ಅದ್ದೂರಿಯಾಗಿ ಜರುಗಿದ ಕನ್ನಡ ರಾಜ್ಯೋತ್ಸವ
Kannada Rajyotsava celebrated with grandeur
ಹಾವೇರಿ 04: ನಗರದ ಗೌರಿಮಠದ ಮಲ್ಲಿಕಾರ್ಜುನ ಆಂಗ್ಲ ಮಾಧ್ಯಮ ಪ್ರೌಢ ಮತ್ತು ಪ್ರಾಥಮಿಕ ಶಾಲೆಯಲ್ಲಿ ಅದ್ದೂರಿಯಾಗಿ ಜರುಗಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕವು ಅನೇಕ ಪ್ರಾಂತ ಮತ್ತು ಸಂಸ್ತಾನಗಳಲ್ಲಿ ಹರಿದು ಹಂಚಿ ಇಪ್ಪತ್ತೆರಡು ತುಂಡುಗಳಾಗಿ ಬೇರೆ -ಬೇರೆ ಆಡಳಿತಕ್ಕೆ ಒಳಪಟ್ಟಿತ್ತು. ಕರ್ನಾಟಕ ಏಕೀಕರಣಗೊಳ್ಳಲು ಸಾಹಿತಿಗಳು, ಪತ್ರಿಕೆಗಳು, ಸಂಘ -ಸಂಸ್ಥೆಗಳು, ಹಲವಾರು ಧುರೀಣರು ಹೋರಾಟ ನಡೆಸಿದರು ಎಂದ ಅವರು ಪ್ರತಿಯೊಬ್ಬರೂ ಕನ್ನಡದ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಂಡು ಕನ್ನಡ ಭಾಷೆ ಉಳಿಸಿ -ಬೆಳೆಸಲು ಮುಂದಾಗಬೇಕು ಎಂದರು.
ಮುಖ್ಯೋಪಾಧ್ಯಯರಾದ ಶಂಕರ ಅಕ್ಕಸಾಲಿ ಶಿಕ್ಷಕಿ ಜಯಮ್ಮ ಪೂಜಾರ ಮಾತನಾಡಿ ಕನ್ನಡ ರಾಜ್ಯೋತ್ಸವದ ಮಹತ್ವ ತಿಳಿಸಿದರು. ಮುದ್ದು ಮಕ್ಕಳಿಂದ ಭಾಷಣ, ನೃತ್ಯ ಇತ್ಯಾದಿ ಸಂಸ್ಕೃತಿ ಕಾರ್ಯಕ್ರಮ ಜರುಗಿದವು ಅದರಲ್ಲೂ ’ಕರ್ನಾಟಕ ಏಕೀಕರಣ ’ಕುರಿತು ಮಾಡಿದ ನಾಟಕ ತುಂಬಾ ಅದ್ಬುತವಾಗಿತ್ತು. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತ ಜಿಲ್ಲಾ ಕಾರ್ಯದರ್ಶಿ ಡಾ. ಗಂಗಯ್ಯ ಕುಲಕರ್ಣಿ ಹಾಗೂ ಸರ್ವ ಶಿಕ್ಷ ಕರು ಉಪಸ್ಥಿತರಿದ್ದರು. ಜಯಲಕ್ಷ್ಮಿ ಪುಟ್ಟಪ್ಪನವರ ಸ್ವಾಗತಿಸಿದರು, ಗೌರಮ್ಮ ಲೋಕಾಪುರ ನಿರೂಪಿಸಿದರು, ರೇಷ್ಮಾಬಾನು ಜಿ, ನದಾಪ ವಂದಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 