ಅಪರಿಚಿತ ವಾಹನ ಡಿಕ್ಕಿ: ಪತ್ರಕರ್ತ ಕಾನಗೊಂಡ ಸಾವು

 ಅಪರಿಚಿತ ವಾಹನ ಡಿಕ್ಕಿ: ಪತ್ರಕರ್ತ ಕಾನಗೊಂಡ ಸಾವು Journalist Kanagonda dies after being hit by unknown vehicle

ಲೋಕದರ್ಶನ ವರದಿ 

ಕ್ರೈಂ, 

ಲೋಕದರ್ಶನ ವರದಿ, 

ಅಪರಿಚಿತ ವಾಹನ ಡಿಕ್ಕಿ: ಪತ್ರಕರ್ತ ಕಾನಗೊಂಡ ಸಾವು 

ಜಮಖಂಡಿ 09: ತಾಲ್ಲೂಕಿನ ಮಧರಖಂಡಿ ಗ್ರಾಮದ ಕೆಂಪು ಕೆರೆ ಹತ್ತಿರ ಪತ್ರಕರ್ತ ಬಸವರಾಜ ಕಾನಗೊಂಡ ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ಧಾರುಣ ಘಟನೆ ಸಂಭವಿಸಿದೆ. 

ಆಲಗೂರ ಗ್ರಾಮದ ಪತ್ರಕರ್ತ ಬಸವರಾಜ ರಾಮಪ್ಪ ಕಾನಗೊಂಡ (40) ಅವರು ಬನಹಟ್ಟಿಯಿಂದ ಸ್ಕೂಟಿ ಬೈಕ್ ಮೇಲೆ ಜಮಖಂಡಿ ಕಡೆಗೆ ಬರುವ ಸಮಯದಲ್ಲಿ ಹಿಂಬದಿಯಿಂದ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆತಕ್ಕೆ ಸ್ಕೂಟಿ ಹಿಂಬದಿಯ ಚಕ್ರ ಹಾಗೂ ಇಂಜೀಯನ್ ಕಿತ್ತು ಬಿದ್ದಿದ್ದು. ಸ್ಕೂಟಿ ಬೈಕ್ ಹಿಂಬದಿ ಹಾಗೂ ಮುಂಬದಿ ಬಲ್ಪಗಳು ಹತ್ತಿದ್ದು ಇರುತ್ತದೆ.  

ಅಪರಿಚಿತ ವಾಹನ ಸ್ಕೂಟಿ ಬೈಕ್‌ಗೆ ಹಿಂಬದಿ ಬಂದು ವೇಗವಾಗಿ ಹೊಡೆದ ರಭಸಕ್ಕೆ ಪಕ್ಕದ ಹೊಲದ ಗದ್ದೆಯಲ್ಲಿ ಬಿದ್ದು ಸ್ಥಳದಲ್ಲಿಯೇ ಸಾವನ್ನಪಿದ್ದಾರೆ ಎಂದು ತಿಳಿದು ಬಂದಿರುತ್ತದೆ. ಘಟನಾ ಸ್ಥಳಕ್ಕೆ ಡಿಎಸ್‌ಪಿ, ರೋಷನ್ ಸೈಯದ ಜಮೀರ, ಸಿಪಿಐ, ಮಲ್ಲಪ್ಪ ಮಡ್ಡಿ, ಗ್ರಾಮೀಣ ಠಾಣಿ ಪಿಎಸ್‌ಐ ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದಾರೆ. ಇನ್ನೂ ಪ್ರಕರಣಕ್ಕೆ ನಿಖರವಾದ ಮಾಹಿತಿ ತಿಳಿದು ಬಂದಿರುವುದಿರುವುದಿಲ್ಲ.