ಕಪ್ಪರ ಪಡಿಯಮ್ಮ ದೇವಿ ಜಾತ್ರೋತ್ಸವ ಮಾ.28 ರಿಂದ ಏಪ್ರಿಲ್ 1 ರವರೆಗೆ
Kappara Padiamma Devi Festival from March 28 to April 1
ಬೀಳಗಿ 26: ತಾಲ್ಲೂಕಿನ ಕೃಷ್ಣಾ ನದಿ ತೀರದ ಸಮೀಪದಲ್ಲಿ ನೆಲೆನಿಂತರುವ ನಾಗರಾಳ ಕಪ್ಪರಪಡಿಯಮ್ಮ ದೇವಿ ಜಾತ್ರಾಮಹೋತ್ಸವ ಮಾ.28ರಿಂದ ಏಪ್ರಿಲ್.1 ರವರೆಗೆ ಅದ್ದೂರಿಯಾಗಿ ನೇರವೆರಲಿದೆ.
ಐದು ದಿನಗಳಕಾಲ ನಡೆಯಲಿರುವ ಜಾತ್ರಾಮಹೋತ್ಸವಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದ್ದು, ಭಕ್ತಾದಿಗಳಿಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ.ಮಠದ ಪೀಠಾಧಿಪತಿ ಶೇಷಪ್ಪಯ್ಯ ಗುರುನಿಂಗಪ್ಪಯ್ಯ ದಿಗಂಬರೇಶ್ವರಮಠ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯಲಿರುವ ಜಾತ್ರಾ ಮಹೋತ್ಸವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಕ್ರೀಡೆ ,ಸಾಹಿತ್ಯಿಕ ಹಾಗೂ ಅನ್ನಸಂತರೆ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಜಾತ್ರೆಗೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಕ್ತರು ಆಗಮಿಸಲಿದ್ದು. ಅವರಿಗೆ ದೇವಸ್ಥಾನದಲ್ಲಿ ಊಟ ಮತ್ತು ವಸತಿ ವ್ಯವಸ್ಥೆಯಿದೆ. ದೇವಸ್ಥಾನದಲ್ಲಿ 5 ದಿನಗಳ ಕಾಲ ಯಜ್ಞ ಯಾಗಾದಿಗಳ ಸಹಿತ ವಿವಿಧ ಪೂಜಾ ಕಾರ್ಯಗಳಿಗೆ ಸಿದ್ಧತೆ ನಡೆಸಲಾಗಿದೆ.ಮಾ.28ರಂದು ಸಾಯಂಕಾಲ 5.30 ಕ್ಕೆ ರಥೋತ್ಸವ.ರಾತ್ರಿ 10.30ಕ್ಕೆ ಯುವರತ್ನ ವೇದಿಕೆ ಸಹಯೋಗದಲ್ಲಿ ಚಿಕ್ಕಾಲಗುಂಡಿ ಅಂಜನಿಪುತ್ರ ನಾಟ್ಯ ಸಂಘದಿಂದ ’ತಾಯಿ ಋಣ, ಮಣ್ಣಿನ ಗುಣ’ ನಾಟಕ ಅಭಿನಯಿಸುವರು. ಮಾ.29 ರಂದು ಸಾಯಂಕಾಲ 5ಕ್ಕೆ ಹಾಲೋಕಳಿ. ರಾತ್ರಿ 8 ಗಂಟೆಗೆ ಮದಭಾವಿ ಆರ್.ಕೆ.ಮೆಲೋಡಿಸ್ ಅವರಿಂದ ಆರ್ಕೆಸ್ಟ್ರಾ (ರಸಮಂಜರಿ)ಮಾ.30 ರಂದು ಸಾಯಂಕಾಲ 5ಕ್ಕೆ ಜಂಗಿ ಕುಸ್ತಿಗಳು ಸಂಜೆ.6 ಗಂಟೆಗೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಸಹಯೋಗದಲ್ಲಿ ಶರಣ ಸಾಂಸ್ಕೃತಿಕ ವೈಭವ ಹಾಗೂ ಜಾನಪದ ಕಲಾ ಮಹೋತ್ಸವದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿವೆ.
ಮಾ.31ರಂದು ಸಾಯಂಕಾಲ 5 ಗಂಟೆಗೆ ದನಗಳ ಪ್ರದರ್ಶನ ರಾತ್ರಿ 8 ಗಂಟೆಗೆ ಯುವರತ್ನ ವೇದಿಕೆ ವತಿಯಿಂದ ಪಗಡಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ. ಏಪ್ರಿಲ್.1ರಂದು ಕಳಸೋತ್ಸವ ನೆರವೇರುವುದು ಎಂದು ಶ್ರೀಮಠದ ಪೀಠಾಧಿಪತಿ ಶೇಷಪ್ಪಯ್ಯ ದಿಗಂಬರಿಮಠ ಪ್ರಕಟಣೆಯಲ್ಲಿ ತಿಳಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 