ಸಿದ್ಧಾರೂಢ ಸ್ವಾಮಿಗಳ ಜ್ಯೋತಿ ರಥಯಾತ್ರೆ
Jyoti Rathayatra of Siddharudh Swami
ಸಿದ್ಧಾರೂಢ ಸ್ವಾಮಿಗಳ ಜ್ಯೋತಿ ರಥಯಾತ್ರೆ
ಗದಗ 6 : ಸಿದ್ಧಾರೂಢ ಸ್ವಾಮಿಗಳ ನೂರ ತೊಂಬತ್ತನೆ ಹಾಗೂ ಶ್ರೀ ಗುರುನಾಥರೂಡರ 115 ನೇ. ಜಯಂತೋತ್ಸವದ ಅಂಗವಾಗಿ ಶ್ರೀ ಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮೀಟಿ ಹುಬ್ಬಳ್ಳಿ ಹಾಗೂ ವಿಶ್ವ ವೇದಾಂತ ಪರಿಷತ್ ವತಿಯಿಂದ ವಿಶ್ವ ಶಾಂತಿಗಾಗಿ ಆರೋಡ ಜ್ಯೋತಿ ಯಾತ್ರೆ ಹಾಗೂ ಶ್ರೀ ಸಿದ್ಧಾರೂಢ ಕಥಾಮೃತ ಮೆರವಣಿಗೆಯ ಶೋಭೆ ಯಾತ್ರೆ ರಾಜ್ಯಾದ್ಯಂತ ಹಾಗೂ ಮಹಾರಾಷ್ಟ್ರ ಆಂಧ್ರ ಗೋವಾ ರಾಜ್ಯಗಳ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿ ಫೆಬ್ರವರಿ 20 ರಿಂದ 26 ರ ವರೆಗೆ ವಿಶ್ವ ಶಾಂತಿಗಾಗಿ ಸಮೃದ್ಧ ಭಾರತದ ನಿರ್ಮಾಣಕ್ಕಾಗಿ ಅನೇಕ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ.
ಆ ಪ್ರಯುಕ್ತ ಇದೇ ದಿನಾಂಕ 5 ರಂದು ಗದಗ ಬೆಟಗೇರಿ ಅವಳಿ ನಗರಕ್ಕೆ ಆಗಮಿಸಿದ ಜ್ಯೋತಿ ಯಾತ್ರೆಗೆ ಸನ್ಮಾನ್ಯ ಕಾನೂನು ಹಾಗೂ ಸಂಸದೀಯ ವ್ಯೆವಹಾರಗಳ, ಪ್ರವಾಸೋಧ್ಯೇಮ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್ ಕೆ ಪಾಟೀಲ್, ಮಾಜೀ ಶಾಸಕರಾದ ಡಿ ಆರ್ ಪಾಟೀಲ್ ಇವರ ನೇತ್ರತ್ವದಲ್ಲಿ ಶ್ರೀ ಗಳ ಜ್ಯೋತಿ ಯಾತ್ರೆಯ ಭವ್ಯ ಸ್ವಾಗತವನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯ ಮೂಲಕ ಕೈಗೊಳ್ಳಲಾಯಿತು. ಅದರಂತೆ ಮಹಿಳೆಯರಿಂದ ಶ್ರೀಗಳ ಜ್ಯೋತಿ ಯಾತ್ರೆಗೆ ಆರತಿ ಬೆಳಗುವ ಮೂಲಕ ಸ್ವಾಗತ ಮಾಡಲಾಯಿತು.
ಈ ಸಂಧರ್ಭದಲ್ಲಿ ಕಾಂಗ್ರೇಸ್ ಮಹಿಳಾ ಮುಖಂಡರಾದ ದ್ರಾಕ್ಷಾಯಣಿ ಹಾಸಲಕರ, ನಗರಸಭಾ ಸದಸ್ಯರಾದ ಶಕುಂತಲಾ ಅಕ್ಕಿ, ಪರ್ವೀನ್ ಬಾನು ಮುಲ್ಲಾ, ಲಕ್ಷ್ಮೀ ಸಿದ್ದಮ್ಮನಹಳ್ಳಿ, ಸಾವಿತ್ರಿ ಹೂಗಾರ, ಸುಧಾ ಬೂದಾರಪೂರ, ಸರಸ್ವತಿ ದೇವರಕೊಂಡಿ, ಲಲಿತಾ ಗೋಳಗೊಳಕಿ, ಲಕ್ಷ್ಮೀ ಜಾಲಿಗಂಡಿ, ರಾಜೇಶ್ವರಿ, ಕುಸುಮಾ, ಶೈಲಾ ಜ್ಯೋಶಿ, ಶೋಭಾ, ಬಾಳಮ್ಮ ಕಮಲಾ ಹಾದಿಮನಿ, ಮುಸ್ತಾನ್ ಸೈದ್, ಗೀತಾ ಹಬೀಬಿ ಹಾಗೂ ಇನ್ನಿತರರ ಉಪಸ್ಥಿತಿಯಲ್ಲಿ ಶ್ರೀ ಗಳ ಭವ್ಯ ಜ್ಯೋತಿ ಯಾತ್ರೆಗೆ ಆರತಿ ಬೆಳಗಿಸುವ ಮೂಲಕ ಸ್ವಾಗತ ಕೋರಲಾಯಿತು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 