ಡಿ. 28ರಂದು ಕನಕದಾಸರ ಅದ್ದೂರಿ ಜಯಂತೂತ್ಸವ
Kanakadasa's grand birth anniversary to be celebrated on December 28th
ಸಿಂದಗಿ 26 : ಪಟ್ಟಣದಲ್ಲಿ ಡಿ. 28ರಂದು ಅದ್ದೂರಿಯಾಗಿ ಜರುಗಲಿರುವ ಸಂತ ಶ್ರೇಷ್ಠ ಕನಕದಾಸರ 538 ನೇ ಜಯಂತೂತ್ಸವ ಕಾರ್ಯಕ್ರಮದಲ್ಲಿ ಆಲಮೇಲ ಹಾಗೂ ಸಿಂದಗಿ ತಾಲೂಕಿನ ಹಾಲುಮತ ಸಮುದಾಯದ ಹಿರಿಯರು ಯುವಕರು ಹಾಗೂ ಕನಕದಾಸರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಬೇಕು ಎಂದು ತಾಲೂಕು ಕುರುಬ ಸಂಘದ ಅಧ್ಯಕ್ಷ ನಿಂಗಣ್ಣ ಬುಳ್ಳಾ ಕರೆ ನೀಡಿದ್ದಾರೆ. ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು ರವಿವಾರ ಬೆಳಿಗ್ಗೆ 11 ಘಂಟೆಗೆ ಶ್ರೀ ಕನಕದಾಸ ವೃತ್ತದಿಂದ ಮೆರವಣಿಗೆ ಪ್ರಾರಂಭವಾಗಿ ಸ್ವಾಮಿ ವಿವೇಕಾನಂದ ವೃತ್ತದಿಂದ ಡಾ ತೊಂಟದ ಸಿದ್ದಲಿಂಗ ಮಹಾಸ್ವಾಮಿಗಳ ರಸ್ತೆ ಮಾರ್ಗವಾಗಿ ತೆರಳಿ ಟೀಪು ಸುಲ್ತಾನ್ ಸರ್ಕಲ್‌ದಿಂದ ಡಾ, ಅಂಬೇಡ್ಕರ್ ವೃತ್ತ ಪತ್ರಿಕಾ ಭೀಷ್ಮ ರೆ.ಚ ರೇವಡಿಗಾರ ರಸ್ತೆ ಮಾರ್ಗವಾಗಿ ಸಂಗೊಳ್ಳಿ ರಾಯಣ್ಣ ವೃತ್ತ ಬಸವೇಶ್ವರ ವೃತ್ತ ದಿಂದ ಮಾಜಿ ಸಚಿವ ಎಂ.ಸಿ.ಮನಗೂಳಿ ರಸ್ತೆ ಮೂಲಕ ಸಂಗಮೇಶ್ವರ ಮಂದಿರದ ವರೆಗೆ ವಿವಿಧ ಕಲಾವಿದರಿಂದ ಡೊಳ್ಳು ಕುಣಿತ, ಕುದುರೆ ಕುಂಭಮೇಳದೊಂದಿಗೆ ತಲುಪಿ ಸಾಯಂಕಾಲ 4 ಘಂಟೆಗೆ ಬಹಿರಂಗ ವೇದಿದೆ ಮೇಲೆ ವಿವಿಧ ಕಾರ್ಯಕ್ರಮ ಜಾರುಗಲಿವೆ ವೇದಿಕೆ ಮೇಲೆ ಅಭಿನವ ಪುಂಡಲಿಂಗ ಮಹಾರಾಜರು ಗೋಳಸಾರ, ಹುಲಜಂತಿ ಪಟ್ಟದ ಪೂಜ್ಯರಾದ ಮಹಾಲಿಂಗ ಮಹಾರಾಜರು, ಕನ್ನಯ್ಯ ಮಹಾರಾಜರು ಗುಬ್ಬೆವಾಡ, ಸೋಮರಾಯ ಪೂಜ್ಯರು ಬಳಗಾನೂರ, ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ಶಾಸಕ ಶರಣಪ್ಪ ಸುಣಗಾರ, ತಾಲೂಕ ಕುರುಬ ಸಂಘದ ಅಧ್ಯಕ್ಷರು ನಿಂಗಣ್ಣ ಬುಳ್ಳಾ, ತಹಸೀಲ್ದಾರ್ ಕರೆಪ್ಪ ಬೆಳ್ಳಿ,ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಬಾಗವಹಿಸಲಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 