ಕಂಪ್ಲಿಯಲ್ಲಿ ಕಾಳಿಕಾದೇವಿ ಗಂಗೆಸ್ಥಳ ಮೆರವಣಿಗೆ

ಕಂಪ್ಲಿಯಲ್ಲಿ ಕಾಳಿಕಾದೇವಿ ಗಂಗೆಸ್ಥಳ ಮೆರವಣಿಗೆ  Kalikadevi Gangasthala Procession in Kampli

ಲೋಕದರ್ಶನ ವರದಿ  

ಕಂಪ್ಲಿ, ಸೆ.04: ಪಟ್ಟಣದ 8 ಮತ್ತು 9ನೇ ವಾರ್ಡ್ಗಳ ಸಮೀಪದ ಶ್ರೀ ಕಾಳಿಕಾದೇವಿ (ಬನ್ನಿ ಮಹಾಂಕಾಳಿ) ಗಂಗೆಸ್ಥಳ ಮೆರವಣಿಗೆ ಶುಕ್ರವಾರ ಶ್ರದ್ಧಾಭಕ್ತಿಯಿಂದ ನಡೆಯಿತು.  ತುಂಗಭದ್ರಾ ನದಿ ದಂಡೆಯ ಕಂಪ್ಲಿ-ಕೋಟೆ ಪ್ರದೇಶದ ನದಿಯಲ್ಲಿ ಗಂಗೆಪೂಜೆ ನೆರವೇರಿಸಿದ ಬಳಿಕ ದೇವಿಯ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ನಂತರ ನಡುಮಲ ಮಸೀದಿ, ಅಂಬೇಡ್ಕರ್ ವೃತ್ತದ ಮೂಲಕ ಜೇಸ್ಕಾಂ ಕಚೇರಿ ಮುಂಭಾಗದಲ್ಲಿರುವ ಕಾಳಿಕಾದೇವಿ ದೇವಸ್ಥಾನಕ್ಕೆ ತೆರಳಿ ಸಂಪನ್ನಗೊಂಡಿತು.  

ಮೆರವಣಿಗೆಯಲ್ಲಿ ಮಹಿಳೆಯರ ಭಜನಾ ತಂಡ, ಕಳಸ ಹಾಗೂ ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಿ ಮೆರುಗು ನೀಡಿದವು. ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ದೇವಿಯ ದರ್ಶನ ಪಡೆದರು.  ದೇವಸ್ಥಾನದಲ್ಲಿ ಅಭಿಷೇಕ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಭಕ್ತರನ್ನು ಆಕರ್ಷಿಸಿತು.  ಈ ಸಂದರ್ಭದಲ್ಲಿ ಪೂಜಾರಿ ಶಾಂತಪ್ಪ, ಈಶಪ್ಪ, ರಾಘು, ಮೈನುುದ್ದೀನ್, ಹುಲುಗಪ್ಪ, ಉಮೇಶ್ ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.