ಕಂಪ್ಲಿ: ಜ.2ರಂದು ಬುಕ್ಕಸಾಗರ ಕರಿಸಿದ್ದೇಶ್ವರ ತಾತನ ರಥೋತ್ಸವ
ಲೋಕದರ್ಶನ ವರದಿ
ಕಂಪ್ಲಿ 20: ಪ್ರತಿಯೊಬ್ಬರುಪುರಾಣ ಆಲಿಸುವುದರಿಂದ ಮಾನಸಿಕ.ಮತ್ತು ಧೈಹಿಕವಾಗಿ ಆರೋಗ್ಯವಾಗಿರಲು ಸಾಧ್ಯ ಎಂದು ಬುಕ್ಕಸಾಗರ ಕರಿಸಿದ್ದೇಶ್ವರ ಸಂಸ್ಥಾನ ಮಠದ ವಿಶ್ವರಾಧ್ಯ ಶಿವಾಚಾರ್ಯರು ಹೇಳಿದರು.ಸಮೀಪದ ಬುಕ್ಕಸಾಗರದ ಕರಿಸಿದ್ದೇಶ್ವರ ಮಠದಲ್ಲಿ ಬುಧವಾರ ಕರಿಸಿದ್ದೇಶ್ವರ ಪುರಾಣ ಪ್ರವಚನಕ್ಕೆ ಚಾಲನೆ ನೀಡಿ, ಮಾತನಾಡಿದರು ಪ್ರವಚಕಾರ ನಿಲೋಗಲ್ನ ಶಿವನಾಗಯ್ಯಸ್ವಾಮಿ ಸಂಗೀತ ವಾಚಕ ಲಿಂಗಸೂಗೂರಿನ ಶಾಂತನಂದ ಗವಾಯಿಗಳು, ತಬಲ ವಾದಕ ಬಳ್ಳಾರಿಯ ಸುರೇಶ್, ಪಾಠಶಾಲೆ ಪ್ರಾಚಾರ್ಯ ಎಂ.ಎಸ್.ಶಶಿಧರಶಾಸ್ತ್ರಿಗಳು, ದಾನಶೆಟ್ಟಿ ಶಿವನಾಗಪ್ಪ, ಎಸ್.ಡಿ.ಬಸವರಾಜ, ಬುಕ್ಕಸಾಗರ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಸದ್ಭಕ್ತರು ಇದ್ದರು.
ರಥೋತ್ಸವ: ಕರಿಸಿದ್ದೇಶ್ವರ ತಾತನವರ 7ನೇವರ್ಷದ ಪುಣ್ಯಸ್ಮರಣೋತ್ಸವ ಅಂಗವಾಗಿ ಡಿ.18ರಿಂದ ಜ.1 ರವರೆಗೆ ಪ್ರತಿದಿನ ಸಂಜೆ 6.30ರಿಂದ ಶ್ರೀಕರಿಸಿದ್ದೇಶ್ವರ ಪುರಾಣ ಪ್ರವಚನ ಜರುಗಲಿದೆ. ಡಿ.22ರಂದು ಶಿವದೀಕ್ಷೆ(ಅಯ್ಯಾಚಾರ)ನಡೆಯಲಿದ್ದು, ಜ.1ರಂದು ಬೆಳಿಗ್ಗೆ 7ಗಂಟೆಗೆ ಶ್ರೀಗಳ ಭಾವಚಿತ್ರ, ಪುರಾಣ ಮೆರವಣಿಗೆ, ಸಂಜೆ 6ಗಂಟೆಗೆ ಪೂಜ್ಯರ ಸಮ್ಮುಖದಲ್ಲಿ ಪುರಾಣ ಮಹಾ ಮಂಗಲಗೊಳ್ಳಲಿದೆ. ಸಂಜೆ 7ಗಂಟೆಗೆ ತಾತನ ಮುತ್ತಿನ ಪಲ್ಲಕ್ಕಿ ಉತ್ಸವ, ಭರತ ನಾಟ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಜ.2 ರಂದು ಬೆಳಿಗ್ಗೆ 5ಗಂಟೆಗೆ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಬೆಳಿಗ್ಗೆ 10.45 ಗಂಟೆಗೆ ಸಾಮೂಹಿಕ ವಿವಾಹಗಳು ಜರುಗುತ್ತವೆ. ಪಾಲ್ಗೊಳ್ಳುವ ವಧುವರರು ಡಿ.20 ರೊಳಗೆ ಹೆಸರು ನೋಂದಾಯಿಸಬೇಕು. ಬೆಳಿಗ್ಗೆ 11.30ಗಂಟೆಗೆ ಧಾಮರ್ಿಕಸಭೆ ಜರುಗಲಿದ್ದು ಉಜ್ಜಯಿನಿ ಜಗದ್ಗುರು ಸಿದ್ದಲಿಂಗರಾಜ ದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ದಿವ್ಯಸಾನ್ನಿಧ್ಯವಹಿಸಲಿದ್ದಾರೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 