ಮಾ. 25ರಿಂದ ಕಡಣಿ ಭೋಗಲಿಂಗೋಶ್ವರ ಜಾತ್ರಾ ಮಹೋತ್ಸವ
Kadani Bhogalingoshwara Fair to be held from 25th March
ಲೋಕದರ್ಶನ ವರದಿ
ಆಲಮೇಲ 24: ತಾಲೂಕಿನ ಸಮಿಪದ ಕಡಣಿ ಗ್ರಾಮದ ಭೋಗಲಿಂಗೋಶ್ವರ ಜಾತ್ರಾಮಹೋತ್ಸವ ದಿ. ಮಾ. 25ರಿಂದ-27ರವರೆಗೆ ಸಂಭ್ರಮದಿಂದ ಜಾತ್ರೆ ನಡೆಯುವದು.
ದಿ. 25ರಂದು ದೇವರಿಗೆ ಬೆಳಿಗ್ಗೆ ಮಹಿಳೆಯರಿಂದ ಕುಂಭಾಬಿಷೇಕ ಬಳಿಕ ಲಿಂಗಕ್ಕೆ ಬಿಲ್ವಾರ್ಚನೆ ವಿಶೇಷ ಪೂಜೆ ಕೈಕಂರ್ಯಗಳು ಧಾರ್ಮಿಕ ಆಚರಣೆಗಳು ಸಾಗಿಬರುತ್ತವೆ' 26ರಂದು ಭೋಗಲಿಂಗೇಶ್ವರ ಪಲ್ಲಕಿ ಉತ್ಸವ ನಡೆಯುವದು. ಮಾರ್ಚ 27ರಂದು ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಸಭೆಯು ನಾಡಿನ ವಿವಿಧ ಮಠಾಧಿಶರು, ಸ್ವಾಮಿಜಿಗಳ ಸಾನಿಧ್ಯದಲ್ಲಿ ವಿವಿಧ ಕಾರ್ಯಕ್ರಮಗಳು ಸಾಗಿ ಬರುವವು. ಸಾಯಂಕಲ ಕುಸ್ತಿಗಳು ನಡೆಯುತ್ತವೆ, ಸಂಜೆ ರಥೋತ್ಸವ ನಡೆಯುವದು. ಸ್ಥಳೀಯ ಕಲಾವಿದರಿಂದ ನಾಟಕ ಪ್ರದರ್ಶನ ನಡೆಯುವದು. ದನಗಳ (ರಾಸುಗಳ) ಜಾತ್ರೆ ಆಯೋಜಿಸಲಾಗಿದ್ದು ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಮಾಡಲಾಗುವುದು. ಸುತ್ತ ಮುತ್ತಲ್ತಿನ ಗ್ರಾಮೀಣ ಜನರು ಸಾಗರದಂತೆ ಬರುವರು. ವಿಜಯಪೂರ ಜಿಲ್ಲೆಯ ರಾಜಕೀಯ ಮುಖಂಡರು, ಗಣ್ಯರು ಭಾಗವಹಿಸಿ ದೇವರ ದರ್ಶನ ಪಡೆಯುವರು.
ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರಗುವದು. ಗ್ರಾಮದ ಗಣ್ಯರಾದ ವೀರಭದ್ರ ಕತ್ತಿ ಯವರ ನೇತೃತ್ವದಲ್ಲಿ ದಾಸೋಹ ಸೇವೆ ನಡೆಯುವದು.
ದಿ. 4ರಂದು ಶರಣ ಬಸವೇಶ್ವರ ಪುರಾಣ ಪ್ರವಚನ ಆರಂಭ, 27ರಂದು ಮಹಾಮಂಗಲ ಇಲ್ಲಿನ ಗುರು ಸಂಸ್ಥಾನ ಚಂದ್ರಶೇಖರ ಶ್ರೀಗಳ ಅರ್ಜಣಿಗಿ ಮಠದ ಸಂಗನಬಸವ ಶ್ರೀಗಳು ಸಮ್ಮೂಖದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯುವವು. ಕಮಿಟಿ ಅಧ್ಯಕ್ಷ ಸಂತೋಷ ಕ್ಷೇತ್ರಿ ಪ್ರಕಟಣೆಗೆ ತಿಳಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 