ಶಾಲೆಯಲ್ಲಿ ಕನಕದಾಸ ಜಯಂತಿ ಆಚರಣೆ
Kanakadasa Jayanti celebration in school
ಸವಣೂರು 11 :ತಾಲೂಕಿನ ಯಲವಿಗಿ ತಾಂಡದ ಸ.ಹಿ.ಪ್ರಾ.ಶಾಲೆಯಲ್ಲಿ ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕುಮಾರ ನಾಯಕ ಮಾತನಾಡಿ ಕನಕದಾಸರ ಹೆಸರು ತಿಮ್ಮಪ್ಪನಾಯಕ,ತಂದೆ ಬೀರ್ಪನಾಯಕ,ತಾಯಿ ಬಚ್ಚಮ್ಮ. ಅವರು ಹುಟ್ಟಿದ್ದು ನಮ್ಮ ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ. ಬಂಕಾಪೂರದಲ್ಲಿ ಶ್ರೀನಿವಾಸಾಚಾರ್ಯರಲ್ಲಿ ಶಿಕ್ಷಣ ಪಡೆದರು.ಕನಕದಾಸರು ಯುದ್ಧವೊಂದರಲ್ಲಿ ಸೋತು ವೈರಾಗ್ಯ ಉಂಟಾಗಿ,ಎಲ್ಲವನ್ನೂ ತ್ಯಜಿಸಿ ಸಮಾಜ ಸುಧಾರಣೆಗಾಗಿ ಲೋಕ ಸಂಚಾರ ಮಾಡಿದರು.ಇವರ ಅಂಕಿತನಾಮ ಆದಿಕೇಶವ ಕನಕದಾಸರು ರಚಿಸಿರುವ ಕೃತಿಗಳು ಹರಿ-ಭಕ್ತಿಸಾರ, ರಾಮಧ್ಯಾನ ಚರಿತೆ, ಮೋಹನ ತರಂಗಿಣಿ, ಮತ್ತು ನಳ್ಳಚರಿತ್ರೆ ಇವಲ್ಲದೆ ನೂರಾರು ಕೀರ್ತನೆಗಳು ಉಗಾಭೋಗ, ಸುಳಾದಿಗಳು ಮತ್ತು ಮಂಡಿಗೆಗಳಷ್ಟ ರಚಿಸಿದ್ದಾರೆ. ಕನಕದಾಸರು ಮತ್ತು ಪ್ರರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ ಎಂದರು.
ಶಿಕ್ಷಕ ಎಫ್ ಆರ್ ಹಿರೇಮಠ ಮಾತನಾಡಿದರು.ದೈಹಿಕ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಆಯ್ ಎಸ್ ಮುದಗಲ್ ಮಕ್ಕಳಿಗೆ ವಂದೇ ಮಾತರಂ ಗೀತೆಯನ್ನು ರಾಗಬದ್ಧವಾಗಿ ಹೇಳಿಸಿದರು.ಕಾರ್ಯಕ್ರಮದಲ್ಲಿ ಮುಖಂಡರಾದ ನಾಗಪ್ಪ ಚವ್ಹಾಣ,ಶಾಲಾ ಉಪಾಧ್ಯಕ್ಷೆ ಸೀತವ್ವ ಲಮಾಣಿ,ಸುನೀತಾ ಲಮಾಣಿ,ಲಿಂಗರಾಜ, ಪ್ರ.ಗು ಎಸ್ ಎನ್ ಶಿಡೇನೂರ, ರತ್ನಾ.ಯರಗಲ್, ಶ್ರೀರೇಖಾ ಕೆರೂರ,ನಡಕಟ್ಟಿನ ಪದ್ಮಾ ಮತ್ತು ಶಾಲಾ ಮಕ್ಕಳು ಹಾಜರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 