ಸ್ವಾಮೀಜಿಯವರ ಪರಿಸರ ರಕ್ಷಣೆಯ ಕಾರ್ಯಕ್ಕೆ ಕೈ ಜೋಡಿಸಿ: ಐಹೊಳೆ
Join hands with Swamiji's work to protect the environment: Aihole
ರಾಯಬಾಗ 20: ಧರ್ಮ, ಸಂಸ್ಕೃತಿ, ದೇಶ ಉಳಿಬೇಕಾದರೆ ಗುರುಗಳ ಪಾತ್ರ ಬಹಳ ಮಹತ್ವದ್ದು ಎಂದು ರಾಯಬಾಗ ಶಾಸಕ ಡಿ ಎಂ ಐಹೊಳೆ ಅವರು ಹೇಳಿದರು.
ತಾಲೂಕಿನ ನಸಲಾಪುರ ಗ್ರಾಮದಲ್ಲಿ ಸನ್ಮತಿ ಯುವಕ ಸಂಘ ಹಾಗೂ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಸಿದ್ಧಸೇನ ಮುನಿ ಮಹಾರಾಜರ ಸಾನಿಧ್ಯದಲ್ಲಿ ಸಸಿ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮದಿಂದ ಸಮಾಜಕ್ಕೆ ಒಳ್ಳೆಯ ಪರಿಸರ ಉಳಿಸಿ ಎಂಬ ಸಂದೇಶ ನೀಡುತ್ತಿರುವುದು ಸಂತಸವಾಗಿದೆ. ಸ್ವಾಮೀಜಿಯವರ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು. ಸಿಬಿಎಸ್‌ಎಸ್‌ಕೆ ನಿರ್ದೇಶಕ ಭರತೇಶ್ ಬನವಣೆ ಅವರು ಮಾತನಾಡಿ, ನೆಟ್ಟಿರುವ ಸಸಿಗಳನ್ನು ಚೆನ್ನಾಗಿ ಬೆಳೆಸಿದರೆ ಗ್ರಾಮ ಪಂಚಾಯತ್ ವತಿಯಿಂದ ಅವರಿಗೆ ಬಹುಮಾನ ವಿತರಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಸಿದ್ಧ ಸೇನೆ ಮುನಿಮಹಾರಾಜರು ಮಾತನಾಡಿ ಗ್ರಾಮ, ದೇಶ ಸ್ವಚ್ಛ ಮಾಡಬೇಕಾದರೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅದಕ್ಕೆ ಯುವಕರ ಸಂಘ ಸಂಸ್ಥೆಗಳು ಗ್ರಾಮಸ್ಥರು ಸಹಕಾರ ನೀಡಿದರೆ ಎಲ್ಲವೂ ಸಾಧ್ಯ ಎಂದರು.
ಗ್ರಾಪಂ ಅಧ್ಯಕ್ಷ ಅರುಣ ನಾಯಕ, ಅಣ್ಣಾಸಾಹೇಬ ಖೇಮಪುರೆ, ಪೃಥ್ವಿರಾಜ ಜಾದವ, ಜೈಪಾಲ ಬನವಣೆ, ಚೌಗುಂಡಾ ಪಾಟೀಲ, ಅಣ್ಣಾಸಾಹೇಬ ಸಮಾಜೆ, ಮಹದೇವ ಕಾಂಬಳೆ, ರಾಜೇಗೌಡ ಪಾಟೀಲ, ರಾಜು ಪರಮಾಜೆ, ಅಬ್ದುಲ ತಾಂಬಟ, ಶ್ರೀಕಾಂತ ಧನಗರ, ಚಂದ್ರಕಾಂತ ಕಾಂತೆ, ಶರತ ಪಾಟೀಲ, ಸಂತೋಷ ಶೇಡಬಾಳೆ, ಮಹಾವೀರ ಪರಮಾಜೆ, ಸುರೇಂದ್ರ ಸಮಾಜೆ, ಅನೇಕ ಜೈನ ಶ್ರಾವಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 