ಕಂಪ್ಲಿ ಪಟ್ಟಣದಲ್ಲಿ ಫೆ 11ಮತ್ತು 12 ರಂದು ಕಂಪ್ಲಿ ಉತ್ಸವ
Kampli Festival on Feb 11th and 12th in Kampli town
ಲೋಕದರ್ಶನ ವರದಿ
ಕಂಪ್ಲಿ ಪಟ್ಟಣದಲ್ಲಿ ಫೆ 11ಮತ್ತು 12 ರಂದು ಕಂಪ್ಲಿ ಉತ್ಸವ
ಕಂಪ್ಲಿ 04: ಪಟ್ಟಣದ ಸುಂದರಿ ಶುಗರ್ಸ್ ಸಕ್ಕರೆ ಕಾರ್ಖಾನೆ ಅವರಣದ ಆಂಜನೇಯ ದೇವಸ್ಥಾನ ಮುಂಭಾಗದ ವಿಶಾಲ ಮೈದಾನದಲ್ಲಿ ಫೆ.11 ಮತ್ತು 12ರಂದು 'ಕಂಪ್ಲಿ ಉತ್ಸವ' ನಡೆಯುವ ಪ್ರಯುಕ್ತ ಮಂಗಳವಾರ ಸ್ವಚ್ಛತಾ ಕಾರ್ಯ ಶುರುವಾಯಿತು.ಉತ್ಸವ ಪೂರ್ವ ಸಿದ್ಧತೆ ಭರದಿಂದ ನಡೆಯುತ್ತಿದೆ. ಪುರಸಭೆ ಎಂಜಿನಿಯರ್ ಪಿ. ತೇಜಸ್ವಿನಿ, ಆರೋಗ್ಯ ನೀರೀಕ್ಷಕ ಪ್ರಕಾಶ್‌ಬಾಬು, ಮುಖಂಡರಾದ ಸಿ.ಆರ್. ಹನುಮಂತ, ಬಿ. ಸಿದ್ದಪ್ಪ, ಕೆ. ಷಣ್ಮುಖಪ್ಪ, ಶಾಸಕರ ಆಪ್ತ ಕಾರ್ಯದರ್ಶಿ ವಿರುಪಾಕ್ಷಿ ಸ್ಥಳದಲ್ಲಿದ್ದು, ನೈರ್ಮಲ್ಯ ಸೇರಿದಂತೆ ಇತರೆ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಿರುವು-ದು ಕಂಡುಬಂತು.ತೋರಣಗಲ್ಲು ಡಿವೈಎಸ್‌ಪಿ ಪ್ರಸಾದ್ ಗೋಖಲೆ, ತಹಶೀಲ್ದಾರ್ ಜೂಗಲ ಮಂಜುನಾಯಕ, ಪಿಐ ಕೆ.ಬಿ. ವಾಸುಕುಮಾರ್, ಪ್ರಭಾರ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದರು.ಅಧಿವೇಶನದಲ್ಲಿ ಭಾಗವಹಿಸಿರುವ ಶಾಸಕ ಜೆ.ಎನ್. ಗಣೇಶ್ ಬೆಂಗಳೂರಿನಿಂದ ಬಂದ ನಂತರ ದಿನಾಂಕ, ಉತ್ಸವದ ಕಾರ್ಯಕ್ರಮಗಳ ಸಮಗ್ರ ರೂಪುರೇಷೆ ಕುರಿತು ಸ್ಪಷ್ಟ ಚಿತ್ರಣ ನೀಡಲಿದ್ದಾರೆ' ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಸ್ಪಷ್ಟಪಡಿಸಿದರು.
ಫೆ0 03ಕಂಪ್ಲಿ ಉತ್ಸವ' ನಡೆಯುವ ಪ್ರಯುಕ್ತ ಮಂಗಳವಾರ ಸ್ವಚ್ಛತಾ ಕಾರ್ಯ ಶುರುವಾಯಿತು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 