ಪತ್ರಿಕಾ ವೃತ್ತಿ ಪರಮ ಪವಿತ್ರವಾದದ್ದು: ವೀರಣ್ಣ ಹುಬ್ಬಳ್ಳಿ
Journalism is a sacred profession: Veeranna Hubballi
ಯಲಬುರ್ಗಾ 06 : ರಾಜ್ಯದಾದ್ಯಂತ ಪತ್ರಿಕೆ ಹಾಗೂ ಮಾಧ್ಯಮದ ಮೂಲಕ ಬಿತ್ತರಿಸುವ ಸುದ್ದಿಯನ್ನು ಕೋಟ್ಯಂತರ ಜನರು ವೀಕ್ಷಣೆ ಮಾಡುತ್ತಾರೆ. ಅಂತಹ ಪರಮ ಪವಿತ್ರವಾದ ಪತ್ರಿಕಾ ವೃತ್ತಿಗೆ ಧಕ್ಕೆ ಬಾರದಂತೆ ಸತ್ಯ ಸಂಗತಿ ಅರಿತು ಸಮಾಜಕ್ಕೆ ಒಳ್ಳೆಯದನ್ನ ಬರೆಯುವದನ್ನ ರೂಡಿಸಿಕೊಂಡಿದ್ದಾರೆ ಎಂದು ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ ಹೇಳಿದರು.ಪಟ್ಟಣದ ಶಿಕ್ಷಕರ ಸಹಕಾರಿ ಪತ್ತಿನ ಸೌಹಾರ್ದ ಸಂಘದ ಸಭಾ ಭವನದಲ್ಲಿ ಶುಕ್ರವಾರ ಜರುಗಿದ ಹಾಯ್ ಕೊಪ್ಪಳ ಪಾಕ್ಷಿಕ ಪತ್ರಿಕೆಯ 15ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪತ್ರಿಕಾ ರಂಗ ಪ್ರಜಾಪ್ರಭುತ್ವದ ಬಲಿಷ್ಠತೆ ಹಾಗೂ ಸದೃಢ ಭಾರತ ನಿರ್ಮಾಣಕ್ಕೆ ಬಹು ಮುಖ್ಯ ಪಾತ್ರ ವಹಿಸಿದೆ. ಯಾವ ಸರ್ಕಾರಗಳು ಏನೇ ತಪ್ಪು ಮಾಡಿದರೂ ಅವರ ಬಗ್ಗೆ ಸಮಾಜಕ್ಕೆ ತಪ್ಪು ಸರಿ ಪ್ರಸಾರ ಮಾಡುವುದರ ಜೊತೆಗೆ ಸಮಾಜಮುಖಿ ಕೆಲಸದಲ್ಲಿ ತೊಡಗಿಕೊಂಡಿರುವರು ಎಂದರು.
ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ್ರ ಕೋನನಗೌಡ್ರ ಮಾತನಾಡಿ ಸಮಾಜದಲ್ಲಿ ತನ್ನದೆ ಆದಂತಹ ಛಾಪು ಮೂಡಿಸಿದೆ ಹಾಗೂ ಪತ್ರಿಕೆಗಳನ್ನ ನಡೆಸುವದು ಅಷ್ಟು ಸುಲಭದ ಮಾತಲ್ಲಾ ಆದರೆ 15 ವರ್ಷದಿಂದ ಸತತವಾಗಿ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿರುವದು ನಿಜಕ್ಕೂ ಶ್ಲಾಘನೀಯವಾದದ್ದು ಹಾಗೂ ನಾಲ್ಕನೇ ಅಂಗವಾಗಿ ಕೆಲಸ ನಿರ್ವಹಿಸುತ್ತಿರುವ ಪತ್ರಿಕೆಗಳಿಗೆ ಸರಕಾರದಿಂದ ಸೌಲಭ್ಯಗಳು ಸಿಗಲಿ ಹಾಗೂ ಅತ್ಯಂತ ಹಿಂದೂಳಿದ ತಾಲೂಕಿನಲ್ಲಿ ಹಗಲಿರುಳು ಪತ್ರಿಕೋದ್ಯಮದಲ್ಲಿ ತೋಡಗಿರುವ ಪತ್ರಕರ್ತರಿಗೆ ಸರಕಾರದ ಯಾವ ಸೌಲಭ್ಯ ದೊರೆಯದೆ ಇರುವದು ದುರಂತವೇ ಸರಿ ಸರಕಾರದಲ್ಲಿ ಕೆಲಸ ನಿರ್ವಹಿಸುವ ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕು ಎಂದರು. ಡಿ,ಕೆ,ಪರಶುರಾಮ ಛಲವಾದಿ, ಜೆಡಿಎಸ್ ತಾಲೂಕ ಅಧ್ಯಕ್ಷ ಬಸವರಾಜ ಗುಳಗುಳ್ಳಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಪಾದಕ ಸ,ಶರಣಪ್ಪ ಪಾಟೀಲ, ಮುಖಂಡರಾದ ಶರಣಗೌಡ ಉಳ್ಳಾಗಡ್ಡಿ, ಮಹೇಶ ಭೂತೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ಶಿವಮೂರ್ತಿ ಇಟಗಿ, ರುದ್ರ್ಪ ಭಂಡಾರಿ, ಕೆ,ಎನ್,ಮುಳಗುಂದ, ಗೀರಿಶ ಅಧಿಕಾರಿ, ಸೇರಿದಂತೆ ಮುದ್ದು ಮಕ್ಕಳು ಹಾಗೂ ಇನ್ನೀತರರು ಹಾಜರಿದ್ದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 