ಜ.14ರಿಂದ ಕಾಯ್ದಿರಿಸಿದ್ದ 5200 ಟಿಕೆಟ್ ಗಳನ್ನು ರದ್ದುಗೊಳಿಸಿದ ಕೆಎಸ್ ಆರ್ ಟಿಸಿ

ಬೆಂಗಳೂರು, ಏ 12, ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆ ಜ.14ಕ್ಕೆ ಮುಕ್ತಾಯವಾಗುತ್ತದೆ ಎಂಬ ನಿರೀಕ್ಷೆಯಿಂದ ರಾಜ್ಯಾದ್ಯಂತ  ವಿವಿಧೆಡೆ ಪ್ರಯಾಣಕ್ಕಾಗಿ ಕೆಎಸ್ ಆರ್ ಟಿಸಿ ಬಸ್ ಗಳ ಸೀಟುಗಳನ್ನು ಕಾಯ್ದಿರಿಸಿದ್ದ ಜನರ ಸಂಖ್ಯೆ ಸುಮಾರು 5200!ಆದರೆ, ರಾಜ್ಯದಲ್ಲಿ ಲಾಕ್ ಡೌನ್ ಅನ್ನು ಎರಡು ವಾರಗಳ ಕಾಲ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಘೋಷಿಸಿರುವ ಹಿನ್ನೆಲೆಯಲ್ಲಿಮುಂಗಡ ಕಾಯ್ದಿರಿಲಾಗಿರುವ ಟಿಕೇಟ್ ಗಳನ್ನು  ಮುಂದಿನ ಆದೇಶದವರೆಗೆ ಕೆಎಸ್ ಆರ್ ಟಿಸಿ ರದ್ದುಗೊಳಿಸಿದೆ.ಜ. 14ರಿಂದ ರಿಂದ ಜ. 15ರವರೆಗೆ ಒಟ್ಟು 5200 ಟಿಕೇಟುಗಳನ್ನು ಕಾಯ್ದಿರಿಸಲಾಗಿತ್ತು. ಅವುಗಳನ್ನು ರದ್ದುಗೊಳಿಸಿ ಹಣ‌ ವಾಪಸ್ಸು ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.