ರಾಂಮಲಿಂಗೇಶ್ವರ ದೇವಾಲಯದಲ್ಲಿ ಕಳಶ ಪ್ರತಿಷ್ಠಾಪನೆ; ಗ್ರಾಮದಲ್ಲಿ ಭಕ್ತಿಭಾವದ ಸಂಭ್ರಮ
Kalash installation at Ramalingeshwara temple; devotional celebrations in the village
ಕುಂದರಗಿ 24 : ಸೂರ್ಯ ಮುಳುಗು ಸಮಯ, ಮಹಿಳೆಯರ ಕೈಯಲ್ಲಿ ಆರತಿ, ಕುಂಭ, ರಸ್ತೆ ತುಂಬಾ ರಂಗೋಲಿ, ಎಲ್ಲರ ಹಣೆಯ ಮೇಲೆ ನಾಮ, ನಾವಲಗಿ ಶಹನಾಯಿ ಮಜಲು, ಶಿವ ಭಜನೆ , ಓಂ ನಮಃ ಶಿವಾಯ, ಘೋಷಣೆಗಳು ನೂರಾರು ಮಹಿಳೆಯರು ಕೈಯಲ್ಲಿ ಕುಂಭದೂಂದಿಗೆ ವಿಪ್ರ ಸಮಾಜ ಬಾಂಧವರು ಹಾಗೂ ಗ್ರಾಮದ ವಿವಿದ ಸಮಾಜ ಬಾಂಧವರು ಕೂಡಿ ನೂತನ ಮೂರ್ತಿಗಳ ಪುರ್ರವೇಶ ಅದ್ದೂರಿಯಾಗಿ ಮೆರವಣಿಗೆ ನಡೆಯಿತು. ಈ ಕಾರ್ಯಕ್ರಮದ ಮೊದಲು ವಾಸ್ತು ಹೋಮ ಮತ್ತು ದೇವತಾ ಪ್ರತಿಷ್ಠಾಪನೆ ನಿಮಿತ್ಯವಾಗಿ ವಿಪ್ರ ಸಮಾಜದವರು ಗ್ರಾಮದ ಹಿರಿಯರು ಸೇರಿ ಚಿಕ್ಕಸೆಲ್ಲಿಕೇರಿ ಮೂರ್ತಿಗಳ ತರಲಿಕ್ಕೆ ಹೋದರು ನಂತರ ಮೂರ್ತಿಗಳಿಗೆ ಪೂಜಿ ಸಲ್ಲಿಸಿದ ನಂತರ ಟ್ರಾಕ್ಟರ್ ಗಾಡಿಯಲ್ಲಿ ದೇವರ ಮೂರ್ತಿಗಳನ್ನು ಇಟ್ಟುಕೊಂಡು ಮರಳಿ ಗ್ರಾಮಕ್ಕೆ ತೆಗೆದುಕೊಂಡು ಬಂದರು.
ಸಾಯಂಕಾಲ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಿಪ್ರ ಸಮಾಜ ಪೂಜ್ಯರು ಸೇರಿ ರಾಮಲಿಂಗೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು ನಂತರ ಚರಂತಿಮಠದ ಪೂಜರನ್ನು ಸಾರೋಟದ ಮೇಲೆ ಕುಳಿತು ,ನೂತನ ಮೂರ್ತಿಗಳಾದ ಕಲ್ಮೇಶ್ವರ ಮೂರ್ತಿ, ನಂದಿ, ನಾಗದೇವತೆ, ಗಣಪತಿ ಮೂರ್ತಿಗಳು ರಾಮಲಿಂಗೇಶ್ವರ ದೇವಸ್ಥಾನದಿಂದ ಹೂರಟ ಮೆರವಣಿಗೆ ಮಹಿಳೆಯರ ಆರತಿ ಕುಂಭ ಶಿವ ಭಜನೆ ಸಕಲವಾಧ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳ ಮುಖಾಂತರ ಶೋಭಾಯಾತ್ರೆ ಕಲ್ಮೇಶ್ವರ ದೇವಸ್ಥಾನದವರೆಗೆ ನಡೆಯಿತು. ಗಣೇಶ ಜೋಶಿ ಗೋವಿಂದ ಜೋಶಿ ಅವರಿಂದ ವೇದಭೂಷಣ ಹೇಳಿದರು, ಕಲಾದಗಿ ಭಜನಾ ಮಂಡಳಿಯಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ವಿಪ್ರ ಸಮಾಜದ ಮುಖಂಡರಾದ ಪ್ರಾಣೇಶಾಚಾರ್ಯ ಕುಂದರಗಿ ಸುರೇಶರಾವ ಯಾದವಾಡ ಪ್ರಕಾಶ ಯಾದವಾಡ ಗುರುರಾಜ ಯಾದವಾಡ ರಂಗನಾಥ ಯಾದವಾಡ ಚಂದ್ರಕಾಂತಭಟ್ಟ ಜೋಶಿ ನಾರಾಯಣ ಜೋಶಿ ಶ್ರೀಪಾದ್ ಯಾದವಾಡ ರಾಘವೇಂದ್ರಭಟ್ಟ ಜೋಶಿ ಬಿ.ಎಚ್ ಕುಲಕರ್ಣಿ ವಕೀಲರು ಶಂಕರ ಖೋತ ಯಂಕಪ್ಪ ದರ್ಪನವರ ಚಿದಂಬರ ಶತಪತಿ ಮೇಘಾ ಶತಪತಿ ಶಶಿಕಲಾ ಕುಂದರಗಿ ವಿಜಯಾ ಜೋಶಿ ವಿದ್ಯಾ ಕುಲಕರ್ಣಿ ಗೀತಾ ಜೋಶಿ ಸಾನ್ವಿ ಗುಡಿ ಶಾರದಾ ಜೋಶಿ ಶ್ರೀನಿಧಿ ಯಾದವಾಡ ಮುಂತಾದವರು ಇದ್ದಾರೆ.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 