ವಿವಿಧ ಬೇಡಿಕೆ ಈಡೇರಿಕೆಗೆ ಕರವೇಯಿಂದ ಸಿ.ಎಂಗೆ ಮನವಿಽ ಬಿ.ಎಸ್‌.ಪಿ.ಎಲ್ ಒಡಂಬಡಿಕೆಯನ್ನು ರದ್ದುಮಾಡಿ

ವಿವಿಧ ಬೇಡಿಕೆ ಈಡೇರಿಕೆಗೆ ಕರವೇಯಿಂದ ಸಿ.ಎಂಗೆ ಮನವಿಽ ಬಿ.ಎಸ್‌.ಪಿ.ಎಲ್ ಒಡಂಬಡಿಕೆಯನ್ನು ರದ್ದುಮಾಡಿ Karave appeals to CM to fulfill various demands, cancel BSPL agreement

ವಿವಿಧ ಬೇಡಿಕೆ ಈಡೇರಿಕೆಗೆ ಕರವೇಯಿಂದ ಸಿ.ಎಂಗೆ ಮನವಿಽ ಬಿ.ಎಸ್‌.ಪಿ.ಎಲ್ ಒಡಂಬಡಿಕೆಯನ್ನು ರದ್ದುಮಾಡಿ 

ಕೊಪ್ಪಳ 06: ಬಿ.ಎಸ್‌.ಪಿ.ಎಲ್ ಕಾರ್ಖಾನೆ ಸ್ಥಾಪನೆಯ ಒಡಂಬಡಿಕೆಯನ್ನು ರದ್ದುಮಾಡಿ ಜಿಲ್ಲೆಯಲ್ಲಿನ ಅಕ್ರಮ ಚಟುವಟಿಕೆಗಳು ಆಡಳಿತ ವ್ಯವಸ್ಥೆಯನ್ನೇ ಅಣಕಿಸುವಂತೆ ನಡೆಯುತ್ತಿದ್ದರೂ ಗಾಡ ನಿದ್ದೇಯಲ್ಲಿರುವ ಜಿಲ್ಲಾಡಳಿತಕ್ಕೆ ಹಾಗೂ ಕಾನೂನು ಪರಿಪಾಲಿಸುವ ಪೋಲೀಸ್ ಇಲಾಖೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಿ.ಗೀರೀಶಾನಂದ ಜ್ಞಾನಸುಂದರ ಅವರು ಹೇಳಿದರು. 

ಸೋಮವಾರದಂದು ನಗರಕ್ಕಾಗಮಿಸಿದ ಸಿ.ಎಂ ಸಿದ್ದರಾಮಯ್ಯ ಅವರಿಗೆ ಕರವೇ ಜಿಲ್ಲಾ ಘಟಕದಿಂದ ಮನವಿ ಸಲ್ಲಿಸಿ ಮಾತನಾಡಿದರು.

ಕಳೆದ 10-15 ವರ್ಷಗಳಿಂದ ಜಿಲ್ಲೆಯಲ್ಲಿ ಅಕ್ರಮ ದಂಧೆಕೋರರು ಅಟ್ಟಹಾಸ ಮೆರೆಯುತ್ತಿದ್ದು, ತಡೆಗಟ್ಟಬೇಕಾದ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೋಲೀಸ್ ಇಲಾಖೆ ಕಣ್ಣುಮುಚ್ಚಿ ಕುಳಿತಿರುವುದು ಕರವೇ ಬಲವಾಗಿ ಖಂಡಿಸುತ್ತದೆ. ರಾಜ್ಯದ ಆಡಳಿತ ಚುಕ್ಕಾಣಿಯ ಮುಖ್ಯಸ್ಥರಾಗಿರುವ ತಾವುಗಳು ಕೂಡಲೇ ಜಿಲ್ಲೆಯ ಈ ಕೆಳಕಾಣಿಸಿರುವ ಅಕ್ರಮ ಚಟುವಟಿಕೆ ನಡೆಸುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಆದೇಶಿಸಬೇಕು ಎಂದ ಅವರು ವಿವಿಧ ಬೇಡಿಕೆಯ ಹಕ್ಕೋತ್ತಾಯಗಳ ಮನವಿ ಪತ್ರವನ್ನು ಸಲ್ಲಿಸಿದರು

ಬಿ.ಎಸ್‌.ಪಿ.ಎಲ್ ಕಾರ್ಖಾನೆ ಸ್ಥಾಪನೆಯ ಒಡಂಬಡಿಕೆಯನ್ನು ರದ್ದುಮಾಡಿ ಈ ಭಾಗದ ಜನರ ಬೇಡಿಕೆಗೆ ಸ್ಪಂಧಿಸಬೇಕು. 

ಜಿಲ್ಲೆಯಲ್ಲಿ ಮುಂಗಾರು ಅಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿ ಅತಿವೃಷ್ಠಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಕೂಡಲೇ ಬೆಳನಷ್ಟ ಪರಿಹಾರ ನೀಡಬೇಕು. 

ಹಿರೇಹಳ್ಳ ಉದ್ದಕ್ಕೂ ಆಡಳಿತ ವ್ಯವಸ್ಥೆಯನ್ನೇ ಅಣುಕಿಸುವಂತೆ ರಾಜಾರೋಷವಾಗಿ ಹಗಲು ರಾತ್ರಿ ಎನ್ನದೇ ಮರಳು ಪಿಲ್ಟರ್ ಮಾಡುವ ಯಂತ್ರಗಳಿಂದ ದಂಧೆ ನಡೆಸುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಉಂಟಾಗುತ್ತಿರುವ ನಷ್ಟ ತಡೆದು ತಪ್ಪಿತಸ್ಥರರ ಮೇಲೆ ಕ್ರಮ ಕೈಗೊಳ್ಳಬೇಕು. 

ಕೊಪ್ಪಳ ತಾಲೂಕಿನ ಶಿವಪುರ, ಬಂಡಿಹರ್ಲಾಪೂರ, ಅಗಳಕೇರಾ, ಬಸಾಪೂರ, ಹುಸೇನ್‌ಪುರ, ಹಾಲವರ್ತಿ ಹಾಗೂ ಹೂವಿನಾಳ ಗ್ರಾಮಗಳ ಅರಣ್ಯ ಪ್ರದೇಶದಲ್ಲಿ ಸಂಪತ್ತನ್ನು ಹಾಳು ಮಾಡಿ ಅಕ್ರಮ ಕಲ್ಲು ಮತ್ತು ಮುರಮ್ ಗಣಿಗಾರಿಕೆ ನಡೆಸುತ್ತಿರವವರ ಮೇಲೆ ಕ್ರಮ ಕೈಗೊಂಡು ಸ್ಥಗಿತಗೊಳಿಸಬೇಕು. 

ಅ.26 ರಂದು ನಡೆದ ಗಂಗಾವತಿಯ ಸರ್ಕಾರಿ ಗೋದಾಮಿನಲ್ಲಿ ಪಡಿತರ ಅಕ್ಕಿ ಅಕ್ರಮವಾಗಿ ವಿದೇಶಕ್ಕೆ ಸಾಗಾಣಿಕೆಯ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಿ.ಓ.ಡಿ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು.   

ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶ ಹಾಗೂ ಹೆದ್ದಾರಿಯ ಡಾಬಾ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯವನ್ನು ಸಾಗಾಣಿಕೆ ಮತ್ತು ಮಾರಾಟ ಮಾಡುವವರ ಮೇಲೆ ಸೂಕ್ತ ಕ್ರಮ ಕೈಗೊಂಡು ತಡೆಯಿಡಿಯಬೇಕು. 

ಜಿಲ್ಲೆಯಲ್ಲಿ ರಿಕ್ರೀಯೇಷನ್ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲಾ ಕ್ಲಬ್‌ಗಳಲ್ಲಿ ಹಣದ ವ್ಯಾಮೋಹಕ್ಕಾಗಿಸರ್ಕಾರದ ನಿಯಮಗಳನ್ನು ಮೀರಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಕೂಡಲೇ ಈ ಕ್ಲಬ್‌ಗಳ ಮಾನ್ಯತೆ ರದ್ದುಮಾಡಿ ಬಂದಮಾಡಬೇಕು.ಜಿಲ್ಲೆಯಲ್ಲಿ ಮಾನ್ಯತೆ ಇಲ್ಲದೆ ನಡೆಯುತ್ತಿರುವ ಖಾಸಗಿ ವಸತಿ ಶಾಲೆಗಳ ಆಡಳಿತ ಮಂಡಳಿಯ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಶಾಲೆಗಳನ್ನು ಸ್ಥಗಿತಗೊಳಿಸಬೇಕು. 

ಕೃಷಿ ಇಲಾಖೆಯ ಪ್ರಧಾನಮಂತ್ರಿ ಫಸಲ್‌ಭೀಮಾ ಯೋಜನೆಯ ಬೆಳೆ ವಿಮಾ ಏಜೆಂಟರ ಹಾವಳಿ ತಪ್ಪಿಸಿ, ಯೋಜನೆಯಲ್ಲಿ ಆಗಿರುವ ಅವ್ಯವಹಾರವನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. 

ಭಾಗ್ಯನಗರ ಪಟ್ಟಣವು ದಿನೆ ದಿನೇ ಬೆಳೆಯುತ್ತಿದ್ದು, ಇದರಿಂದ ವಿದ್ಯುತ್ ಕಡಿತ ಆಗಾಗ ಲೋಡ್ ಶೆಡ್ಡಿಂಗ್‌ನಿಂದ ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರಿಗೆ, ವಾಣಿಜ್ಯೋದ್ಯಮಿಗಳಿಗೆ ಹಾಗೂ ವಿದ್ಯುತ ಮಗ್ಗದಾರರಿಗೆ ಸಾಕಷ್ಟು ತೊಂದರೆಯಾಉತ್ತಿದ್ದು, ಪ್ರತೇಕ ವಿದ್ಯುತ್ ಸ್ಷೇಷನ್‌ಗೆ ಭೂ ಮಂಜುರಾತಿ ಹಾಗೂ ಕಾರ್ಯಾದೇಶ ನೀಡಬೇಕು. 

ಈ ಸಂದರ್ಭದಲ್ಲಿ ಜಿಲ್ಲಾ ಯುವ ಘಟಕ ಅಧ್ಯಕ್ಷ ಹನುಮಂತ ಬೆಸ್ತರ, ಜಿಲ್ಲಾ ಉಪಾಧ್ಯಕ್ಷ ಶಿವನಗೌಡ ಪಾಟೀಲ ಹಲಗೇರಿ, ಭಾಗ್ಯನಗರ ಅಧ್ಯಕ್ಷ ವಿರೇಶ ಮುಂಡಾಸದ, ಗೊಂಡಬಾಳ ಹೋಬಳಿ ಅಧ್ಯಕ್ಷ ಕುಮಾರಸ್ವಾಮಿ ನಾಗರಳ್ಳಿ, ಮುಖಂಡರಾದ ಗವಿಸಿದ್ದಪ್ಪ ನಿರಾದಿಡ್ಡಿ, ರಮೇಶ ಹೊಸಳ್ಳಿ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.