“ಮಕ್ಕಳ ರಕ್ಷಣೆಗೆ ಕಾನೂನುಗಳು” ಪುಸ್ತಕ ಬಿಡುಗಡೆಗೊಳಿಸಿದ ನ್ಯಾಯಾಧೀಶೆ ಕೆ.ಜಿ.ಶಾಂತಿ

“ಮಕ್ಕಳ ರಕ್ಷಣೆಗೆ ಕಾನೂನುಗಳು” ಪುಸ್ತಕ ಬಿಡುಗಡೆಗೊಳಿಸಿದ ನ್ಯಾಯಾಧೀಶೆ ಕೆ.ಜಿ.ಶಾಂತಿ  Judge K.G. Shanthi releases the book “Laws for Child Protection”

ಬಳ್ಳಾರಿ 26: ಮಕ್ಕಳ ರಕ್ಷಣೆಗೆ ಕಾಯ್ದೆ-ಕಾನೂನು ರೂಪಿಸುವುದು ಮಾತ್ರವಲ್ಲದೇ, ಅವರ ಬೆಳವಣಿಗೆಗೆ ಉತ್ತಮ ಪರಿಸರವನ್ನು ಸಹ ನೀಡಬೇಕಿದೆಎಂದು ಪ್ರಧಾನಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಅಧ್ಯಕ್ಷರೂಆದಕೆ.ಜಿ ಶಾಂತಿಅವರುಅಭಿಪ್ರಾಯಪಟ್ಟರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರೀಡ್ಸ್‌ ಸಂಸ್ಥೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮತ್ತುಅರಣ್ಯ ಇಲಾಖೆ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ನಗರದಜಿಲ್ಲಾ ನ್ಯಾಯಾಲಯದ ವಿಸಿ ಸಭಾಂಗಣದಲ್ಲಿ ಶನಿವಾರ ಏರಿ​‍್ಡಸಿದ್ದ “ಮಕ್ಕಳ ರಕ್ಷಣೆಗೆ ಕಾನೂನುಗಳು” ಎಂಬ ಪುಸ್ತಕ ಬಿಡುಗಡೆಗೊಳಿಸಿ, ಬಳಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.  

ಮಕ್ಕಳು ದೇವರ ಸಮಾನ. ಅವರು ಬೆಳವಣಿಗೆಯ ಪೂರಕವಾದ ಮನೆ, ಶಾಲೆ ವಾತಾವರಣದ ಸುತ್ತಮುತ್ತಲಿನಲ್ಲಿ ಗುಣಮಟ್ಟದ ಪರಿಸರಕಲ್ಪಿಸಬೇಕಿದೆ ಎಂದರು. ದೇಶದಲ್ಲಿ ಬಾಲಕಾರ್ಮಿಕರು, ಭಿಕ್ಷಾಟನೆ, ಮಾನವ ಕಳ್ಳ ಸಾಗಾಣಿಕೆ, ಬಾಲ್ಯ ವಿವಾಹ, ಪೋಕ್ಸೋದಂತಹ ಬೆಳವಣಿಗೆಗಳು ಕಂಡುಬರುತ್ತಿರುವುದು ವಿಷಾಧನೀಯ ಸಂಗತಿಯಾಗಿದ್ದು, ಬಡತನ ಮತ್ತು ಶಿಕ್ಷಣ ಕೊರತೆ ಪ್ರಮುಖಕಾರಣವಾಗಿದೆಎಂದರು.ಮಕ್ಕಳ ರಕ್ಷಣೆಯಲ್ಲಿಎನ್‌ಜಿಒ ಗಳ ಪಾತ್ರವೂ ಸಹ ಮುಖ್ಯವಾಗಿದ್ದು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತುರೀಡ್ಸ್‌ ಸಂಸ್ಥೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಈ ಪುಸ್ತಕ ಹೊರತರಲಾಗಿದ್ದು, ಶಾಲೆಗಳು, ಗ್ರಂಥಾಲಯಗಳಲ್ಲಿ ಇರಿಸಲಾಗುವುದು.ಮುಖ್ಯವಾಗಿ ಶಾಲೆಗಳಲ್ಲಿ ಮುಂಜಾನೆಯ ಪ್ರಾರ್ಥನೆಯ ನಂತರ ಬಾಲ್ಯ ವಿವಾಹ, ಪೋಕ್ಸೊ ಕಾಯ್ದೆಗಳ ಕುರಿತು ಮಾಹಿತಿ ನೀಡಬೇಕು.ಬಾಲ್ಯವಿವಾಹವಾಗುವುದಿಲ್ಲ ಎಂದು ಮಕಳ್ಳಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲು ತಿಳಿಸಬೇಕು ಎಂದರು.  

ಮಗುವಿಗೊಂದು ಮರ-ಶಾಲೆಗೊಂದು ವನ ಅಭಿಯಾನ” ಕಾರ್ಯಕ್ರಮದಡಿಎಲ್ಲಾ ಶಾಯೆಗಳಲ್ಲಿ ಗಿಡ ನೆಡುವಕಾರ್ಯಕ್ರಮ ಹಮ್ಮಿಕೊಂಡು, ಅವುಗಳ ಪೋಷಣೆಯ ಹೊಣೆಗಾರಿಗೆ ಮಕ್ಕಳಿಗೆ ನೀಡಬೇಕು.ಮಕ್ಕಳಿಗೆ ಕಾಯ್ದೆ-ಕಾನೂನುಗಳು ಎಷ್ಟು ಮುಖ್ಯವೋ, ಪರಿಸರದಲ್ಲಿಗಿಡ-ಮರಗಳು ಅಷ್ಟೇ ಮುಖ್ಯವಾಗಿದೆಎಂದರು.ಇದೇ ವೇಳೆ ನ್ಯಾಯಾಧೀಶರುಕಾರ್ಗಿಲ್ ವಿಜಯ ದಿವಸ ಅಂಗವಾಗಿ ಹುತಾತ್ಮರಾದಯೋಧರಿಗೆಗೌರವ ನಮನ ಸಲ್ಲಿಸಿದರು.ಜಿಲ್ಲಾಧಿಕಾರಿ ಪ್ರಶಾಂತ್‌ಕುಮಾರ್ ಮಿಶ್ರಾಅವರುಅಧ್ಯಕ್ಷತೆ ವಹಿಸಿ ಮಾತನಾಡಿ, ಕಲ್ಯಾಣಕರ್ನಾಟಕ ಭಾಗದ ವ್ಯಾಪ್ತಿಯಲ್ಲಿ ಮಕ್ಕಳ ಶೈಕ್ಷಣಿಕಅಭಿವೃದ್ಧಿಗೆ ಹೆಚ್ಚಿನಒತ್ತು ನೀಡುವುದುಅಗತ್ಯವಾಗಿದೆ .ಮಕ್ಕಳ ರಕ್ಷಣೆಗಿರುವ ಕಾನೂನುಗಳನ್ನು ಪ್ರತಿಯೊಬ್ಬರೂ ತಿಳಿದು, ಇತರರಿಗೂ ತಿಳಿಸುವ ಕೆಲಸವಾಗಬೇಕಿದೆಎಂದು ಹೇಳಿದರು.ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಎಲ್ಲಾ ಇಲಾಖೆಗಳು ಸೇರಿಕೈಜೋಡಿಸೋಣಎಂದರು. 

ರೀಡ್ ಸಂಸ್ಥೆಯಕಾರ್ಯನಿರ್ವಾಹಕ ನಿರ್ದೇಶಕ ಸಿ.ತಿಪ್ಪೇಶಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.ಕರ್ನಾಟಕರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾಆಯೋಗದ ನಿಕಟಪೂರ್ವ ಸದಸ್ಯ ಡಾ.ಹೆಚ್‌.ಸಿ.ರಾಘವೇಂದ್ರ ಅವರು ಪುಸ್ತಕ ಪರಿಚಯ ಮಾಡಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದಅಭಿವೃದ್ಧಿಅಧ್ಯಯನ ವಿಭಾಗದ ಪ್ರಾಧ್ಯಾಪಕಡಾ.ಜನಾರ್ಧನಅವರುಕಾರ್ಯಾಗಾರ ನಡೆಸಿದರು. ಕಾರ್ಯಕ್ರಮಕ್ಕೂ ಮುನ್ನ “ಮಗುವಿಗೊಂದು ಮರ-ಶಾಲೆಗೊಂದು ವನ ಅಭಿಯಾನ” ಕಾರ್ಯಕ್ರಮದಡಿ ನ್ಯಾಯಾಲಯದಆವರಣದಲ್ಲಿಗಣ್ಯರುಗಿಡ ನೆಟ್ಟು ನಿರೂಣಿಸಿದರು. ಈ ಸಂದರ್ಭದಲ್ಲಿಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದರಾಜೇಶ್‌ಎನ್‌.ಹೊಸಮನೆ, ಬಳ್ಳಾರಿ ಪ್ರಾದೇಶಿಕ ವಿಭಾಗದಅರಣ್ಯಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿತೋಶನ್‌ಕುಮಾರ್ ಸೇರಿದಂತೆಜಿಲ್ಲಾ ನ್ಯಾಯಾಲಯದ ವಿವಿಧ ನ್ಯಾಯಾಧೀಶರು, ಎಲ್ಲಾಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿ.ಆರಿ​‍್ಸ., ಸಿ.ಆರಿ​‍್ಸ ಇ.ಸಿ.ಓ, ಕಾರ್ಮಿಕ ಅಧಿಕಾರಿಗಳು, ಪಿ.ಡಿ-ಎನ್‌.ಸಿ.ಎಲ್‌.ಪಿ, ಮಕ್ಕಳ ವಿಶೇಷ ಪೊಲೀಸ್‌ಘಟಕ ಸಿಬ್ಬಂಧಿಗಳು, ಡಿ.ಸಿ.ಪಿ.ಓ ಸಿಬ್ಬಂದಿಗಳು, ಚೈಲ್ಡ್‌ ಲೈನ್ ಸಿಬ್ಬಂಧಿಗಳು, ಅಂಗನವಾಡಿ ಮೇಲ್ವಿಚಾರಕರು, ಪ್ಯಾರಾ ಲೀಗಲ್ ವಾಲೆಂಟೀಯರ್ಸ, ಎಲ್ಲಾ ಸ್ವಯಂ ಸೇವಾ ಸಂಸ್ಥೆಯ ಮುಖ್ಯಸ್ಥರುಗಳು, ರೀಡ್ಸ್‌ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.