ಕಾಗವಾಡ ತಹಶೀಲ್ದಾರ ರಾಜೇಶ ಬುರ್ಲಿ ವರ್ಗಾವಣೆ
Kagwad Tehsildar Rajesh Burli transferred
ಕಾಗವಾಡ, 03 : ತಹಶೀಲ್ದಾರ ರಾಜೇಶ ಬುರ್ಲಿ ಇವರು ವರ್ಗಾವಣೆಗೊಂಡಿದ್ದು, ನೂತನ ತಹಶೀಲ್ದಾರರಾಗಿ ಚೆನ್ನಮ್ಮಾ ಕಿತ್ತೂರಿನ ತಹಶೀಲ್ದಾರ ರವೀಂದ್ರ ಹಾದಿಮನಿ ಇವರು ಅಧಿಕಾರ ಸ್ವೀಕರಿಸಿದರು.ಗುರುವಾರ ದಿ. 03 ರಂದು ತಹಶೀಲ್ದಾರ ರಾಜೇಶ ಬುರ್ಲಿ ಇವರು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ. ಕಳೆದ 4 ವರ್ಷಗಳಿಂದ ಕಾಗವಾಡ ತಹಶೀಲ್ದಾರರಾಗಿ ಸೇವೆ ಸಲ್ಲಿಸದ್ದರು. ಇವರು ಇಲ್ಲಿಯ ಹೊಸ ಪ್ರಜಾಸೌಧ ಕಟ್ಟಡಕ್ಕಾಗಿ, ನ್ಯಾಯಾಲಯ ಕಟ್ಟಡದ ಸ್ಥಳ ಮಂಜೂರಿಗಾಗಿ ವಿಶೇಷವಾಗಿ ಪ್ರಯತ್ನ ಮಾಡಿದ್ದಾರೆ.
ಕಾಗವಾಡ ನೂತನ ತಾಲೂಕಿನ ತಹಶೀಲ್ದಾರರಾಗಿ ಸೇವೆ ಸಲ್ಲಿಸುವ ಇಚ್ಛೆ ನನ್ನದಾಗಿತ್ತು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಇಲ್ಲಿಯ ಅಧಿಕಾರಿಗಳು, ಸ್ಥಳೀಯರು ಸಾಕಷ್ಟು ಸಹಕಾರ ನೀಡಿದ್ದಾರೆ ಎಂದರು.ಇವರನ್ನು ಕಾಗವಾಡ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರು, ಸನ್ಮಾನಿಸಿ, ಬಿಳ್ಕೋಟ್ಟರು. ಇದೇ ವೇಳೆ ನೂತನ ತಹಶೀಲ್ದಾರರಿಗೆ ಸನ್ಮಾನಿಸಿ, ಸ್ವಾಗತಿಸಿದರು.
ಈ ವೇಳೆ ಗ್ರೇಡ್-2 ತಹಶೀಲ್ದಾರ ರಷ್ಮಿ ಜಕಾತೆ, ಉಪತಹಶೀಲ್ದಾರ ಅಣ್ಣಾಸಾಹೇಬ ಕೋರೆ, ಸಿಡಿಪಿಓ ಸಂಜೀವಕುಮಾರ ಸದಲಗಿ, ತಾಲೂಕಿನ ಎಲ್ಲ ಗ್ರಾಮ ಆಡಳಿತಾಧಿಕಾರಿಗಳು, ರಾಜ್ಯ ನೌಕರರ ಸಂಘದ ಪದಾಧಿಕಾರಿಗಳು, ದಲಿತ ಮುಖಂಡ ಸಂಜಯ ತಳವಳಕರ, ರಮೇಶ ಚೌಗುಲೆ, ಶ್ರೀಶೈಲ ತುಗಶೆಟ್ಟಿ, ಕಾಕಾ ಪಾಟೀಲ, ಕೆ.ಆರ್. ಪಾಟೀಲ, ರಾಜುಗೌಡಾ ಪಾಟೀಲ, ಅಪ್ಪಾಸಾಬ ತೋಬರೆ, ಶಿರಿಷ ಪಾಟೀಲ, ಗೌಡಪ್ಪಾ ಸಡ್ಡಿ, ಶಿವಾನಂದ ನವಿನಾಳೆ, ಅಶೋಕ ನಾಂದಣಿ, ಸಚೀನ ಪಾಟೀಲ, ಕಿರಣ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್ 