ನ್ಯಾ. ಭಾರತಿ ತೆಗ್ಗಳ್ಳಿ ಹಿರೇಮಠಗೆ ಕರ್ನಾಟಕ ಭೂಷಣ ಪ್ರಶಸ್ತಿ

ನ್ಯಾ. ಭಾರತಿ ತೆಗ್ಗಳ್ಳಿ ಹಿರೇಮಠಗೆ ಕರ್ನಾಟಕ ಭೂಷಣ ಪ್ರಶಸ್ತಿ  Justice Bharathi Theggalli Hiremath to be conferred Karnataka Bhushan Award

ಲೋಕದರ್ಶನ ವರದಿ 

ವಿಜಯಪುರ 31: ಜಿಲ್ಲೆಯ ಖ್ಯಾತ ಮಹಿಳಾ ನ್ಯಾಯವಾದಿ ಸಮಾಜ ಸೇವಕಿ ಭಾರತಿ ತೆಗ್ಗಳ್ಳಿ, (ಹಿರೇಮಠ) ಇವರಿಗೆ ಸರ್ವೇಜನ ಆರ್ಟ್‌ ಮತ್ತು ಕಲ್ಚರಲ್ ಟ್ರಸ್ಟ್‌ (ರಿ) ನಾಗರಬಾವಿ ಬೆಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ವಿಜಯಪುರ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯ ಸಾಂಸ್ಕೃತಿಕ ಜನಪದ ವೈಭವ, ಸ್ತ್ರೀ ಕುಲ ವಜ್ರ ಕಿತ್ತೂರು ಚೆನ್ನಮ್ಮ ಹಾಗೂ ಒನಕೆ ಓಬವ್ವರ ಸ್ಮರಣಾರ್ಥ ಕಲೆ, ಸಾಹಿತ್ಯ, ಕ್ರೀಡೆ, ಜಾನಪದ, ನ್ಯಾಯಾಂಗ ಕ್ಷೇತ್ರದ ಅಪಾರ ಸೇವೆಯನ್ನು ಪರಿಗಣಿಸಿ ವೀರ ರಾಣಿ ಕಿತ್ತೂರು ಚೆನ್ನಮ್ಮನವರ ಸ್ಮರಣಿಕೆ, ಪ್ರಶಸ್ತಿ ಪತ್ರ ನೀಡಿ ಶಾಲು ಹೊದಿಸಿ ಫಲಪುಷ್ಪ ವಿತರಿಸಿ ಅದ್ದೂರಿ ವೇದಿಕೆಯಲ್ಲಿ ಗಣ್ಯ ಮಾನ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.  

ಈ ಸಂಧರ್ಭದಲ್ಲಿ ಕಿರುತೆರೆ ನಟಿ ಸರ್ವೇಜನ ಆರ್ಟ್‌ ಮತ್ತು ಕಲ್ಚರಲ್ ಟ್ರಸ್ಟ್‌ ನ ಅಧ್ಯಕ್ಷೆ ಲಕ್ಷ್ಮಿತಾ ಗಂಗಾವತಿ, ನ್ಯಾಯವಾದಿ ದಾನೇಶ ಅವಟಿ, ಸಮಾಜ ಸೇವಕ ರಾಜು ಕಂಕಣವಾಡಿ, ಮುಂತಾದವರು ಉಪಸ್ಥಿತರಿದ್ದರು.