ಕರಾಟೆ ತರಬೇತಿ ಯಿಂದ ಮಕ್ಕಳಲ್ಲಿ ಆತ್ಮ ವಿಶ್ವಾಸ ಬೆಳೆಯುತ್ತದೆ : ಮೀನಾಕ್ಷಿ ಬಣ್ಣದ ಭಾವಿ

ಕರಾಟೆ ತರಬೇತಿ ಯಿಂದ ಮಕ್ಕಳಲ್ಲಿ ಆತ್ಮ ವಿಶ್ವಾಸ ಬೆಳೆಯುತ್ತದೆ : ಮೀನಾಕ್ಷಿ ಬಣ್ಣದ ಭಾವಿ Karate training boosts self-confidence in children: Meenakshi Bannada Bhavi


ಕೊಪ್ಪಳ 17: ಇಂದಿನ ದಿನಗಳಲ್ಲಿ ಮಕ್ಕಳಿಗೆ ಅದರಲ್ಲಿ ವಿಶೇಷವಾಗಿ ಬಾಲಕಿಯರಿಗೆ ಶಿಕ್ಷಣದ ಜೊತೆಗೆ ದೈಹಿಕ ಸಾಮರ್ಥ್ಯ ಮತ್ತು ಆತ್ಮ ರಕ್ಷಣೆ ಹಾಗೂ ಶಿಸ್ತು ಬೆಳೆಸುವ ನಿಟ್ಟಿನಲ್ಲಿ ಕರಾಟೆ ತರಬೇತಿ ಅತ್ಯಂತ ಮಹತ್ವ ಪಡೆದುಕೊಂಡಿದೆ ಇದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಯುತ್ತದೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಮೀನಾಕ್ಷಿ ಬಣ್ಣದ ಭಾವಿ ಹೇಳಿದರು, ಅವರು ನಗರದ ಲೈನ್ಸ್‌ ಶಾಲೆಯಲ್ಲಿ ಇನ್ನರ್ ವೀಲ್  ಕ್ಲಬ್ (ಜಿಲ್ಲೆ 316) ಹಾಗೂ ಲೈನ್ಸ್‌ ಕ್ಲಬ್ ಇವುಗಳ ಸಹಯೋಗದಲ್ಲಿ ಶಾಲಾ ಬಾಲಕಿಯರಿಗಾಗಿ ಏರಿ​‍್ಡಸಿದ  ಸಬಲೀಕರಣ ಹಾಗೂ ಸ್ವಯಂ ರಕ್ಷಣಾ ಕರಾಟೆ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕರಾಟೆ ತರಬೇತಿ ಗೆ ಚಾಲನೆ ನೀಡಿ ಮಾತನಾಡಿದರು,

ಮುಂದುವರೆದು ಮಾತನಾಡಿ ಕರಾಟೆ ಕೇವಲ ಆತ್ಮ ರಕ್ಷಣೆಗೆ ಅಷ್ಟೇ ಅಲ್ಲ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಕರಾಟೆ ಸಹಕಾರಿಯಾಗುವ ಕ್ರೀಡೆಯಾಗಿದೆ, ಇದರಿಂದ ಮಕ್ಕಳಲ್ಲಿ ಶಿಸ್ತು ಏಕಾಗ್ರತೆ ಸಮಯ ಪಾಲನೆ ಹಾಗು ಆತ್ಮವಿಶ್ವಾಸ ಹೆಚ್ಚುತ್ತದೆ ನಿಯಮಿತವಾಗಿ ತರಬೇತಿ ಪಡೆಯುವುದರಿಂದ ದೇಹದ ಚುರುಕುತನ ಸಮತೋಲನ ಮತ್ತು ದೈಹಿಕ ಸಾಮರ್ಥ್ಯವು ಕೂಡ ವೃದ್ಧಿಯಾಗುತ್ತದೆ,

ಶಾಲಾ ಕಾಲೇಜುಗಳಲ್ಲಿ ಕರಾಟೆ ತರಬೇತಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ,ವಿಶೇಷವಾಗಿ ಬಾಲಕಿಯರಿಗೆ ಆತ್ಮ ರಕ್ಷಣಾ ಕೌಶಲ್ಯಗಳನ್ನು ಕಲಿಸುವ ಮೂಲಕ ಅವರು ಆತ್ಮ ವಿಶ್ವಾಸ ದಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಮೀನಾಕ್ಷಿ ಬಣ್ಣದ ಭಾವಿ ಹೇಳಿದರು, ಈ ಸಂದರ್ಭದಲ್ಲಿ ಬಾಲಕಿಯರಿಗೆ ಕರಾಟೆ ತರಬೇತಿ ನೀಡಿದ ಕರಾಟೆ ಮಾಸ್ಟರ್ ಮೌನೇಶ್ ಬಡಿಗೇರಗೆ ಕ್ಲಬ್ ಪರವಾಗಿ ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಕ್ಲಬ್ಬಿನ ಕಾರ್ಯದರ್ಶಿ ಶ್ರೀದೇವಿ ಪಾಟೀಲ್ ಐಎಸ್‌ಓ ಲತಾ ಪಟ್ಟಣಶೆಟ್ಟಿ ಖಜಾಂಚಿ ಶಿಲ್ಪ ರಾಜು ಶಶಿಮಠ, ಸೇರಿದಂತೆ ಕ್ಲಬ್ಬಿನ ಪದಾಧಿಕಾರಿಗಳು ಸದಸ್ಯರು ಮತ್ತು ಕರಾಟೆ ತರಬೇತಿದಾರರು ಶಾಲೆಯ ಬಾಲಕಿಯರು ಪಾಲ್ಗೊಂಡಿದ್ದರು.