ಸಮ್ಮೇಳನದ ಪ್ಲೇಕ್ಸ್ ತೆಗೆಯಲು ಸೂಚನೆ: ವಿಚಾರಣೆ ಮುಂದೂಡಿದ ನ್ಯಾಯಾಧೀಶರು
Judge adjourns hearing, orders removal of conference plaques
ದಾಂಡೇಲಿ 11: ದಾಂಡೇಲಿಯಲ್ಲಿ ಅಯೋಜನೆಗೊಂಡಿರುವ 25 ನೇ ಜಿಲ್ಲಾ ಸಾಹಿತ್ಯ ಪ್ಲೇಕ್ಸ್ ಹಾಗೂ ಬ್ಯಾನರ್ ತೆಗೆಯಲು ದಾಂಡೇಲಿ ಜೆಎಂಎಫ್‌ಸಿ ಕೋರ್ಟ ಸೂಚನೆ ನೀಡಿತು.
ಸಮ್ಮೇಳನಕ್ಕೆ ರಾಜ್ಯ ಅಧ್ಯಕ್ಷರ ಅಥವಾ ಆಡಳಿತಾಧಿಕಾರಿ ಅನುಮತಿ ಪಡೆದಿಲ್ಲ ಹಾಗೂ ರಸ್ತೆಯ ತುಂಬಾ ಸಂಚಾರಕ್ಕೆ ಅಡಚಣೆಯಾಗುವಂತೆ ಫ್ಲೆಕ್ಸ್ , ಕಟೌಟ್ ಹಾಕಲಾಗಿದೆ. ಅಕ್ರಮವಾಗಿ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಹಾಗಾಗಿ ಸಮ್ಮೇಳನಕ್ಕೆ ತಡೆ ನೀಡಬೇಕೆಂದು ಅಜೀವ ಸದಸ್ಯರಾದ ಅಕ್ರಮ್ ಖಾನ್, ಸಂದೀಪ ಭಂಡಾರಿ , ಪ್ರವೀಣ್ ಕೊಠಾರಿ ದಾವೆ ಹೂಡಿದ್ದರು. ಪ್ರಕರಣ ಗುರುವಾರ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದಿತ್ತು. ಜಿಲ್ಲಾ ಕಸಾಪ ಅಧ್ಯಕ್ಷ ಬೊಮ್ಮಯ್ಯ ಎನ್. ನಾಯಕ (ವಾಸರೆ) ನ್ಯಾಯಾಲಯ ಸಮನ್ಸ ನೀಡುವ ಮುನ್ನವೇ ನ್ಯಾಯಾಧೀಶರ ಎದುರು ತನ್ನ ವಕೀಲರ ಜೊತೆ ಹಾಜರಾಗಿ, ಅರ್ಜಿ ಸಲ್ಲಿಸಲು ಮುಂದಾದರು.
ಇದನ್ನು ಗಮನಿಸಿದ ನ್ಯಾಯಾಲಯ ನಾವು ನೋಟೀಸ್ ಮಾಡದ ಮುನ್ನ ಯಾಕೆ ಬಂದಿರಿ ಎಂದಿತು. ಕಸಾಪ ಜಿಲ್ಲಾಧ್ಯಕ್ಷ ಬೊಮ್ಮಯ್ಯ ನಾಯಕ ಪರ ವಕೀಲರು ನ್ಯಾಯಾಧೀಶರಲ್ಲಿ ತಮ್ಮ ಬೇಡಿಕೆಯ ಮಂಡಿಸಲು ಕೋರ್ಟನಲ್ಲಿ ಮನವಿ ಮಾಡಿದರು. ಈ ವೇಳೆ ಅಜೀವ ಸದಸ್ಯರ ಪರ ವಕೀಲ ರಾಘವೇಂದ್ರ ಗಡೆಪ್ಪನವರ ಸಮರ್ಥವಾಗಿ ವಾದ ಮಂಡಿಸಿದರು. ಕಸಾಪ ಬೈಲಾ ಮತ್ತು ಅಧ್ಯಕ್ಷರ ಅನುಮತಿ ಅಗತ್ಯ ಎಂದು ಪ್ರತಿಪಾದಿಸಿದರು. ವಾದ ಆಲಿಸಿದ ನ್ಯಾಯಾಲಯ ತಕ್ಷಣ ಫ್ಲೆಕ್ಸ್ ತೆಗೆಯುವಂತೆ ಕಸಾಪ ಜಿಲ್ಲಾಧ್ಯಕ್ಷ ಬೊಮ್ಮಯ್ಯ ಎನ್.ನಾಯಕ (ವಾಸರೆ)ಗೆ ಸೂಚಿಸಿತು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು . ನಂತರ ಪ್ರಕರಣದ ವಿಚಾರಣೆಯನ್ನು ನಾಳೆ ಶುಕ್ರವಾರಕ್ಕೆ ಮುಂದೂಡಲಾಯಿತು.
ಉತ್ತರ ಕನ್ನಡ ಜಿಲ್ಲಾ 25 ನೇ ಸಮ್ಮೇಳನ ನಡೆಯುವದೇ ಎಂಬ ಆತಂಕ ಜಿಲ್ಲಾ ಕಸಾಪವನ್ನು ಕಾಡುತ್ತಿದ್ದು, ಜಿಲ್ಲೆಯ ಜನ ಈ ವಿದ್ಯಾಮಾನವನ್ನು ಕುತೂಹಲದಿಂದ ಗಮನಿಸುತ್ತಿರುವುದಂತೂ ಭಾರೀ ಸುದ್ದಿಯಾಗಿದೆ.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 