ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ವಾಕ್‌ತಾನ್‌ಗೆ ನ್ಯಾಯಾಧೀಶರಿಂದ ಚಾಲನೆ

 ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ವಾಕ್‌ತಾನ್‌ಗೆ ನ್ಯಾಯಾಧೀಶರಿಂದ ಚಾಲನೆ Judge launches World Mental Health Day walkathon

ಲೋಕದರ್ಶನ ವರದಿ 

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ವಾಕ್‌ತಾನ್‌ಗೆ ನ್ಯಾಯಾಧೀಶರಿಂದ ಚಾಲನೆ 

ಮಾನಸಿಕ ರೋಗಿಗಳೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಿ 

- ನ್ಯಾಯಾಧೀಶರಾದ ಬಿರಾದಾರ ದೇವೇಂದ್ರ​‍್ಪ ಎನ್‌. 

ಹಾವೇರಿ 10 : ಮಾನಸಿಕ  ರೋಗಿಗಳನ್ನು ಹುಚ್ಚ ಎಂದು ಕರೆಯಬಾರದು ಹಾಗೂ ಅವರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಿರಾದಾರ ದೇವೇಂದ್ರ​‍್ಪ ಎನ್‌. ಅವರು ಹೇಳಿದರು. 

ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಅಬಕಾರಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಜಿಲ್ಲಾ ಆಸ್ಪತ್ರೆ, ಸರ್ಕಾರಿ ಶುಶ್ರೂಷಾ ಕಾಲೇಜ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ  ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ವಾಕ್‌ತಾನ್  ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  

ಮಾನಸಿಕ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಬಹುದಾಗಿದೆ. ನಾವೆಲ್ಲರೂ ಜವಾಬ್ದಾರಿಯುತ ಪ್ರಜೆಗಳಾಗಿದ್ದು, ಸಮಾಜದ ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.    

  ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ರುಚಿ ಬಿಂದಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಯಶೋಧಾ ವಂಟಗೋಡಿ, ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶ್ರೀಶೈಲಜಾ ಎಚ್‌.ವಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಜಯಾನಂದ, ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ಪ್ರವೀಣಕುಮಾರ ಎಂ.ವಿ.,  ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್‌.ಹಾವನೂರ,  ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ. ನೀಲೇಶ ಎನ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಸರಿತಾ, ಡಾ.ಚನ್ನಬಸಯ್ಯ ವಿರಕ್ತಮಠ, ತಾಲೂಕಾ ಆರೋಗ್ಯ ಅಧಿಕಾರಿ ಡಾ.ಪ್ರಭಾಕರ ಕುಂದೂರು, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮನೋವೈದ್ಯೆ ಡಾ. ಶೃತಿ ಎ, ಸರ್ಕಾರಿ ಶ್ರೂಶುಷಾ ಕಾಲೇಜ್ ಪ್ರಾಂಶುಪಾಲ ಶ್ರೀಮತಿ ಸರಸ್ವತಿ ವಾಯ್ ಹೆಚ್, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಉಮೇಶ ಕರಮುಡಿ,  ಅಬಕಾರಿ ಇಲಾಖೆ ಅಧಿಕಾರಿ ಬಸವರಾಜ ಎಚ್ ಮಾದರ, ಆರೋಗ್ಯ ಇಲಾಖೆ  ಹಾಗೂ ವಿವಿಧ ಇಲಾಖೆ ಅಧಿಕಾರಿಗಳು  ಉಪಸ್ಥಿತರಿದ್ದರು.  

ಗಳಗನಾಥರು ಹಾಗೂ ರಾಜಪುರೋಹಿತರು ಕನ್ನಡ ಸಾಹಿತ್ಯದ ದಿಗ್ಗಜರು 

ಹಾವೇರಿ 10 : ಕನ್ನಡದ ಪರಿಸ್ಥಿತಿ ಶೋಚನೀಯವಾಗಿದ್ದ  ಕಾಲದಲ್ಲಿ ನಾಡು-ನುಡಿಗಾಗಿ  ದುಡಿದ  ಸಾಹಿತಿ, ಸಂಶೊಧಕರ ಹೆಸರುಗಳಲ್ಲಿ ಕನ್ನಡ ಕಾದಂಬರಿ ಪಿತಾಮಹ  ಗಳಗನಾಥರು ಹಾಗೂ  ರಾಜಪುರೋಹಿತರ ಹೆಸರುಗಳು  ಅತ್ಯಂತ ಪ್ರಮುಖವಾದವುಗಳು.  ಇವರು ಕನ್ನಡ ಸಾಹಿತ್ಯದ  ದಿಗ್ಗಜರು ಎಂದು  ಪ್ರಾಚಾರ್ಯ ಡಿ.ಟಿ. ಪಾಟೀಲ  ಹೇಳಿದರು.  

ತಾಲೂಕಿನ ಕಳ್ಳಿಹಾಳ ಎಸ್‌.ಸಿ. ಎಸ್‌.ಟಿ ವಸತಿಯುತ  ಪ್ರಥಮ ದರ್ಜೆ ಕಾಲೇಜಿನಲ್ಲಿ  ಕರ್ನಾಟಕ  ಸರ್ಕಾರ  ಶ್ರೀಗಳಗನಾಥ ಮತ್ತು ನಾ.ಶ್ರೀ ರಾಜಪುರೋಹಿತ ಪ್ರತಿಷ್ಠಾನದಿಂದ  ಗುರುವಾರ ಏರಿ​‍್ಡಸಿದ್ದ  ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ  ಅವರು ಮಾತನಾಡಿದರು.  

       ಕನಕ , ಶರೀಪ ಸರ್ವಜ್ಞ  ಮುಂತಾದವರು ಈ ಜಿಲ್ಲೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಸಂತರ, ಶರಣರ  ದಾರ್ಶನಿಕ ಚರಿತ್ರೆಗಳನ್ನು  ವಿದ್ಯಾರ್ಥಿಗಳು  ತಿಳಿದುಕೊಳ್ಳಬೇಕು ವಾಚನಾಭಿರುತಿ   ಬೆಳೆಸಿಕೊಳ್ಳಬೇಕು  ಕರೆ ನೀಡಿದರು.  

      ಹಿರೇಕೆರೂರಿನ ಸರ್ಕಾರಿ ಪ್ರಥಮ ದರ್ಜೆ  ಕಾಲೇಜಿನ ಉಪನ್ಯಾಸಕ ಡಾ. ಕಾಂತೇಶರಡ್ಡಿ  ಗೊಡಿಹಾಳ  ಅವರು ಗಳಗನಾಥರು  ಮತ್ತು ನಾ.ಶ್ರೀ. ರಾಜಪುರೋಹಿತರ ಬದುಕು-ಬರಹ  ಕುರಿತು  ಮಾತನಾಡಿ,  ಕನ್ನಡ ಕಾದಂಬರಿಯ  ಉನ್ನತ ಸೌಧದ  ತಳಪಾಯವನ್ನು ಹಾಕಿದವರೇ  ಗಳಗನಾಥರು.     ಅವರು ಕನ್ನಡ  ಕಾದಂಬರಿಯ ಪಿತಾಮಹ.  ಇತಿಹಾಸ  ಸಂಶೋಧಕ  ರಾಜಪುರೋಹಿತರು ಇಂದಿನ ಸಂಶೋಧಕರಿಗೆ  ಪ್ರೇರಣೆ  ಹಾಗೂ ಸ್ಪೂರ್ತಿಯಾಗುತ್ತಾರೆ.  ಈ  ಮಹನೀಯರು  ಹಾವೇರಿ ತಾಲೂಕಿನ ಅಗಡಿ ಗ್ರಾಮದವರು  ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಎಂದರು.  

     ರಟೀಹಳ್ಳಿ ಪ್ರಿಯದರ್ಶಿನಿ  ಪದವಿ ಕಾಲೇಜಿನ  ಉಪನ್ಯಾಸಕ ಡಾ. ಚಾಮರಾಜ ಕಮ್ಮಾರ  ಶಾಸನಗಳ ಓದು  ಕುರಿತು  ಮಾತನಾಡಿ, ಶಿಲಾಶಾಸನಗಳ, ಸ್ಮಾರಕಗಳು  ಹಾವೇರಿ ಜಿಲ್ಲೆಯಲ್ಲಿಯೇ  ಅತೀ ಹೆಚ್ಚು ಕಂಡುಬಂದಿವೆ. ಶಾಸನಗಳು ಎಂದರೆ ಪ್ರಾಚೀನ ಕಾಲದ ಜನಗಳೆಂದರೆ  ಸಮಗ್ರ ದೃಷ್ಟಿಯಿಂದ ನೋಡುವುದು.  ಶಾಸನಗಳ ಹಾಗೂ ಸ್ಮಾರಕಗಳ ಬಗ್ಗೆ  ನಿರ್ಲಕ್ಷ್ಯ ಸಲ್ಲದು, ಅವುಗಳ ರಕ್ಷಣೆ ನಮ್ಮೆಲ್ಲರ  ಜಬಾಬ್ದಾರಿಯಾಗಿದೆ.  ವಿದ್ಯಾರ್ಥಿಗಳು ಇತಿಹಾಸಕಾರರ  ಚರಿತ್ರೆಗಳನ್ನು  ಅಧ್ಯಯನ ಮಾಡಬೇಕು ಎಂದರು. 

ಪ್ರತಿಷ್ಠಾನದ ಸದಸ್ಯ  ವೆಂಕಟೇಶ  ಗಳಗನಾಥ  ಉಪನ್ಯಾಸಕರನ್ನು ಹಾಗೂ  ಪ್ರಾಚಾರ್ಯರರನ್ನು  ಗೌರವಿಸಿದರು. 

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ  ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ. ಬಿ. ಹಿರೇಮಠ  ಸ್ವಾಗತಿಸಿ,  ಪ್ರಸ್ತಾವಿಕವಾಗಿ ಮಾತನಾಡಿದರು.  ಪ್ರತಿಷ್ಠಾನದ  ಸದಸ್ಯ  ಹನುಮಂತಗೌಡ  ಗೊಲ್ಲರ  ನಿರೂಪಿಸಿದರು. ಇನ್ನೊರ್ವ ಸದಸ್ಯ ಪ್ರಮೋದ ನಲವಾಗಲ  ವಂದಿಸಿದರು.  

ಜಯಂತಿ ಪೂರ್ವಭಾವಿ ಸಭೆ 

ಹಾವೇರಿ 10 : ಜಿಲ್ಲಾಡಳಿತದಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಕುರಿತು  ಪೂರ್ವಭಾವಿ ಸಭೆ ಅಕ್ಟೋಬರ್ 15 ರಂದು ಬೆಳಿಗ್ಗೆ 11-30 ಗಂಟೆಗೆ ಜಿಲ್ಲಾಧಿಕಾರಿಗಳ  ಕೋರ್ಟ್‌ಹಾಲ್‌ನಲ್ಲಿ ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸಮಾಜಿಕ ಶೈಕ್ಷಣಿಕ ಸಮೀಕ್ಷೆ- ಸಹಾಯವಾಣಿ ಸ್ಥಾಪನೆ  

ಹಾವೇರಿ 10 : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂ ಕರ್ನಾಟಕ ರಾಜ್ಯದ ನಾಗರೀಕರ ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆ ಕುರಿತು ಸಲಹೆ, ಸೂಚನೆ ಮತ್ತು ದೂರುಗಳಿಗೆ ಸಂಬಂಧಿಸಿದಂತೆ ಶಿಗ್ಗಾಂವ ತಹಶೀಲ್ದಾರ ಕಚೇರಿಯಲ್ಲಿ ಸಹಾಯವಾಣಿ 08378-255044 ಆರಂಭಿಸಲಾಗಿದೆ ಎಂದು ಶಿಗ್ಗಾಂವ ತಹಶೀಲ್ದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.