ಭಾಷೆ, ಬದುಕು, ಸಾಹಿತ್ಯ ಬೆಳವಣಿಗೆಯಲ್ಲಿ ಕನ್ನಡಕ್ಕೆ ತನ್ನದೇ ಅಸ್ಮಿತೆ ಇದೆ: ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಬಸವರಾಜ ಶಿವಣ್ಣನವರ.

ಭಾಷೆ, ಬದುಕು, ಸಾಹಿತ್ಯ ಬೆಳವಣಿಗೆಯಲ್ಲಿ ಕನ್ನಡಕ್ಕೆ ತನ್ನದೇ ಅಸ್ಮಿತೆ ಇದೆ:  ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಬಸವರಾಜ ಶಿವಣ್ಣನವರ. Kannada has its own identity in language, life, and literary development: MLA Basavaraja Shivannavar

ಭಾಷೆ, ಬದುಕು, ಸಾಹಿತ್ಯ ಬೆಳವಣಿಗೆಯಲ್ಲಿ ಕನ್ನಡಕ್ಕೆ ತನ್ನದೇ ಅಸ್ಮಿತೆ ಇದೆ:  ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಬಸವರಾಜ ಶಿವಣ್ಣನವರ. 

ಬ್ಯಾಡಗಿ 02 :"ಭಾಷೆ, ಬದುಕು, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಯಲ್ಲಿ ಕನ್ನಡಕ್ಕೆ ತನ್ನದೇ ಆದ ಅಸ್ಮಿತೆ ಇದೆ" ಎಂದು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಬಸವರಾಜ ಶಿವಣ್ಣನವರ  ಅವರು 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಾಡಳಿತದ ವತಿಯಿಂದ ಶ್ರೀ ಜಯದೇವ ಜಗದ್ಗುರು ಮುರುಘರಾಜೇಂದ್ರ ತಾಲೂಕು ಕ್ರೀಡಾಂಗಣದಲ್ಲಿ  70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಶಾಸಕ ಬಸವರಾಜ ಶಿವಣ್ಣನವರ  ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ "ಕನ್ನಡ ಭಾಷೆಗೆ ಸುಮಾರು 2 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಭಾಷೆ, ಬದುಕು, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಯಲ್ಲಿ ಕನ್ನಡ ಭಾಷೆಯು ತನ್ನದೇ ಅಸ್ಮಿತೆಯನ್ನು ಒಳಗೊಂಡಿದೆ. ಪ್ರಾಚೀನ ಕಾಲದಿಂದಲೂ ಶಾಸನಗಳಲ್ಲಿ ಕನ್ನಡ ಭಾಷೆ ಬಳಕೆಯಾಗಿರುವುದು ಕಂಡು ಬರುತ್ತದೆ. ಕನ್ನಡ ಭಾಷೆ ಮಾತನಾಡುವವರು ಕಾವೇರಿಯಿಂದ ಗೋದಾವರಿಯವರೆಗೆ ಇರುವುದನ್ನು ಕಾಣುತ್ತೇವೆ" ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಎಲ್ಲ ಮಹನೀಯರನ್ನು ಸ್ಮರಿಸುತ್ತ,ಕನ್ನಡ ನಾಡಿನ ವೈಭವ, ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲವೂ ಅನನ್ಯ. ಈ ಹೆಮ್ಮೆಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಸಂಕಲ್ಪ ಮಾಡೋಣ ಎಂದು ಹೇಳಿದ್ದಾರೆ.ಕನ್ನಡ ಭಾಷೆ ಎನ್ನುವುದು ಕೇವಲ ವರ್ಣಮಾಲೆ ಅಲ್ಲ. ಅದು ಕೇವಲ ಶಬ್ದ-ವಾಕ್ಯಗಳಲ್ಲ. ಭಾಷೆಯಲ್ಲಿ ಅದನ್ನಾಡುವ ಮನುಷ್ಯನ ಆಳವಾದ ಭಾವನೆಗಳಿರುತ್ತವೆ, ಪರಸ್ಪರ ಸಂಬಂಧಗಳಿರುತ್ತವೆ, ತನ್ನತನದ ಪ್ರಜ್ಞೆ ಇರುತ್ತದೆ. ಅದು ನಮ್ಮ ಸಂಸ್ಕೃತಿ, ಇತಿಹಾಸ, ನೆಲ-ಜಲದ ಸಂಪತ್ತು ಸೇರಿದಂತೆ ಎಲ್ಲವನ್ನೂ ಒಳಗೊಂಡ ಅಸ್ಮಿತೆಎಂದರು.ಕರ್ನಾಟಕ ರಾಜ್ಯ ಶಾಂತಿ ನೆಮ್ಮದಿಗೆ ಹೆಸರುವಾಸಿ ಆದ ರಾಜ್ಯ.ದೇಶದಲ್ಲಿ ಅತಿ ಹೆಚ್ಚು ಜಿ ಎಸ್ ಟಿ ತೆರಿಗೆಯನ್ನು ಕಟ್ಟುವಲ್ಲಿ ನಮ್ಮ ರಾಜ್ಯ ಎರಡನೆ ಸ್ಥಾನದಲ್ಲಿದೆ.ನಮ್ಮ ರಾಜ್ಯವು ಬೇರೆ ರಾಜ್ಯಗಳಿಗೆ ಮಾದರಿ ರಾಜ್ಯ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ನೀಡುವ ಮೂಲಕ ಬೇಡ ಕುಟುಂಬ ಮಹಿಳೆಯರಿಗೆ ಸಬಲಿಕರಣ ಮಾಡಿದ್ದು ಶಕ್ತಿ ಯೋಜನೆಯಿಂದ 7 ಸಾವಿರ ಕೋಟಿ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ.ತಾಲೂಕಿಗೆ ಈಗಾಗಲೇ ನಮ್ಮ ಸರ್ಕಾರವು ಏಳುನೂರು ಐವತ್ತೈದು ಕೋಟಿ ಹಣವನ್ನು ಕ್ಷೇತ್ರದ ಅಭಿವೃದ್ಧಿಗೆ ತರಲಾಗಿದೆ.ಎಂದರು.ಕಾರ್ಯಕ್ರಮದಲ್ಲಿ ರಾಜ್ಯೋತ್ಸವದ ಸಂದೇಶ ನುಡಿ ಮಾತನಾಡಿ ಸರ್ವಶ್ರೇಷ್ಠ ಮಾತೃಭಾಷೆಯಾದ ಕನ್ನಡವು ಜೀವ ಚೈತನ್ಯದಂತೆ ಕ್ಷಾತ್ರ ತೇಜಸ್ಸನ್ನು ಹೊಂದಿದ್ದು, ಕನ್ನಡದ ಮನಸ್ಸುಗಳ ಮೂಲಕ ಅಸ್ಮಿತೆಯನ್ನು ಜೀವಾಳವಾಗಿಸಿಕೊಂಡದೆ.ರಾಜ್ಯದಲ್ಲಿ ಪರಭಾಷಿಗರ ಹಾವಳಿ ಹೆಚ್ಚಾಗಿದೆ. ಅದರಲ್ಲೂ ರಾಜಧಾನಿಯಲ್ಲಿ ಉತ್ತರ ಭಾರತದವರ ವಲಸೆಯಿಂದ ಮೂಲಕ ಕನ್ನಡಿಗರಿಗೆ ಧಕ್ಕೆಯಾಗಿದೆ. ನಮ್ಮ ಮಾತೃಭಾಷೆಯನ್ನು ಉಳಿಸಲು, ಬೆಳೆಸಲು ನಾವೆಲ್ಲ ಕೇವಲ ನವಂಬರ್ ತಿಂಗಳ ಕನ್ನಡಿಗರಾಗದೆ ನಮ್ಮ ಉಸಿರಿರುವರೆಗೆ ಭಾಷಾಭಿಮಾನವನ್ನು ಮೆರೆಯಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮಕ್ಕೆ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಮೆರಗು ನೀಡಿತು.ಕಾರ್ಯಕ್ರಮದಲ್ಲಿ ತಾಲೂಕ ಕಾರ್ಯನಿರ್ವಾಹಕ ಅಧಿಕಾರಿ ಕೆ ಎಂ ಮಲ್ಲಿಕಾರ್ಜುನ.ಸಿ ಟಿ ಐ ಮಾರ್ತಾಂಡಪ್ಪ ಚಿಕ್ಕಣ್ಣನವರ.ಬ್ಲಾಕ ಅಧ್ಯಕ್ಷ ದಾನಪ್ಪ ಚೂರಿ.ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಏರೆಸಿಮಿ.ಪುರಸಭೆ ಉಪಾಧ್ಯಕ್ಷ ಸುಭಾಷ್ ಮಾಳಗಿ.ಗ್ಯಾರೆಂಟಿ ತಾಲೂಕು ಅಧ್ಯಕ್ಷ ಶಂಬನಗೌಡ ಪಾಟೀಲ.ಸುರೇಶ ಹುಳಬುತ್ತಿ.ಚಂದ್ರಣ್ಣ ಶೆಟ್ಟರ.ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಜಿ ಕೋಟಿ.ಪುರಸಭೆ ಸದಸ್ಯರು.ಸ್ಥಾಯಿ ಸಮಿತಿ ಸದಸ್ಯರು.ನಾಮನಿರ್ದೆಶಿತ ಸದಸ್ಯರು.ಕನ್ನಡ ಪರ ಸಂಘಟನೆಗಳ ಅಧ್ಯಕ್ಷರು ಮತ್ತು ಸದಸ್ಯರು.ವಿವಿಧ ಸಂಘಟನೆಗಳ ಸದಸ್ಯರು.ತಾಲೂಕು ರಾಜಕೀಯ ಪಕ್ಷಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು.ಎಲ್ಲ ಇಲಾಖೆಗಳ ಅಧಿಕಾರಿಗಳು.ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.