ತಡವಲಗಾ ಗ್ರಾಮದಲ್ಲಿ ಕಾರಹುಣ್ಣಿಮೆ ಸಂಭ್ರಮ : ಎತ್ತುಗಳ ಅದ್ದೂರಿ ಮೆರವಣಿಗೆ
Karahunnima celebrations in Tadavalaga village : grand bull procession
ಇಂಡಿ: ತಾಲ್ಲೂಕಿನಾದ್ಯಂತ ಜೂನ್ 29 ರಂದು ಕಾರಹುಣ್ಣಿಮೆ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಅದರಂತೆ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿಯೂ ಕಾರಹುಣ್ಣಿಮೆಯ ನಿಮಿತ್ತವಾಗಿ ಎತ್ತುಗಳ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.ಗ್ರಾಮದ ರೈತರು ತಮ್ಮ ಎತ್ತುಗಳನ್ನು ಸುಂದರವಾಗಿ ಅಲಂಕರಿಸಿ, ವಾದ್ಯ ವೃಂದದ ಸಂಗೀತ ಮತ್ತು ನೃತ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಈ ಹಬ್ಬವನ್ನು ರೈತರ ಹಬ್ಬವೆಂದೂ ಕರೆಯಲಾಗುತ್ತದೆ.
ಬೇಸಿಗೆ ಮುಗಿದು ಮುಂಗಾರು ಮಳೆ ಆರಂಭವಾಗುವ ಸಂದರ್ಭದಲ್ಲಿ ಬರುವ ಈ ಹಬ್ಬದಂದು ರೈತರು ಎತ್ತುಗಳನ್ನು ಪೂಜಿಸಿ ಗೌರವಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ವಿಶೇಷ ಮಹತ್ವ ಹೊಂದಿದ್ದು, ಮಹಾಲಕ್ಷ್ಮೀ ಯೋಗ ರೂಪಗೊಳ್ಳುತ್ತದೆ ಎಂದು ನಂಬಿಕೆ ಇದೆ. ಚಂದ್ರನು ವೃಶ್ಚಿಕ ರಾಶಿಗೆ ಸಂಚಾರ ಮಾಡುವುದರಿಂದ ಈ ಯೋಗ ಉಂಟಾಗುತ್ತದೆ ಎಂಬ ಅಭಿಪ್ರಾಯವಿದೆ. ಈ ಯೋಗದಿಂದ ಕೆಲ ರಾಶಿಗಳಿಗೆ ಆರ್ಥಿಕ ಲಾಭ, ಆದಾಯದ ವೃದ್ಧಿ ಹಾಗೂ ವೃತ್ತಿಜೀವನದಲ್ಲಿ ಪ್ರಗತಿ ಸಾಧ್ಯವಾಗುತ್ತದೆ ಎಂದು ನಂಬಲಾಗುತ್ತದೆ.
ಈ ನಂಬಿಕೆಯನ್ನು ಆಧರಿಸಿ ರೈತರು ಕಾರಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ ಎಂದು ಎತ್ತುಗಳ ಮಾಲಿಕರಾದ ಅಶೋಕ ಮಾಣಿಕ ಕ್ಷೇತ್ರಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಾಳು ಕ್ಷೇತ್ರಿ, ಕಲ್ಲಪ್ಪ ಬುಕ್ಕಾಣಿ, ರವಿ ಹೊಸಮನಿ, ಬಸಪ್ಪ ಇಂಡಿ, ನಿಂಗಣ್ಣ ಕಟಾಯಿ, ರಮೇಶ್ ಹೊಸಮನಿ, ಶ್ರೀಮಂತ ಕಟಾಯಿ, ರಾಜು ಕ್ಷೇತ್ರಿ, ಮಾದೇವ ಕುದರಿ, ಗಣಪತಿ ಕ್ಷೇತ್ರಿ, ಯಲ್ಲಪ್ಪ ಹೊಸಮನಿ, ಬುಡ್ಡಣ್ಣ ಬಾಗವಾನ, ಪಪ್ಪು ಧಡೇದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 