ನಾಟಿಂಗ್ ಹ್ಯಾಮ್ 20: ಕಪಿಲ್ ದೇವ್ ಲೆಜೆಂಡ್ ಆಟಗಾರರು, ಅವರಿಗೆ ನಾನು ಸರಿಸಮಾನಲ್ಲ. ಅವರೊಂದಿಗೆ ನನ್ನ ಹೋಲಿಕೆ ಮಾಡಬೇಡಿ ಎಂದು ಟೀಂ ಇಂಡಿಯಾ ಆಲ್ ರೌಂಡರ್ ಹಾದರ್ಿಕ್ ಪಾಂಡ್ಯಾ ಹೇಳಿದ್ದಾರೆ.
ನಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ಅಂತ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹಾದರ್ಿಕ್ ಪಾಂಡ್ಯಾ, ನನ್ನನ್ನು ಕಪಿಲ್ ದೇವ್ ಅವರೊಂದಿಗೆ ಹೋಲಿಸಬೇಡಿ. ನಾನು ಎಂದಿಗೂ ಕಪಿಲ್ ದೇವ್ ಆಗಬೇಕು ಎಂದು ಬಯಸಿರಲಿಲ್ಲ. ನಾನು ಹಾದರ್ಿಕ್ ಪಾಂಡ್ಯ ಆಗಿಯೇ ಇರುತ್ತೇನೆ. ನಾನು ಹಾದರ್ಿಕ್ ಪಾಂಡ್ಯ ಆಗಿಯೇ ಈ ಹಂತದವರೆಗೆ ಬೆಳೆದಿದ್ದೇನೆ. ಕಪಿಲ್ ದೇವ್ ಓರ್ವ ಶ್ರೇಷ್ಠ ಕ್ರಿಕೆಟಿಗ. ಅವರೊಂದಿಗೆ ನನ್ನನ್ನು ಹೋಲಿಸಬೇಡಿ. ನೀವು ನನ್ನನ್ನು ಕಪಿಲ್ ದೇವ್ ಅವರೊಂದಿಗೆ ಹೋಲಿಸದಿದ್ದರೆ ನನಗೆ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.
ಆಲ್ರೌಂಡರ್ ಹಾದರ್ಿಕ್ ಪಾಂಡ್ಯ ಇಂಗ್ಲೆಂಡ್ ಪ್ರವಾಸದಲ್ಲಿ ಸರಿಯಾದ ನಿರ್ವಹಣೆ ತೋರುತ್ತಿಲ್ಲ ಎಂದು ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಇದರ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ನಾನು ಟೀಕಾಕಾರರಿಗಾಗಿ ಆಡುವುದಿಲ್ಲ, ನಾನು ದೇಶಕ್ಕಾಗಿ ಮಾತ್ರ ಆಡುತ್ತೇನೆ. ನನ್ನ ಪ್ರದರ್ಶನಕ್ಕೆ ತಂಡ ಸಂತೃಪ್ತಿ ವ್ಯಕ್ತ ಪಡಿಸಿದೆ. ನನಗೆ ಅಷ್ಟೇ ಸಾಕು ಎಂದು ಟೀಕಾಕಾರಿಗೆ ತಿರುಗೇಟು ನೀಡಿದ್ದಾರೆ.
ನಿನ್ನೆ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನ ಶ್ರೇಷ್ಟ ಪ್ರದರ್ಶನ ತೋರಿದ ಹಾದರ್ಿಕ್ ಪಾಂಡ್ಯಾ, ಕೇವಲ 28 ರನ್ ನೀಡಿ 5 ಪ್ರಮುಖ ವಿಕೆಟ್ ಪಡೆದು, ಭಾರತ ತಂಡ ಮೇಲುಗೈ ಸಾಧಿಸುವಂತೆ ನೋಡಿಕೊಂಡರು.