ಕೆಪಿಸಿಸಿ ಒಕ್ಕಲಿಗರ ನಾಯಕರ ಸಭೆ

ಬೆಂಗಳೂರು, ನ 11:    ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ ಉಪಚುನಾವಣೆ ಹಿನ್ನೆಲೆಯಲ್ಲಿ ಹಿರಿಯ ನಾಯಕರೊಂದಿಗೆ ಸಭೆ ಬಳಿಕ ಒಕ್ಕಲಿಗ ನಾಯಕರ ಸಭೆ ನಡೆಸಿದರು. ಸಭೆಯಲ್ಲಿ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್, ಟಿ. ಬಿ. ಜಯಚಂದ್ರ , ಕೃಷ್ಣಭೈರೇಗೌಡ, ಎಂ. ಕೃಷ್ಣಪ್ಪ, ಚೆಲುವರಾಯಸ್ವಾಮಿ ಸೇರಿ ಕೆಲ ಮುಖಂಡರು ಭಾಗಿಯಾಗಿದ್ದು, ಚುನಾವಣೆಗೆ ಸಮುದಾಯದ ಪ್ರಾತಿನಿಧ್ಯ ಬಗ್ಗೆ ಚರ್ಚೆ ಹಾಗೂ ಪಕ್ಷದ ನಾಯಕತ್ವದ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಹದಿನೈದು ಕ್ಷೇತ್ರಗಳ ಉಪಚುನಾವಣಾ ಕ್ಷೇತ್ರಗಳಲ್ಲಿ ಕನಿಷ್ಠ ಹನ್ನೆರಡು ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸಲಿದೆ, ಮಾತ್ರವಲ್ಲ ಹದಿನೈದು ಕ್ಷೇತ್ರಗಲ್ಲೂ ಗೆಲುವು ಸಾಧಿಸಿದರೆ ಅಚ್ಚರಿಯಿಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿದಿನ ಛಲಗಾರ, ಜನ ನಾಯಕ ಎಂದು ಜಾಹೀರಾತು ನೀಡುತ್ತಿದ್ದಾರೆ. ಆದರೆ ಅವರು ಹಿಂಬಾಗಿಲಿನಿಂದ ಬಂದು ಅಧಿಕಾರ ಹಿಡಿದವರು. ಹಿಂಬಾಗಿಲಿನಿಂದ ಅಧಿಕಾರ ಹಿಡಿಯುವುದರಲ್ಲಿ ಅವರು ಛಲಗಾರರೇ ಎಂದು ಲೇವಡಿ ಮಾಡಿದರು. ಪಕ್ಷದ ಶಾಸಕರನ್ನು ದುಡ್ಡು ಕೊಟ್ಟು ಖರೀದಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಉಪಚುನಾವಣೆಗೆ ಸೋಮವಾರದಿಂದ ನಾಮ ಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು, ನ್ಯಾಯಾಲಯದಲ್ಲಿ ಅನರ್ಹ ಶಾಸಕರ ಅರ್ಜಿ ತೀಪು ಇನ್ನೂ ಬಂದಿಲ್ಲ. ಜನರು ಪಕ್ಷಾಂತರಿಗಳನ್ನು ಸಹಿಸಲ್ಲ, ಪಕ್ಷಾಂತರಿಗಳಿಗೆ ಜನ ತಕ್ಕ ಪಾಠ ಕಳಿಸುತ್ತಾರೆ.ಅನರ್ಹರನ್ನು ಸೋಲಿಸಿ ಅವರಿಗೆ ತಕ್ಕಪಾಠ ಕಲಿಸಲು ಕಾಯುತ್ತಿದ್ದಾರೆ ಎಂದರು.