ಕಾರವಾರದಲ್ಲಿ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ
Joyous Eid Milad procession in Karwar
ಕಾರವಾರ 26: ಪವಿತ್ರ ಈದ್ ಮಿಲಾದ್ ಅಂಗವಾಗಿ ಕಾರವಾರ ನಗರದ ಸುನ್ನಿ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಬುಧವಾರ ಭವ್ಯ ಮೆರವಣಿಗೆ ನಡೆಯಿತು. ನಗರದ ಮದೀನಾ ಜಾಮಿಯಾ ಮಸೀದಿಯಿಂದ ಆರಂಭವಾದ ಮೆರವಣಿಗೆಯು ಹೈ ಚರ್ಚ್ ರಸ್ತೆ, ಸವಿತಾ ಸರ್ಕಲ್, ಸುಭಾಷ್ ಸರ್ಕಲ್, ಶಿವಾಜಿ ಸರ್ಕಲ್, ಹೂವಿನ ಚೌಕ ಹಾಗೂ ಕಾಜುಬಾಗ್ ಮಾರ್ಗವಾಗಿ ಸಾಗಿತು. ಬಳಿಕ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಸಮಾರೋಪಗೊಂಡಿತು.
ಮೆರವಣಿಗೆಯಲ್ಲಿ ನೂರಾರು ಮುಸ್ಲಿಂ ಬಾಂಧವರು, ಸಾರ್ವಜನಿಕರು ಹಾಗೂ ಪುಟಾಣಿ ಮಕ್ಕಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ ಅವರ ಸಂದೇಶಗಳನ್ನು ಸ್ಮರಿಸಿ ಶಾಂತಿ, ಸೌಹಾರ್ದತೆ, ಸಹಬಾಳ್ವೆ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಸಾರಲಾಯಿತು.
ಮದೀನಾ ಜಾಮಿಯಾ ಮಸೀದಿ ಇಮಾಮ್ ಶಕೀಲ್ ಅನ್ಸಾರಿ, ಹಫೀಜ್ ಜುನೈದ್ ರಜಾ, ಶಂಶುದ್ದೀನ್ ನದಾಫ್, ಕಾರವಾರ ಸುನ್ನಿ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ಮೊಬೈಲ್ ಮುಬಾಶಿರ್ ಮಾಡ್ಲಿಕ್, ಕಾರ್ಯದರ್ಶಿಗಳಾದ ಆಸಿಫ್ ಶೇಖ್ ಹಾಗೂ ಸಲೀಂ ಶೇಖ್, ಫಯಾಜ್ ಶೇಖ್, ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸಂಯೋಜಕ ಸೈಯದ್ ಅಶ್ರಫ್ ಖಾದ್ರಿ, ಅಸ್ಲಂ ಬುಖಾರಿ, ಹೈದರ್ ಶೇಖ್, ಇಮ್ರಿಯಾಜ್ ಬುಖಾರಿ, ಮುರಹುಮಿಲ್ ಮಾಡ್ಲಿಕ್, ಎಫ್.ಡಿ. ಶೇಖ್, ಸಮೀರ್ ಶೇಖ್, ನೂರ್ ಖಾನ್, ಅಯೂಬ್ ಖಾನ್, ಮುಬಾಸಿರ್ ಶೇಖ್, ರಶೀದ್ ಶೇಖ್ ಹಾಗೂ ಶಫಿ ಶೇಖ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 