‘ಸುವರ್ಣ ಕರ್ನಾಟಕ ಯುವ ಮಾಧ್ಯಮ ಮಿತ್ರ ರಾಜ್ಯ ಪ್ರಶಸ್ತಿ’ಗೆ ಪತ್ರಕರ್ತ ಮುರಗೇಶ ಗಸ್ತಿ ಆಯ್ಕೆ
Journalist Muragesha Gasthi selected for ‘Golden Karnataka Youth Media Friend State Award’
ಕಾಗವಾಡ 25: ತಾಲೂಕಿನ ಐನಾಪೂರದ ಪತ್ರಕರ್ತ ಮುರಗೇಶ ಗಸ್ತಿ ಅವರಿಗೆ ‘ಸುವರ್ಣ ಕರ್ನಾಟಕ ಯುವ ಮಾಧ್ಯಮ ಮಿತ್ರ ರಾಜ್ಯ ಪ್ರಶಸ್ತಿ’ ಲಭಿಸಿದೆ.
ಬೆಳಗಾವಿಯ ರಾಣಿ ಚೆನ್ನಮ್ಮ ಮಹಿಳಾ ಗ್ರಾಮೋದ್ಯೋಗ ವತಿಯಿಂದ ಜು.27 ರಂದು ಅಥಣಿಯ ಎಸ್‌ಎಂಎಸ್ ಕಾಲೆಜ್‌ನಲ್ಲಿ ನಡೆಯಲಿರುವ ರಾಣಿ ಚೆನ್ನಮ್ಮ ರಾಷ್ಟ್ರೀಯ ಪ್ರತಿಭೋತ್ಸವ, ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುರಗೇಶ ಗಸ್ತಿಯವರಿಗೆ ಈ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗುತ್ತಿದೆ.
ಪತ್ರಿಕೋದ್ಯಮದಲ್ಲಿ 20 ವರ್ಷಗಳಿಂದ ಗಡಿ ಭಾಗದಲ್ಲಿ ಗಣನೀಯ ಸೇವೆಯನ್ನು ಗುರುತಿಸಿ, ಅವರನ್ನು ಆಯ್ಕೆ ಮಾಡಲಾಗಿದ್ದು, ಪ್ರಸ್ತುತ ಮುರಗೇಶ ಗಸ್ತಿಯವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿ, ಹೊಸ ದಿಗಂತ ದಿನಪತ್ರಿಕೆ ಕಾಗವಾಡ ತಾಲೂಕು ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅಥಣಿ ತಾಲೂಕಿನಲ್ಲಿ ಪ್ರಾರಂಭವಾದ ದುರ್ಗಾ ದರ್ಶನ ಪಾಕ್ಷಿಕ ಪತ್ರಿಕೆ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿರಿಸಿ, ಅಥಣಿ ದರ್ಶನ, ಗಡಿನಾಡು ರಕ್ಷಣೆ ವಾರ ಪತ್ರಿಕೆಯಲ್ಲಿ ಹಲವಾರು ವರ್ಷಗಳ ವರೆಗೆ ಸಂಕಷ್ಟ ಕಾಲದಲ್ಲಿ ಸಹ ಸಂಪಾದಕ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಬಳಿಕ ಕನ್ನಡಮ್ಮ ದಿನಪತ್ರಿಕೆ, ಭಾರತ ವೈಭವ ದಿನಪತ್ರಿಕೆಯಲ್ಲಿಯೂ ಸಹ ಸೇವೆ ಸಲ್ಲಿಸಿದ್ದಾರೆ.
ಈಗಾಗಲೇ ಅವರಿಗೆ ಸನ್ 2022 ರಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ವತಿಯಿಂದ ಉತ್ತಮ ವರದಿಗಾರ ಪ್ರಶಸ್ತಿ, 2023 ರಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ವತಿಯಿಂದ 1767 ಮದ್ಯವರ್ಜನ ಶಿಬಿರದಲ್ಲಿ ಪತ್ರಕರ್ತ ಅಭಿನಂದನಾ ಪತ್ರ, 2024 ರಲ್ಲಿ ಬಿವ್ಹಿ5 ನ್ಯೂಸ್ ಚಾನಲ್ ಸಂಸ್ಥೆ ವತಿಯಿಂದ ಬೆಸ್ಟ್ ರಿಪೋರ್ಟರ್ ಆವಾರ್ಡಗಳು ಸೇರಿದಂತೆ ಇನ್ನೂ ಹಲವಾರು ಪ್ರಶಸ್ತಿಗಳು ಲಭಿಸಿವೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 