ಪತ್ರಕರ್ತರ ಬರಹಗಳು ನನ್ನ ನೈತಿಕ ಬಲ ಹೆಚ್ಚಿಸಲು ಪ್ರೇರಣೆ: ಸಚಿವ ತಿಮ್ಮಾಪೂರ
ಲೋಕದರ್ಶನ ವರದಿ
ಮುಧೋಳ 10: ಪತ್ರಕರ್ತರ ಬರಹಗಳು ನನ್ನ ನೈತಿಕ ಬಲ ಹೆಚ್ಚಿಸಲು ಪ್ರೇರಣೆಯಾಗಿವೆ ಎಂದು ಸಕ್ಕರೆ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಅವರು ನಗರದ ಕಾನಿಪ ಸಂಘದ ಕಾಯರ್ಾಲಯದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಭೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿರುವಾಗ ಟೀಕೆ, ಟಿಪ್ಪಣೆಗಳನ್ನು ಮಾಡುತ್ತಿರುವಾಗ ಸಹಜ ರೀತಿಯಲ್ಲಿ ಮಾತನಾಡಿರುವಂತೆ, ಸಂಬಂಧಿಸಿದ ವ್ಯಕ್ತಿ ಗಳಿಗೆ ಮಾತ್ರ ಬಿಸಿ ಮುಟ್ಟುವಹಾಗೆ ನಿಮ್ಮ ಬರಹ ಎಚ್ಚರಗೊಳಿಸಿವೆ. ನಾನು ಮುಧೋಳ ಮತಕ್ಷೇತ್ರದಿಂದ ಮೊದಲ ಬಾರಿಗೆ ಸಚಿವನಾಗಿರುವುದು, ಮೂರುಬಾರಿ ಸೋತರೂ ಸಚಿವನ್ನಾಗಿರುವುದು, ಅಭಿವೃದ್ಧಿಗೆ ಬೆನ್ನು ಚಪ್ಪರಿಸುವ ಹಾಗೂ ತಪ್ಪಿದಾಗ ತಿದ್ದಿ ಹೇಳಿರುವುದು ನನ್ನ ಸ್ಮರಣೆಯಲ್ಲಿದೆ. ನಾನು ನಿಮ್ಮ ಬರಹ ಹಾಗೇ ಹೀಗೆ ಎಂದು ನಮೂದಿಸಿದರೂ ನಿಮ್ಮ ಸೌಹಾರ್ದತೆ,ಆಲೋಚನೆ,ಬರಹರೂಪದಲ್ಲಿ ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಮಾಡಿರುವುದು ಅಭಿನಂದನಾರ್ಹ. ಪತ್ರಕರ್ತರ ಸನ್ಮಾನ ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದರು.
ನನ್ನ ಪಕ್ಷದ ಹೈಕಮಾಂಡ್ ರಾಹುಲ್ ಗಾಂಧಿ,ರಾಜ್ಯ ನಾಯಕರಾದ ಸಿದ್ಧರಾಮಯ್ಯ, ಜಿ.ಪರಮೇಶ್ವರ, ದಿನೇಶ ಗುಂಡುರಾವ,ಈಶ್ವರ ಖಂಡ್ರೆ, ಮಲ್ಲಕಾಜರ್ುನ ಖಗರ್ೆ ಅವರು ನನ್ನ ಬೆಂಬಲಕ್ಕೆ ನಿಂತು ಮತ್ತೋಮ್ಮೆ ಅವಕಾಶ ನೀಡಿದ್ದಾರೆ. ಜನರ ಸೇವೆ ಮಾಡುವ ಸಿಕ್ಕಿದೆ.ನನ್ನ ಬಿಡುವಿಲ್ಲದ ಕೆಲಸಗಳ ಮಧ್ಯೆ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ಅಭಿವೃದ್ಧಿಗೆ ನಿಮ್ಮ ಸಲಹೆ, ಮಾರ್ಗದರ್ಶನ ಅವಶ್ಯವಿದೆ ಎಂದರು. ಕಾನಿಪ ಸಂಘದ ಅಧ್ಯಕ್ಷ ಬಿ.ರತ್ನಾಕರಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ತಾಪಂ ಅಧ್ಯಕ್ಷ ತಿಮ್ಮಣ್ಣ ಬಟಕುಕರ್ಿ, ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ನಾಯಿಕ, ನಗರ ಘಟಕದ ಅಧ್ಯಕ್ಷ ದಾನೇಶ ತಡಸಲೂರ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ಕಡಪಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ಅಶೋಕ ಕುಲಕಣರ್ಿ, ಉದಯ ಕುಲಕಣರ್ಿ, ಮಹಾಂತೇಶ ಕರೆಹೊನ್ನ, ಗಣಪತಿರಾವ ಮಾನೆ, ಗಣೇಶ ಮೇತ್ರಿ,ಬಿ.ಎಚ್.ಬೀಳಗಿ, ಜಗದೀಶ ಜೀರಗಾಳ,ಎಸ್.ಎಂ.ಹೊರಟ್ಟಿ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಇದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 