ಕಾರ್ಖಾನೆ ಭಾದಿತ ಪ್ರದೇಶದ ಮಹಿಳೆಯರ ರಕ್ಷಣೆಗೆ ಜ್ಯೋತಿ ಮನವಿ
Jyoti appeals for protection of women in factory-affected areas
ಲೋಕದರ್ಶನ ವರದಿ
ಕಾರ್ಖಾನೆ ಭಾದಿತ ಪ್ರದೇಶದ ಮಹಿಳೆಯರ ರಕ್ಷಣೆಗೆ ಜ್ಯೋತಿ ಮನವಿ
ಕೊಪ್ಪಳ 05: ನಗರಕ್ಕೆ ಸಮೀಪದಲ್ಲಿಯೇ ಇರುವ ಬಲ್ದೋಟ ಕಾರ್ಖಾನೆ ವಿಸ್ತರಣೆಯಿಂದ ಉಂಟಾಗುವ ಭಯಾನಕ ಸಮಸ್ಯೆಗಳು ಅದರ ಜೊತೆಗೆ ಈಗಾಗಲೇ ಇರುವ ಕಿರ್ಲೋಸ್ಕರ್, ಕಲ್ಯಾಣಿ, ಮುಕುಂದಸುಮಿ, ವನ್ಯಾ, ಭದ್ರಾ ಮುಂತಾದ ಕಾರ್ಖಾನೆಗಳ ಬಾಧಿತ ಪ್ರದೇಶದ ಮಹಿಳೆಯರ ಮತ್ತು ಯುವತಿಯರ ಆರೋಗ್ಯ ಮತ್ತು ಜೀವ ರಕ್ಷಣೆಗೆ ಮುಂದಾಗಬೇಕೆಂದು ಮಹಿಳಾ ಆಯೋಗದ ಅಧ್ಯಕ್ಷರಿಗೆ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಮನವಿ ಮಾಡಿದರು.
ಅವರು ಜಿಲ್ಲೆಯ ಮೂರು ದಿನಗಳ ಪ್ರವಾಸ ಹಮ್ಮಿಕೊಂಡಿರುವ ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮಿ ಚೌದ್ರಿ ಅವರನ್ನು ನಗರದಲ್ಲಿ ಭೇಟಿಯಾಗಿ ಅಂಬೇಡ್ಕರ್ ಕೃತಿ ನೀಡಿ ಗೌರವಿಸಿ ಮಹಿಳಾ ಆಯೋಗ ಮಾಡುತ್ತಿರುವ ಕಾರ್ಯವನ್ನು ಶ್ಲಾಗಿಸಿ ಮನವಿ ಪತ್ರವನ್ನು ಅರ್ಿಸಿದರು. ನಗರದಲ್ಲಿರುವ ಹಕ್ಕಿಪಿಕ್ಕಿ ಸಮುದಾಯ ಹಾಗೂ ಕುಂಚಿ ಕೊರವರ ಸಮುದಾಯಗಳಿಗೆ ಮೂಲಭೂತ ಸೌಕರ್ಯವನ್ನು ಒದಗಿಸಿ ಸಹಜ ಜೀವನಕ್ಕೆ ನೆರವಾಗುವಂತೆ ಕೋರಿದರು. ಜಿಲ್ಲೆಯ ಸರಕಾರಿ ಅರೆ ಸರಕಾರಿ ನೌಕರರು ಉತ್ತಮವಾದ ಕೆಲಸದ ಪರಿಸರ ಖಾತ್ರಿಪಡಿಸುವಂತೆ ವಿನಂತಿಸಿದರು. ಅಲ್ಲದೆ ಜಿಲ್ಲೆಯ ಮಹಿಳಾ ಹಾಸ್ಟೆಲ್ ಹಾಗೂ ನೌಕರಸ್ಥ ಮಹಿಳೆಯರ ಹಾಸ್ಟೆಲ್ ಗಳಲ್ಲಿ ಇನ್ನಷ್ಟು ಹೆಚ್ಚಿನ ಸೌಕರ್ಯಗಳು ದೊರಕುವಂತೆ ಮಾಡಲು ವಿನಂತಿಸಿದರು. ಈ ಸಂದರ್ಭದಲ್ಲಿ ಡಿಸಿಸಿ ಸದಸ್ಯ ಸುಮಂಗಲ ನಾಯಕ್ ಇತರರು ಇದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 