ವಿದ್ಯಾರ್ಥಿನಿಯ ಸಾವಿಗೆ ಕೆಎಸ್ಆರ್ಟಿಸಿ ಹೊಣೆ: ಆರೋಪ
ಯಮಕನಮರಡಿ 22: ಬಹುದಿನಗಳಿಂದ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಸಂಕೇಶ್ವರ ಬೆಳಗಾವಿ ಲೋಕಲ್ ಬಸ್ ಪ್ರಾರಂಭಿಸಲು ಸಾಕಷ್ಟು ಸಲ ಮನವಿ ಮಾಡಲಾಗಿತ್ತು.
ಹುಕ್ಕೇರಿ ತಾಲೂಕಿನ ಪ್ರತಿಯೊಂದು ಗ್ರಾಮಗಳಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಸ್ಸಿನ ಅನೂಕೂಲತೆ ಇಲ್ಲದ ಕಾರಣ ಅವರ ವಿದ್ಯಾಭ್ಯಾಸಕ್ಕೆ ಹಾಗೂ ಪರಿಕ್ಷೇಗಳಿಗೆ ಸಮಯಕ್ಕೆ ಹಾಜರಾಗಲು ಅನೂಕುಲ ಆಗದೇ ಇರುವುದರಿಂದ ಬಹಳಷ್ಟು ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಖಾಸಗಿ ವಾಹನದ ಮೂಲಕ ಶಾಲೆಗಳಿಗೆ ಬರಬೇಕಾಗುತ್ತದೆ. ಆದರೇ ಸಂಕೇಶ್ವರ ಕೆಎಸ್ಆರ್ಟಿಸಿ ನಿಯಂತ್ರಣ ಅಧಿಕಾರಿಗಳಿಗೆ ಹಾಗೂ ಚಿಕ್ಕೋಡಿ ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಪತ್ರ ಸಲ್ಲಿಸಿದರೂ ಸಹಿತ ವಿದ್ಯಾರ್ಥಿಗಳಿಗಾಗಿ ಸಮರ್ಕ ಬಸ್ಸುಗಳನ್ನು ಕಲ್ಪಿಸಿ ಕೊಟ್ಟಿರುವುದಿಲ್ಲ. ಕೇವಲ ರಸ್ತೆ ರೀಪೇರಿ ಕಾರಣವನ್ನು ಮುಂದಿಟ್ಟು ಕೆಎಸ್ಆರ್ಟಿಸಿ ಇಲಾಖೆ ಬೇಜವಾಬ್ದಾರಿ ತೋರಿಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದಿ.20 ರಂದು ರಾಷ್ಟ್ರೀಯ ಹೆದ್ದಾರಿ ದಾದಬಾನಹಟ್ಟಿ ಹತ್ತಿರ ಶಾಲಾ ವಿದ್ಯಾರ್ಥಿನಿ ಯೋರ್ವಳು ಬಸ್ಸಿಗಾಗಿ ಕಾದು ಕಾದು ನಿಂತು ಸ್ವಗ್ರಾಮಕ್ಕೆ ಮರಳಲು ಬಸ್ಸ ಇಲ್ಲದ್ದರಿಂದ ಟ್ರ್ಯಾಕ್ಟರ ಮೂಲಕ ಹೋಗುವುದಕ್ಕಾಗಿ ಟ್ರ್ಯಾಕ್ಟರ ಹತ್ತುತ್ತಿದ್ದಾಗ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಬೆಳಗಾವಿ ತಾಲೂಕಿನ ಇದ್ದಲಹೊಂಡ ಶಿವಾಪುರ ಗ್ರಾಮದ ವಿದ್ಯಾರ್ಥಿನಿ ಕೃತಿಕಾ ಈರಾ್ಪ ರುದ್ರಾಪುರಿ(17) ಮೃತಪಟ್ಟ ದುರ್ದೈವಿ. ಇವಳು ದಿ.20ರಂದು ಯಮಕನಮರಡಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ 2ನೇ ವರ್ಷದ ವಾಣಿಜ್ಯ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿದ್ದು ಪರೀಕ್ಷೇ ಬರೆಯಲು ಬಂದು 1 ಗಂಟೆ ಸುಮಾರಿಗೆ ಸ್ವಗ್ರಾಮಕ್ಕೆ ಮರಳಿ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ವಿದ್ಯಾರ್ಥಿನಿಯ ಸಾವಿಗೆ ಕೆಎಸ್ಆರ್ಟಿಸಿ ಇಲಾಖೆಯೇ ಕಾರಣ ಎಂದು ಗ್ರಾಮಸ್ಥರು ದೂರಿದ್ದಾರೆ. ಸಮರ್ಕ ಬಸ್ಸಿನ ವ್ಯವಸ್ಥೆ ಇದ್ದರೆ ಈ ದುರ್ಘಟನೆ ಸಂಭವಿಸುತ್ತಿರಲ್ಲಿಲ್ಲ. ಮೃತ ವಿದ್ಯಾರ್ಥಿನಿ ತನ್ನ ಜೀವನದೂದ್ದಕ್ಕೂ ಹಾಕಿಕೊಂಡಿರುವ ಕನಸು ನನಸಾಗದೇ ಮಣ್ಣು ಪಾಲಾಗಿ ಹೋಯಿತು. ಈ ಕುರಿತು ಸಾಕಷ್ಟು ಸಲ ಸುತ್ತಮುತ್ತಿನ ಗ್ರಾಮಸ್ಥರು ಮಂತ್ರಿ ಮಹೋದಯರಿಗೂ ಮನವಿ ಸಲ್ಲಿಸಿದರೂ ಸಹಿತ ಕ್ಯಾರೇ ಎನ್ನವವರು ಇಲ್ಲವಾಗಿದ್ದಾರೆ ಎಂದು ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸದರಿ ಪ್ರಕರಣ ಯಮಕನಮರಡಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.