ಬೆಂಗಳೂರು,
ಏ 18,ಸಿಬ್ಬಂದಿಯೊಂದಿಗೆ ಸನ್ನದ್ದರಾಗಿರಿ ಎಂದು ಕೆಎಸ್ಆರ್ ಟಿಸಿ
ಸೇರಿದಂತೆ ನಾಲ್ಕೂ ನಿಗಮಗಳ ಅಧಿಕಾರಿಗಳಿಗೆ ಸರ್ಕಾರದಿಂದ ಸ್ಪಷ್ಟ ಸಂದೇಶ ಬಂದ
ಹಿನ್ನೆಲೆಯಲ್ಲಿ ನಾಲ್ಕು ವಿಭಾಗಗಳಲ್ಲಿ ಸಿಬ್ಬಂದಿ ಇಂದು ಕಚೇರಿಗೆ ಹಾಜರಾಗಿದ್ದಾರೆ.ರಾಜ್ಯದಲ್ಲಿ
ಹಾಟ್ ಸ್ಪಾಟ್ ಹೊರತುಪಡಿಸಿ ಸಾರಿಗೆ ಸಂಚಾರ ಆರಂಭ ಸಾಧ್ಯತೆಯ ಹಿನ್ನೆಲೆಯಲ್ಲಿ
ನೌಕರರು ಯಾವುದೇ ಸಂದರ್ಭದಲ್ಲಿ ಕೆಲಸ ಮಾಡಲು ಸಿದ್ಧರಾಗಿದ್ದಾರೆ.ಎರಡನೇ ಹಂತದ ಲಾಕ್
ಡೌನ್ ಏಪ್ರಿಲ್ 20 ರಂದು ಅವಲೋಕನೆಗೊಳಪಡಲಿದ್ದು, ನಂತರ ಹಂತ ಹಂತವಾಗಿ ಸಾರಿಗೆ ಬಸ್
ಗಳನ್ನು ರೆಡ್ ಝೋನ್ ಹೊರತುಪಡಿಸಿ ಇತರೆ ಝೋನ್ ಗಳಲ್ಲಿ ಅಗತ್ಯಕ್ಕೆ ತಕ್ಕಂತೆ
ರಸ್ತೆಗಿಳಿಸುವ ಸಾಧ್ಯತೆ ಇದೆ. ಕೆಎಸ್ಆರ್ ಟಿಸಿಯ ಎಲ್ಲಾ ವರ್ಗಗಳ ಸಿಬ್ಬಂದಿಗಳನ್ನು
ನಾಳೆಯಿಂದಲೇ ಕಚೇರಿಗೆ ಆಗಮಿಸುವಂತೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಎರಡು
ದಿನಗಳ ಹಿಂದೆ ನಿರ್ದೇಶನ ನೀಡಿದ್ದರು. ಕೇಂದ್ರ ಕಚೇರಿ, ವಿಭಾಗೀಯ ಕಚೇರಿ, ಮುದ್ರಣಾಲಯ,
ತರಬೇತಿ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ವರ್ಗದ
ಸಿಬ್ಬಂದಿ ಕೂಡಲೆ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಿದ್ದರು. ಅದರಂತೆ ಎಲ್ಲಾ
ವಿಭಾಗಗಳ ಸಿಬ್ಬಂದಿ ಇಂದು ಹಾಜರಾಗಿ, ಮುಂದಿನ ಸೂಚನೆಗಾಗಿ ಕಾಯುತ್ತಿದ್ದಾರೆ.ಇಲಾಖೆಯನ್ನು
ಸರ್ಕಾರ ಅಗತ್ಯ ಸೇವೆ ಎಂದು ಪರಿಗಣಿಸಿದೆ. ಅತೀ ಅವಶ್ಯಕತೆ ಕಂಡು ಬಂದಲ್ಲಿ ವಾಹನಗಳನ್ನು
ಆಯ್ದ ಮಾರ್ಗಗಳಲ್ಲಿ ಚಾಲನೆ ಮಾಡಲು ಸರ್ವ ಸನ್ನದ್ದವಾಗಿರತಕ್ಕದ್ದು ಎಂದು ಸಂದೇಶ ರವಾನೆ
ಮಾಡಲಾಗಿತ್ತು. ಆ ಮೂಲಕ ಲಾಕ್ ಡೌನ್ ಸಡಿಲಿಕೆ ಹಾಗು ಸಾರಿಗೆ ಸೇವೆಯ ಅಗತ್ಯತೆ
ಆಧಾರದಂತೆ ಹಂತ ಹಂತವಾಗಿ ಬಸ್ ಗಳನ್ನು ರಸ್ತೆಗಿಳಿಸಲಾಗುತ್ತದೆ ಎನ್ನಲಾಗಿದೆ.ಈಗಾಗಲೇ
ಅಗತ್ಯ ಸೇವಾ ವಲಯದಲ್ಲಿರುವ ಸಿಬ್ಬಂದಿಯನ್ನು ಕರೆದೊಯ್ಯಲು ಬಿಬಿಎಂಪಿಯ ಕೆಲವು ಬಸ್‌ಗಳು
ಸಂಚರಿಸುತ್ತಿವೆ. ಏಪ್ರಿಲ್ 20ರ ನಂತರ ಕೆಲವು ಕೈಗಾರಿಕೆ, ಕಂಪನಿ, ಐಟಿ -ಬಿಟಿ
ಸಂಸ್ಥೆಗಳು ಆರಂಭಗೊಳ್ಳುವುದರಿಂದ ಅವರಿಗೆ ಸಾರಿಗೆ ಸೌಲಭ್ಯ ಕಲ್ಪಿಸಲು ಬಿಬಿಎಂಪಿ ಮತ್ತು
ಕೆಎಸ್‌ಆರ್‌ಟಿಸಿ ಸನ್ನದ್ಧವಾಗಿವೆ. ಲಾಕ್‌ಡೌನ್‌ನಿಂದಾಗಿ ಕೆಎಸ್‌ಆರ್‌ಟಿಸಿಗೆ
ಇದುವರೆಗೆ ಪ್ರೀಮಿಯಂ ಸರ್ವೀಸ್‌ನಲ್ಲಿ 55.31 ಕೋಟಿ, ನಾನ್ ಪ್ರೀಮಿಯಂ ಸರ್ವೀಸ್‌ನಲ್ಲಿ
22.81 ಕೋಟಿ ಸೇರಿ ಒಟ್ಟು 283.43 ಕೋಟಿ ರೂ. ನಷ್ಟ ಉಂಟಾಗಿದೆ.