ಅಹಂಕಾರದ ಅಟ್ಟಹಾಸಕ್ಕೆ ಕಡೂರು ಕಲಾತಂಡದ ‘ಚಾಟಿಯೇಟು’
Kadur art troupe's 'whip' at the hubbub of arrogance
ಗದಗ 23: "ಶ್ರಮವೇ ದೈವ" ಎಂದು ನಂಬಿ, ಜಗತ್ತಿನ ಸೌಂದರ್ಯ ಮತ್ತು ನೈರ್ಮಲ್ಯಕ್ಕಾಗಿ ತನ್ನ ಬದುಕನ್ನೇ ಅರ್ಿಸುವ ಸವಿತಾ ಸಮಾಜವನ್ನು ಕೀಳಾಗಿ ಕಾಣುವವರಿಗೆ ಕಡೂರಿನ ಪ್ರಭಾವಿ ಉದ್ಯಮಿಗಳಾದ ಜಿಮ್ ಚೇತನ್, ಹಾಗೂ ಕಡೂರು ಪುರಸಭೆಯ ಜನಪ್ರಿಯ ಸದಸ್ಯರಾದ ಮರುಗುದ್ದಿ ಮನು,ರವರ ತಂಡ ಸಿದ್ಧಪಡಿಸಿರುವ ಕಿರುಚಿತ್ರವು ಕೇವಲ ಕಲೆಯಲ್ಲ, ಅದೊಂದು ’ಸಾಮಾಜಿಕ ಕ್ರಾಂತಿಯ ಕಿಡಿ’ ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರು ಗುಡುಗಿದ್ದಾರೆ.
ಅಹಂಕಾರಕ್ಕೆ ಕತ್ತರಿ - ಸ್ವಾಭಿಮಾನದ ಎಚ್ಚರಿಕೆ: "ಹಣ ಮತ್ತು ರಾಜಕೀಯ ಮದ ಹಾಗೂ ಜಾತಿಯ ಅಹಂಕಾರದಿಂದ ಸವಿತಾ ಸಮಾಜದ ವಿರುದ್ಧ ನಿಷೇಧಿತ ಪದ ಬಳಸಿ ಮೆರೆಯುವವರಿಗೆ ಈ ಚಿತ್ರ ಕಾಲದ ಕನ್ನಡಿ ಹಿಡಿದಿದೆ. ಕ್ಷೌರಿಕನೊಬ್ಬ ತನ್ನ ಕತ್ತರಿ-ಬ್ಲೇಡ್ ಕೆಳಗಿಟ್ಟರೆ, ಎಂತಹ ಪ್ರಭಾವಿ ವ್ಯಕ್ತಿಯೂ ಕೇವಲ ಒಂದು ವರ್ಷದಲ್ಲಿ ತನ್ನ ಮನುಷ್ಯ ರೂಪ ಕಳೆದುಕೊಂಡು ’ವಿಕಾರ ಪ್ರಾಣಿ’ಯಾಗುತ್ತಾನೆ ಎಂಬ ಸತ್ಯವು, ಸಮಾಜದ ಅನಿವಾರ್ಯತೆಯನ್ನು ಜಗತ್ತಿಗೆ ಸಾರಿದೆ. ಶ್ರಮಿಕನ ಕೈಯಲ್ಲಿರುವ ಕತ್ತರಿ ಕೇವಲ ಸೌಂದರ್ಯ ವರ್ಧಕವಲ್ಲ, ಅದು ಅಹಂಕಾರವನ್ನು ಸವರಿ ಹಾಕುವ ಅಸ್ತ್ರವೂ ಹೌದು ಎಂಬುದನ್ನು ಈ ಚಿತ್ರ ಸಾಬೀತುಪಡಿಸಿದೆ."
ಶ್ರಮಿಕ ವರ್ಗದ ಒಗ್ಗಟ್ಟಿನ ಶಕ್ತಿ: "ಬಡ್ಡಿ ದಂಧೆಕೋರನ ಪಾತ್ರದಲ್ಲಿ ಪ್ರಭಾವಿ ಉದ್ಯಮಿಗಳಾದ ಜಿಮ್ ಚೇತನ್ ಮತ್ತು ಸ್ವಾಭಿಮಾನಿ ಕ್ಷೌರಿಕನಾಗಿ ಕಡೂರು ಪುರಸಭೆಯ ಜನಪ್ರಿಯ ಸದಸ್ಯರಾದ ಮರುಗುದ್ದಿ ಮನು ಅವರ ನಟನೆ ಪ್ರತಿಯೊಬ್ಬ ಅಹಂಕಾರಿಯ ಕಣ್ಣು ತೆರಿಸುವಂತಿದೆ. ತೋಳುಬಲ, ಹಣಬಲದ ಮುಂದೆ ಬಗ್ಗದ ಸಮಾಜದ ಒಗ್ಗಟ್ಟು, ಕೊನೆಗೆ ಅಹಂಕಾರಿಯನ್ನು ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಮಾಡಿದ್ದು ಶ್ರಮಿಕ ವರ್ಗದ ನೈಜ ಗೆಲುವು. ಈ ಕಿರುಚಿತ್ರವು ’ಗೌರವ ನೀಡದವರಿಗೆ ಸೇವೆ ನಿಷೇಧ’ ಎಂಬ ಕ್ರಾಂತಿಕಾರಿ ಸಂದೇಶವನ್ನು ರವಾನಿಸಿದೆ."
ನಿಸ್ವಾರ್ಥ ಬೆಂಬಲಕ್ಕೆ ಸಾಷ್ಟಾಂಗ ನಮನ: "ಸವಿತಾ ಸಮಾಜದವರಲ್ಲದಿದ್ದರೂ, ಸಮಾಜ ಅನುಭವಿಸುತ್ತಿರುವ ನೋವನ್ನು ಅರಿತು, ಸ್ವಂತ ಹಿತಾಸಕ್ತಿ ಬದಿಗಿಟ್ಟು ನಟಿಸಿದ ಜಿಮ್ ಚೇತನ್, ಮರುಗುದ್ದಿ ಮನು, ಫೈನಾನ್ಸ್ ಮಂಜು, ಮನು, ಅಭಿಷೇಕ್ ಮತ್ತು ದರ್ಶನ್ ಅವರ ಸಾಮಾಜಿಕ ಬದ್ಧತೆ ಮೆಚ್ಚುವಂತದ್ದು. ಈ ಕಲಾತಂಡಕ್ಕೆ ಗದಗ ಜಿಲ್ಲಾ ಸವಿತಾ ಸಮಾಜವು ಸಾಷ್ಟಾಂಗ ನಮನಗಳನ್ನು ಸಲ್ಲಿಸುತ್ತದೆ." ಕಡೆಯ ಮಾತು - ಕ್ರಾಂತಿಕಾರಿ ಎಚ್ಚರಿಕೆ:* "ಸಮಾಜದ ಬಾಂಧವರನ್ನು ಕೀಳಾಗಿ ಕಾಣುವ ಪ್ರವೃತ್ತಿ ಇಂದಿಗೇ ಕೊನೆಯಾಗಲಿ. ಶ್ರಮಿಕನ ಮೌನವನ್ನು ಅಸಹಾಯಕತೆ ಎಂದು ಭಾವಿಸಬೇಡಿ; ಕ್ಷೌರಿಕನ ವೃತ್ತಿ ಇಲ್ಲದಿದ್ದರೆ ಮನುಷ್ಯನು ಕಾಡುಪ್ರಾಣಿಯಂತಾಗುತ್ತಾನೆ ಎಂಬ ನಗ್ನಸತ್ಯವನ್ನು ಅರಿತು ಗೌರವದಿಂದ ವರ್ತಿಸಿ. ಇಲ್ಲವಾದರೆ ಪ್ರಕೃತಿಯೇ ನಿಮಗೆ ಶಿಕ್ಷೆ ನೀಡಲಿದೆ," ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಹಾಗೂ ಕರ್ನಾಟಕ ರಾಜ್ಯ ಸವಿತಾ ಸಮಾಜದ ರಾಜ್ಯ ನಿರ್ದೇಶಕರಾದ ಕಡೂರು ರವಿಕುಮಾರ ಕಟುವಾಗಿ ಎಚ್ಚರಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 