ಜನಪದ ಸಾಹಿತ್ಯದಿಂದ ಕನ್ನಡ ಸಾಹಿತ್ಯ ಶ್ರೀಮಂತ: ವಾಲಿಕಾರ

Kannada literature is rich from folk literature: Valikara

ತಾಳಿಕೋಟಿ, 02; ಜನ ಸಾಮಾನ್ಯರ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಜಾನಪದ ಸಾಹಿತ್ಯ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದೆ ಆದರೆ ಇಂದು ಅದು ನಮ್ಮಿಂದ ಮರೆಯಾಗುತ್ತಿದೆ ಅದನ್ನು ರಕ್ಷಿಸಿ ಬೆಳೆಸುವ ಕಾರ್ಯ ನಾವೆಲ್ಲರೂ ಮಾಡಬೇಕಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು. ತಾಲೂಕಿನ ನಾವದಗಿ ಗ್ರಾಮದ ಬ್ರಹನ್ಮಠದಲ್ಲಿ ಶ್ರೀ ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರ ಪಟ್ಟಾಧಿಕಾರದ ಪ್ರಥಮ ವಾರ್ಷಿಕೋತ್ಸವದ ನಿಮಿತ್ಯವಾಗಿ ಶುಕ್ರವಾರ ಹಮ್ಮಿಕೊಂಡ ಸಾಹಿತ್ಯ ಗೋಷ್ಠಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. 

 ಸಾಹಿತ್ಯ ಗೋಷ್ಠಿ ಉದ್ಘಾಟಿಸಿ ಪರಮ ಪೂಜ್ಯ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳು ಸರಸ್ವತಿ ಪೀಠ ವಿಶ್ವಕರ್ಮ ಏಕದಂಡೆಗೆ ಮಠ ಶಹಪುರ್ ಇವರು ಮಾತನಾಡಿ ಸಾಹಿತ್ಯದ ಮುಖಾಂತರವಾಗಿ ಜಾನಪದ ಶೈಲಿಯಲ್ಲಿ ಭಕ್ತರ ಮನವನ್ನು ಗೆದ್ದರು ಅವರ ಪ್ರತಿಯೊಂದು ಮಾತುಗೂ ಭಕ್ತ ಸಮೂಹ ನಗುವಿನ ಓತಣದಲ್ಲಿ ಸೇರಿತ್ತು ಪೂಜ್ಯರು ಸುಧೀರ್ಘವಾಗಿ ಮಾತನಾಡಿ ದಾನ ಧರ್ಮ ಇಲ್ಲದ ಮನೆ ನರಕಕ್ಕೆ ಸಮಾನ ಎಂದು ಹೇಳಿದರು. ಯಾದಗಿರಿ ಜಂಗಮ ಸಮಾಜದ ಅಧ್ಯಕ್ಷ ನಾಗಯ್ಯ ಸ್ವಾಮಿ ದೇಸಾಯಿ ಶ್ರೀ ಮಠಕ್ಕೆ ನಮ್ಮ ತಾಲೂಕು ನಮ್ಮ ಜಿಲ್ಲೆ ಬೆಂಬಲವಾಗಿ ಸದಾ ಇರುತ್ತದೆ ಎಂದರು. ಪರಮ ಪೂಜ್ಯಶ್ರೀ ಷ.ಬ್ರ. ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಕಾರ್ಯಕ್ರಮದಲ್ಲಿ ಸಾಹೇಬಗೌಡ ಬಿರಾದಾರ, ಬಸವರಾಜ ಗೊರಜಿ, ಬಸಯ್ಯ ಶಾಸ್ತ್ರಿ, ಸೋಮಶೇಖರಮಠ ಉಪಸ್ಥಿತರಿದ್ದರು. ದೀಪಕ್ ಸಿಂಗ್ ಹಜೇರಿ ಪ್ರಾರ್ಥಿಸಿದರು. ಡಾ.ಸೋಮಶೇಖರ್ ಹಿರೇಮಠ ಸ್ವಾಗತಿಸಿ ನಿರೂಪಿಸಿದರು. ವೀರೇಶ ಹಿರೇಮಠ ವಂದಿಸಿದರು. ಕಾರ್ಯಕ್ರಮದಲ್ಲಿ ನಾವದಗಿ ಗ್ರಾಮದ ಗಣ್ಯರು ಹಿರಿಯರು ಹಾಗೂ ಶ್ರೀಮಠದ ಅಪಾರ ಭಕ್ತರು ಇದ್ದರು.