ರಾಷ್ಟ್ರ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ದೊಡ್ಡದು : ಸಿದ್ದು ಸವದಿ

ರಾಷ್ಟ್ರ ನಿರ್ಮಾಣದಲ್ಲಿ ಪತ್ರಕರ್ತರ ಪಾತ್ರ ದೊಡ್ಡದು : ಸಿದ್ದು ಸವದಿ Journalists play a big role in nation building: Siddu Savadi

ಮಹಾಲಿಂಗಪುರ 28: ದೇಶ ಕಟ್ಟುವ ಕೆಲಸ ಎಲ್ಲರೂ ಮಾಡಬೇಕು ದೇಶವೇ ಮೊದಲು ದೇಶ ಇದ್ದರೆ ಎಲ್ಲರೂ ಸುಂದರವಾಗಿ ಬದುಕುಬಹುದು ಸದೃಢ ದೇಶದ ನಿರ್ಮಾಣದಲ್ಲಿ ಪತ್ರಿಕಾ ರಂಗದ ಪಾತ್ರ ಬಹಳ ದೊಡ್ಡದಿದೆ ಎಂದು ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಹೇಳಿದರು. 

ಅವರು ನಗರದ ಪುರಸಭೆ ಸಭಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಘಟಕ ಮಹಾಲಿಂಗಪುರ ಇದರ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಸಿ ಮಾತನಾಡಿ ದೇಶದ ಸುಭದ್ರ ಆಡಳಿತ ನಡೆಸುವಲ್ಲಿ ಶಾಸಕಾಂಗ, ಕಾಯಾಂರ್ಗ, ನ್ಯಾಯಾಂಗ ಈ ಮೂರು ಪಿಲ್ಲರಗಳ ಜೊತೆಗೆ ಪತ್ರಿಕಾರಂಗ ನಾಲ್ಕನೇ ಪಿಲ್ಲರಾಗಿ ಬಹು ಮುಖ್ಯ ಪಾತ್ರ ವಹಿಸುತ್ತದೆ. 

ಪತ್ರಕರ್ತರು ನಿರ್ಬಿಡೇಯಿಂದ ನಿಷಪಕ್ಷಪಾತವಾಗಿ ವರದಿ ಮಾಡಿ ಸರ್ಕಾರ ಮತ್ತು ಸಮಾಜದ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸಿದರೆ ಸ್ವಸ್ತ ಸಮಾಜ ನಿರ್ಮಿಸಲು ಸಾಧ್ಯ ಸ್ವಚ್ಛ ಆಡಳಿತ ನಡೆಸಲು ಸಾಧ್ಯವಾಗುತ್ತದೆ.ಉದಾತ ದೇಯ ದೋರಣೆ ಇಟ್ಟುಕೊಂಡು ಕೆಲಸ ಮಾಡಿ ದೇಶದ ಹಿತ ಕಾಪಾಡಬೇಕು. ಹಿಂದೆ ಲಕ್ಷಾಂತರ ಜನ ತಮ್ಮ ಜೀವ ಕೊಟ್ಟು ಸ್ವಾತಂತ್ರ ತಂದು ಕೊಟ್ಟಿದ್ದಾರೆ ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಗುರುತರ ಈ ನಾಲ್ಕು ಪಿಲ್ಲರಗಳ ಮೇಲೆ ಜವಾಬ್ದಾರಿ ಇದೆ ಎಂದರು. 

ಮಾಶಾಸನ ಬೇಡಿಕೆ : ನಿವೃತ್ತ ಪತ್ರಕರ್ತರಿಗೆ ಸರ್ಕಾರ ಪ್ರತಿ ತಿಂಗಳು ಕನಿಷ್ಠ 15000 ಸಾವಿರ ರೂಪಾಯಿ ಮಾಶಾಸನ ಕೊಡುವ ಮೂಲಕ ಪತ್ರಕರ್ತರ ಜೀವನಕ್ಕೆ ಭದ್ರತೆ ಒದಗಿಸುವ ಬೇಡಿಕೆಯನ್ನು ಸ್ವೀಕರಿಸಿದ ಶಾಸಕರು ಮುಂಬರುವ ಅಧಿವೇಶನದಲ್ಲಿ ಆಡಳಿತದಲ್ಲಿರುವ ಸರ್ಕಾರದ ಗಮನಕ್ಕೆ ತಂದು ನ್ಯಾಯ ಒದಗಿಸುವ ಭರವಸೆ ನೀಡಿದರು. 

ನಂತರ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಆನಂದ ದಲಭಂಜನ ಜನರ ಹೃದಯ ಸ್ಪರ್ಶಿ ಸುದ್ದಿಗಳಿಗೆ ಆದ್ಯತೆ ಕೊಟ್ಟು ಸುದ್ದಿ ಮಾಡಿದರೆ ಜನ ಮೆಚ್ಚುಗೆಗೆ ಪಾತ್ರರಾಗಬಹುದು. ಪಕ್ಷಪಾತ ಮಾಡದೇ ಯಾವುದೇ ಒತ್ತಡಕ್ಕೆ ಒಳಗಾಗದೆ ನಿರ್ಬಿತಿಯಿಂದ ಸುದ್ದಿ ಮಾಡಿ ಪತ್ರಿಕೆಯನ್ನು ಜನ ಹುಡುಕಿಕೊಂಡು ಓದುವ ಹಾಗೆ ಮಾಡಿದರೆ ಇಂದಿನ ಡಿಜಿಟಲ ಮತ್ತು ಮೊಬೈಲ್ ಯುಗದಲ್ಲಿ ಪತ್ರಿಕೆಗಳು ಬದುಕಲು ಸಾಧ್ಯವಿದೆ. 

ನಿವೇಶನಕ್ಕೆ ಕೊಡಲು ಆಗ್ರಹ : ಈಗಾಗಲೇ ರಾಜ್ಯ ಸರ್ಕಾರ ಪತ್ರ ಕರ್ತರಿಗೆ ನಿವೇಶನ ಕೊಡುಲು ಅದೇಶಿಸಿದ್ದು ಅದರಂತೆ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಪತ್ರಕರ್ತರಿಗೆ ನಿವೇಶನ ಕೊಡುವ ವ್ಯವಸ್ಥೆ ಮಾಡಬೇಕೆಂದು ಶಾಸಕರಿಗೆ ಅಗ್ರಹ ಮಾಡಿದರು. 

ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕರು ಮತ್ತು ಮಾಜಿ ಪತ್ರಕರ್ತರಾದ ದೇವೇಂದ್ರ ಬಿಸ್ವಾಗರ ರಾಜಕೀಯದಲ್ಲಿ ಪಾಳೇಗಾರಿಕೆ ಇರಬಾರದು ಅದು ಪ್ರಜಾಪ್ರಭುತ್ವಕ್ಕೆ ಮಾರಕ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಅವರು ಎಲ್ಲ ಅಧಿಕಾರ ಹೊಂದಿದ್ದು ಪ್ರತಿನಿಧಿಗಳು ಆರಿಸುವ ಮತ್ತು ಇಳಿಸುವ ಅಧಿಕಾರ ಹೊಂದಿದ್ದು ಅವರಿಂದಲೇ ಸರ್ಕಾರ ಮತ್ತು ದೇಶ ಸುಭದ್ರವಾಗುತ್ತದೆ. ಎಂದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತರಾದ ಶಿವಲಿಂಗ ಸಿದ್ನಾಳ ಪತ್ರಿಕೆಗಳು ನಡೆದು ಬಂದ ದಾರಿ ಅಂದಿನ ವ್ಯವಸ್ಥೆಗೆ ಮತ್ತು ಇಂದಿನ ಡಿಜಿಟಲ್ ವ್ಯವಸ್ಥೆಗೆ ಬಹಳಷ್ಟು ವ್ಯತ್ಯಾಸವಿದ್ದು ಅದಕ್ಕೆ ಹೊಂದಿಕೊಂಡು ಕೆಲಸ ಮಾಡಬೇಕು ಎಂದರು. 

ಸ್ಥಳೀಯ ಕಾ ನಿ ಪ ಸಂಘದ ಅಧ್ಯಕ್ಷರು ಇಂದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹೇಶ ಮಣ್ಣಯ್ಯನವರಮಠ ಮಾತನಾಡಿದರು ಶ್ರೀಮತಿ ಕವಿತಾ ಕೊಣ್ಣೂರ,ಎಸ್ ಎಸ್ ಈಶ್ವರ​‍್ಪಗೋಳ ಏನ್ ಎ ಲಮಾಣಿ, ಹಣಮಂತ ನಾವಿ, ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಮುಖಂಡರಾದ ಮಹಾದೇವ ಮಾರಾಪುರ, ಸಂಗಪ್ಪ ಹಲ್ಲಿ, ಮಲ್ಲಿಕಾರ್ಜುನ ಹೆಗ್ಗಳಗಿ, ಶಂಕರಗೌಡ ಪಾಟೀಲ,ಗಂಗಾಧರ ಮೇಟಿ, ಶಿವಲಿಂಗ ಟಿರ್ಕಿ, ಪರಶು ಕೊಣ್ಣೂರ ಜಿ ಎಸ್ ಗೊಂಬಿ, ನಿಂಗಪ್ಪ ಬಾಳಿಕಾಯಿ, ಮಾರುತಿ ದಳವಾಯಿ, ರಾಮು ಮಾಂಗ,ರವಿ ಜವಳಗಿ, ಪ್ರವೀಣ ಪಾಟೀಲ, ವಿಜಯ ಸಬಕಾಳೆ,ಎಂ ಆಯ್ ಡಾಂಗೆ, ಮಾನಿಂಗಪ್ಪ ಅವರಾಧಿ, ಬಸವರಾಜ ಮೇಟಿ, ಎಂ ಆರ್ ತೇರದಾಳ, ಈರಣ್ಣ ಹಲಗತ್ತಿ, ಹುಚ್ಛೆಶ ವಡ್ಡರ, ಅಣ್ಣೆಶ ಉಳ್ಳಾಗಡ್ಡಿ, ಮಹೇಶ ಜಿಡ್ಡಿಮನಿ, ಚನ್ನಪ್ಪ ಪಟ್ಟಣಶೆಟ್ಟಿ, ಚನ್ನಬಸು ಯರಗಟ್ಟಿ, ಬಸವರಾಜ ಹುಕ್ಕೇರಿ, ಅಮಿತ ಮದ್ದಿನಮಠ, ಮಹಾಲಿಂಗ ಮಾಳಿ, ಸಿ ಎಸ್ ಮಠಪತಿ, ಪುಟ್ಟು ಕರಡಿ,ರವಿ ಹಲಸಪ್ಪಗೋಳ, ಕಾಂತು ಹಡಪದ,ಮನು ಕರಡಿ,ಕಿರಣ ಸಣ್ಣಕ್ಕಿ, ಬಸವರಾಜ ಮಡಿವಾಳ ಸುಶೀಲಾ ಉತ್ತಂಗಿ, ಪತ್ರಕರ್ತರಾದ ಜಯರಾಂ ಶೆಟ್ಟಿ, ಮೀರಾ ತಟಗಾರ, ರಾಘವೇಂದ್ರ ನಿಲ್ಲನ್ನವರ, ರಾಜೇಂದ್ರ ನಾವಿ, ಸಿರಾಜ್ ಹೊರಟ್ಟಿ, ಇಲಾಹಿ ಜಮಖಂಡಿ, ಹನೀಫ್ ಚಿಕ್ಕೋಡಿ, ಮಹಾದೇವ ಕುಲಗುಡ, ಸೇರಿ ಹಲವರು ಇದ್ದರು. ಪತ್ರಕರ್ತರಾದ ಚಂದ್ರು ಮೊರೆ ನಿರೂಪಿಸಿದರು. ಪತ್ರಕರ್ತರಾದ ಲಕ್ಷ್ಮಣ ಕಿಶೋರ ಸ್ವಾಗತಿಸಿದರು, ನಾರನಗೌಡ ಉತ್ತಂಗಿ ವಂದಿಸಿದರು. ಮಹಾಲಕ್ಷ್ಮಿ ಗುಳದಳ್ಳಿ, ವರ್ಷಿಣಿ ಸಗರಿ ಪ್ರಾರ್ಥನೆ ಗೀತೆ ಹಾಡಿದರು. ಉನ್ನತ ಶ್ರೇಣಿಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಪಾಸಾದ ಪತ್ರಕರ್ತರ ಮಕ್ಕಳಾದ ಸಿದ್ದಾರೂಢ ಮೊರೆ ಮತ್ತು ವರ್ಷಿತಾ ಉತ್ತಂಗಿ ಮತ್ತು ಗಣ್ಯಮಾನ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.