ಕಂಬಿ ಮಲ್ಲಯ್ಯ ಮಹಾಲಿಂಗಪುರ ಪುರ ಪ್ರವೇಶ ! ಪಟ್ಟಣದ ಅಲ್ಲಲ್ಲಿ ಉಪಹಾರ ದಾಸೋಹ

ಕಂಬಿ ಮಲ್ಲಯ್ಯ ಮಹಾಲಿಂಗಪುರ ಪುರ ಪ್ರವೇಶ ! ಪಟ್ಟಣದ ಅಲ್ಲಲ್ಲಿ ಉಪಹಾರ ದಾಸೋಹ  Kambi Mallaiah enters Mahalingapuram! Breakfast is served all over the town

ಲೋಕದರ್ಶನ ವರದಿ 

ಮಹಾಲಿಂಗಪುರ 05 : ಒಂದು ತಿಂಗಳಿಗೂ ಹೆಚ್ಚಿನ ಕಾಲ ಪಾದಯಾತ್ರೆ ಮೂಲಕ ಶ್ರೀಶೈಲಕ್ಕೆ ತೆರಳಿದ ಕಂಬಿ ಮಲ್ಲಯ್ಯನಿಗೆ ಶ್ರೀ ಗುರು ಮಹಾಲಿಂಗೇಶ್ವರ ದೇವಸ್ಥಾನದ ರಾಜೇಂದ್ರ ಶ್ರೀಗಳು ಸೇರಿದಂತೆ ಸಹಸ್ರಾರು ಭಕ್ತರು ಪೂಜೆ ಪುನಸ್ಕಾರ ನೀಡಿ ಭಾನುವಾರ ಬೆಳಗಿನ ಜಾವ ಪಟ್ಟಣದೊಳಗೆ ಪುನಃ ಪುರ ಪ್ರವೇಶ ಮಾಡಿಕ್ಕೊಂಡರು. 

 ಪ್ರಸಕ್ತ ಸಾಲಿನ ಹೋಳಿ ಹಬ್ಬದ ಕರಿ (ಬಣ್ಣದಾಟ) ದಿನದಂದು ಬೆಳಗಿನ ಜಾವ ಮಹಾಲಿಂಗಪುರ ಪಟ್ಟಣದಿಂದ ಆಂಧ್ರದ ಸುಕ್ಷೇತ್ರ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ದರ್ಶನ ಹೊಂದಲು ಮಹಾಲಿಂಗೇಶ್ವರ ದೇವಸ್ಥಾನದ ಕಂಬಿ ಮಲ್ಲಯ್ಯನ ಜೊತೆಗೆ ಸಹಸ್ರ ಸಹಸ್ರ ಸಂಖ್ಯೆಯ ಸದ್ಭಕ್ತರು ಪಾದಯಾತ್ರೆಯನ್ನು ಕೈಗೊಂಡಿರುತ್ತಾರೆ. 

ಇವರೆಲ್ಲರೂ ಪರತ ಆಗಮಿಸಿ ಸಮೀಪದ ಗ್ರಾಮಗಳು ಮತ್ತು ಊರ ಹೊರಗಿನ ಹೊಲಗದ್ದೆಗಳಲ್ಲಿಯೇ ವಾಸ್ತವ್ಯ, ನಿಗದಿ ದಿನದಂದೇ ಪುರ ಪ್ರವೇಶ ಮತ್ತು ಗುರುವಾರವೇ ಕಂಬಿ ಮಲ್ಲಯ್ಯನಿಗೆ ವಿಜ್ರಂಭಣೆಯ ಐದೇಶಿ ಕಾರ್ಯಕ್ರಮ. ಸುಮಾರು 40 ದಿವಸಗಳಿಂದ ಸ್ಥಗಿತಗೊಂಡ ಶುಭ ಕಾರ್ಯಗಳೆಲ್ಲವೂ ಆರಂಭ.  

ದಾಸೋಹ: ಪುರ ಪ್ರವೇಶದ ಭಾನುವಾರ ರಂದು ಮಹಾಲಿಂಗಪುರ ಪಟ್ಟಣದ ಹಲವೆಡೆಗಳಲ್ಲಿ ದಶಕದಿಂದ ಮಲ್ಲಿಕಾರ್ಜುನ ನಗರದ ಶ್ರೀ ಗುರು ಮಲ್ಲಿಕಾರ್ಜುನ ದೇವಸ್ಥಾನ, ಅವರಾದಿ ಪೆಟ್ರೋಲ್ ಬಂಕ್ ಮತ್ತು ಇನ್ನಿತರ ಕಡೆಗಳಲ್ಲಿ ಸದ್ಭಕ್ತರು ಉಪಹಾರದ ವ್ಯವಸ್ಥೆ ಮಾಡಿ ತಮ್ಮ ಭಕ್ತಿಯನ್ನು ಸಮರ​‍್ಿಸುತ್ತಾರೆ. 

ಮಲ್ಲಿಕಾರ್ಜುನ ನಗರ ದೇವಸ್ಥಾನದಲ್ಲಿ ಉಪಹಾರದ ದಾಸೋಹ ಕಾರ್ಯದಲ್ಲಿ ಶಂಕರ ಕೋಳಿಗುಡ್ಡ, ವೀರಭದ್ರ ಗೌಡರ್, ಮಹಾದೇವ ಜಡಗನ್ನವರ, ಕಿರಣ ಗಜ್ಜರಗಾಂವ್ಕರ್, ಸಂತೋಷ ಕೋಳಿಗುಡ್ಡ, ಮುತ್ತುರಾಜ ಕಾಖಂಡಕಿ, ಬಸವರಾಜ ರಾವಳ, ಅಂಗಡಿ ಸರ್, ರಾಜು ಜಂಬಗಿ, ಯರಗಾಣಿ ಸರ್, ಮಲ್ಲು ಗೌಡವಾಡ,ಜಿ.ಎಸ್‌.ಚನ್ನಾಳ, ಪ್ರಕಾಶ ಮಮದಾಪುರ, ರಮೇಶ ಇಂಡಿ, ರಾಘವೇಂದ್ರ ಪತ್ತಾರ, ಅಮಿತ ಮದ್ದಿನಮಠ, ಪಟೇಲ ಶೇಡಜಿ, ಮಹೇಶ ತೇಲಿ, ಮೋನೇಶ್ ಬಡಿಗೇರ, ಶಂಕರ ಮಠಪತಿ, ನಾಗರಾಜ, ಸದಾಶಿವ ಮತ್ತು ಬಡಾವಣೆಯ ಹೆಣ್ಣು ಮಕ್ಕಳು, ಹಿರಿಯರು ಪಾಲ್ಗೊಂಡಿದ್ದರು. 

ಅವರಾದಿ ಪೆಟ್ರೋಲ್ ಬಂಕ್ ಮಾಲಿಕ ರಾಹುಲ್ ಅವರಾದಿ ಧರ್ಮ ಪತ್ನಿ ಸುಚೇತಾ ಅವರು ಸ್ವತಃ ತಮ್ಮ ಖರ್ಚಿನಲ್ಲಿ ಕುರುಹೀನ ಶೆಟ್ಟಿ ಸಮಾಜದ ಕಂಬಿ ಮಲ್ಲಯ್ಯನ ಸದ್ಭಕ್ತರಿಗೆ ಉಪಹಾರ ವ್ಯವಸ್ಥೆ ಮಾಡಿ ತಮ್ಮ ನಿಷ್ಠೆ ತೋರುತ್ತಾರೆ.ಈ ಸಂದರ್ಭದಲ್ಲಿ ಪಂಡಿತ ಪೂಜಾರ, ಸದಾಶಿವ ಗೊಬ್ಬರದ, ಡಾ.ಬಾಬುರಾವ ಆಲಬಾಳ,ಮೀರಾ ತಟಗಾರ, ಶಂಕರ ಕೋಳಿಗುಡ್ಡ,ರಾಜು ನಂದೆಪ್ಪನ್ನವರ, ರಮೇಶ ಗೋಲಭಾವಿ, ಮಹಾಲಿಂಗಪ್ಪ ಹೂಗಾರ, ಸಂಜು ಅಂಗಡಿ ಮತ್ತು ಸುರೇಶ ಮಿರ್ಜಿ ಸಾಕ್ಷಿಕರಿಸಿದರು.