆನ್ಸಿ ರದ್ದುಗೊಳಿಸಬೇಕು, ಹಾಗೂ ಆದಷ್ಟು ಬೇಗ ಎಲ್ಲ ಸಮಸ್ಯೆಗಳನ್ನು ಇತ್ಯರ್ಥಗೊಳಿಸಬೇಕು ಎಂದು ಆಗ್ರಹ ಪಡಿಸಿದ್ದರು. ಪ್ರಧಾನ ಕಾರ್ಯದರ್ಶಿ ರೆಹಮಾನ್ ಮುಖಾಶಿ ಮಾತನಾಡಿ ಆರು ದಿನಗಳ ಒಳಗೆ ಈ ಸಮಸ್ಯೆ ಬಗೆಹರಿಯದಿದ್ದರೆ ನಾವು ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಹೇಳಿದರು. ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಮರಕುಂಬಿ,ಉಸ್ತುವಾರಿ ಅಧ್ಯಕ್ಷ ಪ್ರಶಾಂತ ಅರಳಿಕಟ್ಟಿ,ಕಾರ್ಯಾಧ್ಯಕ್ಷ ಶೆಟ್ಟೆಪ್ಪಾ ಗಾಡಿವಡ್ಡರ,ಮಂಜುನಾಥ್ ಜೆಲ್ಲಿ, ಸಂಚಾಲಕ ರವಿ ನಾವಿ, ತಮ್ಮಣ್ಣಾ ಅರಭಾಂವಿ, ಲಕ್ಷ್ಮಿ ಹಾದಿಮನಿ, ಶಶಿ ಚೌಕಶಿ,ರಾಘವೇಂದ್ರ ಕುಡ್ಡೆಮ್ಮೆ, ಸಿದ್ದಪ್ಪ ಬನ್ನೆನ್ನವರ್, ಯಮನೂರ ದಳವಾರ್, ನಾಗರಾಜ ನಾಯಕ, ಆನಂದ ಗಾಡಿವಡ್ಡರ ಮುಂತಾದವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 