ಉಗರಗೋಳ: ಕನಕಮ್ಮಾ ದೇವಿ ಮೂರ್ತಿ ಮೆರವಣಿಗೆ

ಲೋಕದರ್ಶನ ವರದಿ

ಉಗರಗೋಳ 26:  ನಾಡಿನ ಉದ್ದಗಲಕ್ಕೂ ಜಾತ್ರಾ ಉತ್ಸವವು ರಾರಾಜಿಸುತ್ತಿರುವಾಗ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಸತ್ಸಂಪ್ರದಾಯಗಳು, ಶಕ್ತಿದೇವತೆಗಳ ಅವತಾರಗಳು, ಸಿದ್ದಿಪುರುಷರ, ಶರಣರ, ಸಾಧುಸಂತರ, ಪ್ರವಾದಿಮಹಮ್ಮದ ಪೈಗಂಬರರ, ಬುದ್ದ, ಶಂಕರಾಚಾರ್ಯರ ತತ್ವಸಿದ್ಧಾಂಗಳನ್ನು ಹಾಗೂ ಪಂಚ ಋಣಗಳನ್ನು ಎಲ್ಲಾ ಮನುಕುಲದ ಜನಾಂಗದವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಪ್ರತಿಯೊಬ್ಬರ ಬದುಕು ಹಸನಾಗುವುದೆಂದು ಸಮಾಜದ ಮುಖಂಡ ಹೂವಪ್ಪ ಸಿಕ್ಕಲಿ ಹೇಳಿದರು.

ಸವದತ್ತಿ ತಾಲೂಕಿನ ಉಗರಗೋಳದಲ್ಲಿ ಕನಕಮ್ಮಾ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾತನಾಡಿದ ಅವರು ಇಂದಿನ ಯುವಕರು ಮನರಂಜನೆಗೆ ಮಾರುಹೋಗದೆ ಅಧ್ಯಾತ್ಮದತ್ತ ಒಲವು ತೋರುತ್ತಿರುವದು ಸಂತಸ ತಂದಿದೆ, ಪ್ರತಿಯೋಬ್ಬರು ಭಗವಂತನ ನಾಮಸ್ಮರಣೆ ಮಾಡುವದರಿಂದ ದುಖವೆಲ್ಲಾ ದೂರವಾಗಿ ಜೀವನವೆಲ್ಲಾ ಆನಂದಮಯವಾಗುತ್ತದೆ ಎಂದರು.

ಕನಕಮ್ಮಾ ದೇವಿ ಮೂತರ್ಿಯನ್ನು ಸುಮಂಗಲಿಯರ ಕುಂಭ ಮೇಳ, ಜಾಂಝ್ ಪಥಕ, ಬಜನೆ ಹಾಗೂ ಬಾಜಾ ಬಜಂತ್ರಿಯೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಲಾಯಿತು. ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.ಮೂಕಪ್ಪ ಸಿಕ್ಕಲಿ, ಕನಕಪ್ಪ,  ಪರಸಪ್ಪ, ಇಮ್ಮಣ್ಣಾ, ಮಂಜುನಾಥ, ನಬೀ, ಯಲ್ಲಪ್ಪ, ದುರ್ಗಪ್ಪ, ಅನೀಲ. ನಾಗೇಶ ಹಾಗೂ ಸಮಾಜ ಬಾಂಧವರು ಮತ್ತು ಗ್ರಾಮಸ್ಥರು ಇದ್ದರು.