ಮೀಡಿಯಾ ಕ್ಲಬ್ ನಿಂದ ಸನ್ಮಾನ ಸರ್ಕಾರಿ ಸೌಲಭ್ಯ ಪಡೆಯಲು ಪತ್ರಕರ್ತರು ಒಂದಾಗಿ- ರಾಜ್ಯ ಮಾಹಿತಿ ಆಯುಕ್ತ ವೆಂಕಟಸಿಂಗ್
Journalists unite to receive honorary government benefits from Media Club - State Information Commis
ಕೊಪ್ಪಳ 21: ಸರ್ಕಾರಿ ಸೌಲಭ್ಯ ಪಡೆಯಲು ಪತ್ರಕರ್ತರು ಒಂದಾಗಬೇಕು ಎಂದು ಮಾಹಿತಿ ಹಕ್ಕು ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತ ವೆಂಕಟ್ ಸಿಂಗ್ ಹೇಳಿದರು.ನಗರದ ಮೀಡಿಯಾ ಕ್ಲಬ್ ನಲ್ಲಿ ನಡೆದ ರಾಜ್ಯ ಮಾಹಿತಿ ಆಯೋಗದ ಆಯುಕ್ತರಿಗೆ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಸರ್ಕಾರ ಐದು ಜನ ಪತ್ರಕರ್ತರನ್ನು ಮಾಹಿತಿ ಆಯುಕ್ತರನ್ನಾಗಿ ಮಾಡಿರುವುದು ದೇಶದಲ್ಲಿಯೇ ದಾಖಲೆ. ಜನಸ್ನೇಹಿ ಕಾಯ್ದೆಯ ಆಶಯ ಈಡೇರಲಿದೆ ಎಂದು ಪತ್ರಕರ್ತರನ್ನು ಆಯುಕ್ತ ಆಯ್ಕೆ ಮಾಡಿದ್ದಾರೆ. 38 ವರ್ಷ ಪತ್ರಕರ್ತನಾಗಿ ಕೆಲಸ ಮಾಡಿದ್ದ ನಮಗೆ, ಸರ್ಕಾರಿ ಸೌಲಭ್ಯ ಕೊಡಿಸುವಲ್ಲಿ ಲೋಪ ಆದಾಗ, ಸರಿಪಡಿಸುವುದು ಪತ್ರಕರ್ತರ ಜವಾಬ್ದಾರಿಯಾಗಿದ್ದು, ಇದೇ ಉದ್ದೇಶ ಹೊಂದಿದ ಮಾಹಿತಿ ಆಯೋಗಕ್ಕೆ ಕಲಬುರ್ಗಿ ಪೀಠಕ್ಕೆ ನೇಮಕ ಮಾಡಿದ್ದಾರೆ.
ಈ ಭಾಗದ ವ್ಯಾಜ್ಯ ಬಗೆಹರಿಸುತ್ತಿದ್ದೇವೆ. ಈ ಶ್ರೇಯಸ್ಸು ಪತ್ರಕರ್ತನಾಗಿದ್ದಕ್ಕೆ ಸಿಕ್ಕಿದೆ. ಸರ್ಕಾರಿ ಸೌಲಭ್ಯ ಪಡೆಯಲು ಪತ್ರಕರ್ತರು ಒಂದಾಗಬೇಕು ಎಂದರು.ಸಿದ್ದರಾಮಯ್ಯನವರು 3 ಸಾವಿರದಿಂದ 15 ಸಾವಿರಕ್ಕೆ ಹೆಚ್ಚಿಸಲಾಗಿದೆ. ಈ ಪ್ರಮಾಣದಲ್ಲಿ ಕೆಲವು ಪತ್ರಕರ್ತರಿಗೆ ವೇತನವಿಲ್ಲ. ಬಸ್ ಪಾಸ್ ಸೌಲಭ್ಯ ನೀಡಲಾಗಿದೆ. ಕಠಿಣ ನಿಯಮಗಳಿದ್ದು, ಸರಳೀಕರಣಕ್ಕೆ ಗೊಳಿಸಲು ತಿಳಿಸಿದ್ದೇವೆ. ತಮ್ಮ ಸ್ವಾರ್ಥಕ್ಕಾಗಿ ಸಂಘಟನೆಗಳನ್ನು ಬಲಿಕೊಡುತ್ತಿದ್ದಾರೆ. ಪತ್ರಕರ್ತರು ಕುಟುಂಬವಿದ್ದಂತೆ. ನಮ್ಮಲ್ಲಿ ಜಾತಿ ಬರುವುದಿಲ್ಲ ಎಂದರು.ಬೆಂಗಳೂರು ಪೀಠದ ರಾಜ್ಯ ಮಾಹಿತಿ ಆಯುಕ್ತ ಬದ್ರುದ್ದೀನ್ ಮಾತನಾಡಿ, ಮಾಧ್ಯಮದಲ್ಲಿ ಕೆಲಸ ಮಾಡಿದ ಅನುಭವ, ವೃತ್ತಿಯಲ್ಲಿ ಗೌರವ ಉಳಿಸಿಕೊಂಡವರನ್ನು ಆಯ್ಕೆ ಮಾಡಿದ್ದಕ್ಕೆ ಅವಕಾಶ ಇದೆ.
ಹಾಗಾಗಿ ನಮ್ಮನ್ಮು ನೇಮಿಸಿದ್ದಾರೆ. ವೃತ್ತಿ, ವೃತ್ತಿಭಾಂಧವರಿಂದ ಅವಕಾಶ ಸಿಕ್ಕಿದೆ. ಮಾಧ್ಯಮ ಸಮಿತಿಯಲ್ಲಿ, ಅಕಾರ್ಡೆಷನ್ ಸಮಿತಿಯಲ್ಲಿ ಕೆಲಸ ಮಾಡಿದ್ದಕ್ಕೆ ಪತ್ರಕರ್ತರ ಸ್ಥಿತಿಗತಿ ಗೊತ್ತಿದೆ. ಅನ್ನ ಕೊಟ್ಟ ವೃತ್ತಿ. ಬದುಕು ಕಟ್ಟಿಕೊಟ್ಟಿದೆ. ಶ್ರದ್ಧೆ, ತಾಳ್ಮೆಯಿಂದ ಇರಬೇಕು. ಹೃದಯ, ಮನಸ್ಸು ಪತ್ರಕರ್ತನ ಬಗ್ಗೆಯೇ ಮಿಡಿಯುತ್ತದೆ. ಕಲ್ಯಾಣ ಕರ್ನಾಟಕ ಭಾಗ ಪತ್ರಕರ್ತರು ಭಿನ್ನಾಭಿಪ್ರಾಯ ಇರುತ್ತವೆ. ವೃತ್ತಿ ಗೌರವಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕು. ಗೌರವ ಉಳಿಸಿಕೊಂಡು ಹೋದರೆ, ನಮಗೆ ನೀಡುವ ಗೌರವವಾಗಿದೆ ಎಂದರು.ಬೆಂಗಳೂರು ಪೀಠದ ರಾಜ್ಯ ಮಾಹಿತಿ ಆಯುಕ್ತ ಡಾ.ಹರೀಶಕುಮಾರ ಮಾತನಾಡಿ, ನಿರ್ಭಿತಿಯಿಂದ ಸಿದ್ಧಾಂತಗಳಿಗೆ ಅಂಟಿಕೊಳ್ಳದೇ ಕೆಲಸ ಮಾಡುತ್ತದೆ.
ಪ್ರಜಾಪ್ರಭುತ್ವದಲ್ಲಿ ಅಧಿಕಾರಿಗಳಿಗೆ ಪತ್ರಕರ್ತರ ಬಗ್ಗೆ ಭಯವಿದೆ. ಸಮಾಜವನ್ನು ಸರಿದಾರಿಗೆ ತರುವಲ್ಲಿ ಕೆಲಸ ಮಾಡಿದವರೆ. ಸರ್ಕಾರ ಸೌಲತ್ತು ನೀಡಿದೆ. ಕಾನೂನು ಪರಿಣಾಮ ಅನುಷ್ಠಾನ ಮಾಡಬೇಕು. ನ್ಯಾಯಾಲಯ ನಡೆಸುವುದರ ಜತೆಗೆ ರಾಜ್ಯಪ್ರವಾಸ ಮಾಡಬೇಕು ಎಂದರು.ಮೀಡಿಯಾ ಕ್ಲಬ್ ಅಧ್ಯಕ್ಷ ದೇವು ನಾಗನೂರು, ಪ್ರಧಾನ ಕಾರ್ಯದರ್ಶಿ ದತ್ತು ಕಮ್ಮಾರ, ಉಪಾಧ್ಯಕ್ಷ ಮುಕ್ಕಣ್ಣ ಕತ್ತಿ, ಖಜಾಂಚಿ ಅನಿಲ ಬಾಚನಹಳ್ಳಿ, ಹಿರಿಯ ಪತ್ರಕರ್ತರಾದ ಸೋಮರಡ್ಡಿ ಅಳವಂಡಿ, ಹುಸೇನ್ ಪಾಷಾ, ದೊಡ್ಡೇಶ ಎಲಿಗಾರ, ರವೀಂದ್ರ ವಿ.ಕೆ., ವಿಠ್ಠಲ್ ದುತ್ತರಗಿ, ವೀರಯ್ಯ ಹಿರೇಮಠ್, ರಮೇಶ್ ಗಾಣದಾಳ, ನಾಭಿರಾಜ್ ದಸ್ತೇನವರ್, ವಿನಯ್ ಸಿಂಗ್, ರವಿ ಪಟವಾರಿ, ಪರಮೇಶ್ ರೆಡ್ಡಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 