ಚಿತ್ತಾಕುಲಾ ಪಂಚಾಯತ್ ವಿರುದ್ಧ ಜು.2ರಂದು ಬಂದ್‌ಗೆ ಕರವೇ ಕರೆ
Karave calls for bandh on July 2 against Chittakula Panchayat
ಕಾರವಾರ 29: ಕಸ ವಿಲೇವಾರಿ ವ್ಯವಸ್ಥೆ ಮಾಡದ ಚಿತ್ತಾಕುಲಾ ಪಂಚಾಯತ ಧೋರಣೆ ವಿರೋಧಿಸಿ ಜು.2 ರಂದು ಹಗಲು 12 ತಾಸು ಬಂದ್ ಮಾಡಲಾಗುವುದು ಎಂದು ಕಾರವಾರ ಜಿಲ್ಲಾ ಕರವೇ ಘಟಕ ಘೋಷಿಸಿತು. ಕಾರವಾರ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ಮಾಡಿದ ಕರವೇ ಅಧ್ಯಕ್ಷ ಅಕ್ಷಯ ಚಿತ್ತಾಕುಲಾ ಜನತೆ ,ವ್ಯಾಪಾರಸ್ಥರು ಬಂದ್ ಗೆ ಸಹಕರಿಸಲು ಕೋರಿದರು. ಕಸ ವಿಲೇವಾರಿ ಸಮಸ್ಯೆಯಿಂದ ಬೇಸತ್ತಿರುವ ಕಾರವಾರ ತಾಲ್ಲೂಕಿನ ಚಿತ್ತಾಕುಲಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸದಾಶಿವಗಡದಲ್ಲಿ ಇದೀಗ ಸಾರ್ವಜನಿಕ ಆಕ್ರೋಶ ಬುಗಿಲೆದ್ದಿದೆ ಎಂದರು.
ಮನೆ ಮನೆಯಿಂದ ಕಸ ಸಂಗ್ರಹಣೆ ಸ್ಥಗಿತಗೊಂಡಿರುವುದನ್ನು ಪ್ರತಿಭಟಿಸಿ, ಜುಲೈ 2 ರಂದು ಸದಾಶಿವಗಡ ಬಂದ್‌ಗೆ ಕರೆ ನೀಡಲಾಗಿದೆ ಎಂದ ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ ಶೆಟ್ಟಿ ಬಣ) ಸದಾಶಿವಗಡ ಕಸದಿಂದ ತುಂಬಿ ಹೋಗಿದೆ. ಕಸ ಎತ್ತುವ ನಾಟಕ ಮಾಡುವವರು ಸ್ವಚ್ಚತಾ ಅಭಿಯಾನ ಪತ್ರಿಕೆಯಲ್ಲಿ ಪೋಟೋಕಷ್ಟೇ ಸೀಮಿತವಾಗಿದ್ದಾರೆ ಎಂದರು. ರಸ್ತೆ ಬದಿಯೇ ಡಂಪಿಂಗ್ ಯಾರ್ಡ್ : ಕಳೆದ ಒಂದೂವರೆ ವರ್ಷದಿಂದ ಈ ಕಸದ ಸಮಸ್ಯೆ ಸದಾಶಿವಗಡವನ್ನು ಕಾಡುತ್ತಿದೆ. ಇಲ್ಲಿನ ತ್ಯಾಜ್ಯ ವಿಲೇವಾರಿ ಘಟಕ ಸಂಪೂರ್ಣ ಸ್ಥಗಿತಗೊಂಡಿದ್ದು, ಮನೆಗಳಿಂದ ಕಸ ಎತ್ತುವವರೇ ಇಲ್ಲದಂತಾಗಿದೆ. ಪರಿಣಾಮವಾಗಿ, ಸ್ಥಳೀಯ ಅಪಾರ್ಟ್‌ಮೆಂಟ್‌ಗಳ ನಿವಾಸಿಗಳು ಅನಿವಾರ್ಯವಾಗಿ ಮುಖ್ಯ ರಸ್ತೆಗಳ ಪಕ್ಕ ಹಾಗೂ ಕೆರೆಗಳಿಗೆ ಕಸ ಎಸೆಯುತ್ತಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 