ರಾಷ್ಟ್ರಮಟ್ಟದ ಹ್ಯಾಕಥಾನ್‌ನಲ್ಲಿ ಕೆಎಲ್‌ಇ ಬಿಸಿಎ ವಿದ್ಯಾರ್ಥಿಗಳ ಸಾಧನೆ

ರಾಷ್ಟ್ರಮಟ್ಟದ ಹ್ಯಾಕಥಾನ್‌ನಲ್ಲಿ ಕೆಎಲ್‌ಇ ಬಿಸಿಎ ವಿದ್ಯಾರ್ಥಿಗಳ ಸಾಧನೆ KLE BCA students' achievement at a national-level hackathon

ರಾಷ್ಟ್ರಮಟ್ಟದ ಹ್ಯಾಕಥಾನ್‌ನಲ್ಲಿ ಕೆಎಲ್‌ಇ ಬಿಸಿಎ ವಿದ್ಯಾರ್ಥಿಗಳ ಸಾಧನೆ 

ಮಹಾಲಿಂಗಪುರ 13: ಸ್ಥಳೀಯ ಕೆಎಲ್‌ಇ ಸಂಸ್ಥೆಯ ಬಿಸಿಎ ವಿದ್ಯಾರ್ಥಿಗಳು ಪುಣೆಯ ಮರಾಠಾವಾಡಾ ಮಿತ್ರಮಂಡಳ ಇಂಜನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ 24 ಗಂಟೆಗಳ ಹ್ಯಾಕಥಾನ್‌ನಲ್ಲಿ ಭಾಗವಹಿಸಿ ಗಮನ ಸೆಳೆದಿದ್ದಾರೆ. ಬಿಸಿಎ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಈರ​‍್ಪ ಮಾಳಿ, ವಿನಯ ಮನ್ಮಿ, ವಿಶಾಲ್ ಕೆ. ಹಾಗೂ ಅಭಿಷೇಕ್ ಎಂ. ಹ್ಯಾತಥಾನ್‌ನಲ್ಲಿ ಭಾಗವಹಿಸಿ, ತಮ್ಮ ತಾಂತ್ರಿಕ ಜ್ಞಾನ, ಸೃಜನಶೀಲತೆ, ಸಮಸ್ಯೆ ಪರಿಹಾರದ ಸಾಮರ್ಥ್ಯ ಹಾಗೂ ತಂಡದ ಕಾರ್ಯಕ್ಷಮತೆ ಪ್ರದರ್ಶಿಸಿದ್ದಾರೆ. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ತಾಂತ್ರಿಕ ತಜ್ಞರೊಂದಿಗೆ ಸಂವಹನ ನಡೆಸುವ ಮೂಲಕ ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ ಎಂದು ಕೆಎಲ್‌ಇ, ಬಿಸಿಎ ಕಾಲೇಜ್ ಸಂಯೋಜಕ ಎಸ್‌.ಐ.ಪಾಟೀಲ ತಿಳಿಸಿದ್ದಾರೆ.