ಮುಗಳಿಹಾಳದಲ್ಲಿ ಅಲಂಕರಿಸಿದ ಎತ್ತುಗಳಿಂದ ಕಾರ ಹುಣ್ಣಿಮೆ ಆಚರಣೆ
Kara Hunnime celebration with decorated bulls in Mugalihal
ಯರಗಟ್ಟಿ 12: ರೈತರ ಮೊದಲ ಹಬ್ಬ ಕಾರಹುಣ್ಣಿಮೆ ನಿಮಿತ್ಯ ಬುಧವಾರ ರೈತರು ತಮ್ಮ ಎತ್ತುಗಳಿಗೆ ಅಲಂಕಾರಿಕ ವಸ್ತುಗಳನ್ನು ಖರೀದಿಸಿ ಅಲಂಕರಿಸಿದರು.
ಎತ್ತುಗಳಿಗೆ ಅಲಂಕರಿಸುವ ಮಗಡ, ಮುಗಧಾರ, ಕೊರಳಲ್ಲಿ ಕಟ್ಟುವ ಲಡ್ಡು, ಕೋಡಿಗೆ ಅಲಂಕರಿಸುವ ಗೊಂಡೆ, ಗಾಡಿಗೆ ಅಲಂಕರಿಸುವ ವಿವಿಧ ಶೃಂಗಾರ ಸಾಮಾನುಗಳ ಖರೀದಿ ಜೋರಾಗಿ ನಡೆಯಿತು.ಕರಿಹರಿಯುವ ವಿಶೇಷ ಹಬ್ಬ: ಕಾರ ಹುಣ್ಣಿಮೆ ದಿನ ಅಲಂಕಾರಗೊಳಿಸಿದ ಜೋಡೆತ್ತುಗಳನ್ನು ಸಮೀಪದ ಮುಗಳಿಹಾಳ ಗ್ರಾಮದಲ್ಲಿ ತಂದು ಅಗಸಿಗೆ ಕಟ್ಟಿರುವ ಬೇವಿನ ತಪ್ಪಲಿನ ತೋರಣ ಹರಿದುಕೊಂಡು ಮುನ್ನುಗ್ಗುವ ಆಟ ಇದಾಗಿದ್ದು, ಯಾವ ಎತ್ತು ಮೊದಲು ಮುಂದು ಬರುತ್ತದೆ. ಆ ಎತ್ತಿಗೆ ರೈತರು ಹಿಂಗಾರು ಮತ್ತು ಮುಂಗಾರು ಎಂದು ಪರಿಗಣಿಸುತ್ತಾರೆ. ಈ ಆಟಕ್ಕೆ ರೈತರು ತಮ್ಮ ಎತ್ತುಗಳೊಂದಿಗೆ ಅಗಸಿಗೆ ಬಂದು ಅವುಗಳಿಗೆ ಹುರಿದುಂಬಿಸಿ ಓಡಿಸುತ್ತಾರೆ. ರೈತರ ಹಬ್ಬವಾದ ಕಾರಹುಣ್ಣಿಮೆಆಚರಿಸಲಾಗುತ್ತಿದೆ. ಗಾಡಿ ( ಎತ್ತಿನಬಂಡಿ) ಅಲಂಕರಿಸಿದ್ದಾರೆ.
ಕೃಷಿ ಕೆಲಸಕ್ಕೆ ಬಳಸುವ ವಸ್ತುಗಳ ಪೂಜೆ: ಉಳುಮೆಗೆ ಬಳಸುವ ನೇಗಿಲು, ಕುಂಟೆ, ಗಾಡಿ, ಬಾರಕೋಲು ಮತ್ತು ಇನ್ನಿತರ ಸಾಮಾನುಗಳಿಗೆ ಹುರಮಂಜು ಇಲ್ಲವೆ ಗುಲಾಲು ಹಚ್ಚಿ ಸಿಂಗರಿಸಿ ಪೂಜೆ ಮಾಡಲಾಗುತ್ತದೆ.
ಪ್ರಸಕ್ತ ವರ್ಷ ಬಿತ್ತನೆಗೆ ಅಗತ್ಯವಿದ್ದಷ್ಟು ತೇವಾಂಶವಾಗಿದ್ದು, ಹೆಚ್ಚಿನ ರೈತರು ಹಬ್ಬದ ದಿನದಂದೇ ಮುಂಗಾರು ಬಿತ್ತನೆಗೆ ಚಾಲನೆ ನೀಡಿದರು. ಊರಿನ ಹಿರಿಯರು, ಯುವಕರು ಮತ್ತಿತರರು ಇದ್ದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 