ನರೇಗಲ್ ಸರ್ಕಾರಿ ಪದವಿ ಕಾಲೇಜಿನ 79 ವಿದ್ಯಾರ್ಥಿಳಿಗೆ ನೌಕರಿ
Jobs for 79 students of Naregal Government Degree College
ಲೋಕದರ್ಶನ ವರದಿ
ನರೇಗಲ್ 28: ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನಲ್ಲಿ ಅಂತಿಮ ವರ್ಷದ ಬಿಎ, ಬಿಕಾಂ, ಬಿಎಸ್‌ಸಿ ಹಾಗೂ ಬಿಸಿಎ ಪದವಿ ಕೋರ್ಸ್‌ಗಳನ್ನು ಕಲಿಯುತ್ತಿರುವ 79 ವಿದ್ಯಾರ್ಥಿಗಳಿಗೆ ಕಾಂಪಸ್ ಸೆಲೆಕ್ಷನಲ್ಲಿ ನೌಕರಿ ಭಾಗ್ಯ ದೊರೆತಿದೆ. ಈಚೆಗೆ ಕಾಲೇಜಿನಲ್ಲಿ ಬೆಂಗಳೂರಿನ ಕ್ರಿಯೇಟಿವ್ ಇಂಜಿನಿಯರ್ಸ್ ಎನ್ನುವ ಕಂಪನಿಯವರು ನಡೆಸಿದ ಕಾಂಪಸ್ ಇಂಟರ್ವಿವ್ ನಲ್ಲಿ ಪಾಲ್ಗೊಂಡಿದ್ದ ಅನೇಕ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು.
ಅವರಿಂದ ನಡೆದ ಕಾಂಪಸ್ ಸಂದರ್ಶನಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಈ ಕಂಪನಿಯವರು ನೀಡುವ ಇತರೇ ಸವಲತ್ತುಗಳ ಸಹಿತವಾಗಿ ಪ್ರತಿ ತಿಂಗಳಿಗೆ ರೂ. 21,407 ಸಾವಿರ ರೂಪಾಯಿ ವೇತನದ ಅಂದರೆ ವಾರ್ಷಿಕ ರೂ. 2.1407 ಲಕ್ಷದ ನೌಕರಿಯ ಆಫರ್ ಲೆಟರ್‌ಗಳನ್ನು 79 ವಿದ್ಯಾರ್ಥಿಗಳು ಪಡೆದಿದ್ದಾರೆ. ಕಲಿಯುತ್ತಿರುವಾಗಲೇ ಒಂದೇ ವರ್ಷದಲ್ಲಿ ಉದ್ಯೋಗದ ಆಫರ್ ಲೆಟರ್ ಪಡೆದ ಗ್ರಾಮೀಣ ಭಾಗದ ಅತಿ ಹೆಚ್ಚು ವಿದ್ಯಾರ್ಥಿಗಳಾಗಿ ಹೊರಹೊಮ್ಮಿದ್ದಾರೆ.
ಕಾಲೇಜಿನಲ್ಲಿ ಮಂಗಳವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಪ್ರಾಂಶುಪಾಲ ಎಸ್. ಎಲ್. ಗಳೇದಗುಡ್ಡ, ಉಪನ್ಯಾಸಕರ ನಿರಂತರ ಪ್ರಯತ್ನ ಹಾಗೂ ಶ್ರಮದ ಫಲವಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅವಶ್ಯಕವಾಗಿ ಬೇಕಾದ ನೌಕರಿಗೆ ದೊರಕಲು ಸಾಧ್ಯವಾಗಿದೆ. ಕ್ರೀಯಾತ್ಮಕವಾಗಿ ಕಾರ್ಯ ನಿರ್ವಹಿಸಿದ ಕಾಲೇಜಿನ ಉದ್ಯೋಗ ಘಟಕದ ಶಿವಕುಮಾರ ಕುರುಬರ ಹಾಗೂ ಅವರ ತಂಡ ವಿದ್ಯಾರ್ಥಿಗಳಿಗೆ ಸರಿಯಾದ ಮಾಹಿತಿ ನೀಡಿ ಪ್ರೇರಣೆ ತುಂಬಿದ ಕಾರಣ ಯಶಸ್ಸು ದೊರಕಿದೆ ಎಂದರು. ಹಿರಿಯ ಪ್ರಾಧ್ಯಾಪಕಿ ಜಯಶ್ರೀ ಮುತಗಾರ ಮಾತನಾಡಿ, ಸರ್ಕಾರಿ ಕಾಲೇಜಿನ ಮಕ್ಕಳು ಎಲ್ಲಾ ವಿಭಾಗದಲ್ಲೂ ಮುಂಚೂಣಿಯಲ್ಲಿ ಇರುತ್ತಾರೆ. ಅವರಿಗೆ ಸರಿಯಾದ ಅವಕಾಶಗಳು ದೊರೆತಾಗ ಅದನ್ನು ಸದುಪಯೋಗ ಪಡಿಸಿಕೊಂಡು ಸಾಧನೆ ಮಾಡುತ್ತಾರೆ ಎನ್ನುವುದಕ್ಕೆ ಕಾಂಪಸ್ ಸೆಲೆಕ್ಷನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಸಂಖ್ಯೆಯೇ ಕಾರಣವಾಗಿದೆ ಎಂದರು.
ಬಿಸಿಎ ವಿಭಾಗದ ಎಚ್‌ಒಡಿ ಶಶಿಕಲಾ ವಿ. ಎಸ್. ಮಾತನಾಡಿ, ನಮ್ಮ ಕಾಲೇಜಿನಲ್ಲಿ ಪ್ರವೇಶ ಪಡೆಯುವ ಪ್ರತಿ ವಿದ್ಯಾರ್ಥಿಗೂ ಕೌಶಲ್ಯ ಆಧಾರಿತ ಹಾಗೂ ಉಪಯುಕ್ತ ತಂತ್ರಜ್ಞಾನದ ತರಬೇತಿ ನೀಡುತ್ತಿದ್ದೇವೆ. ಆದ್ದರಿಂದ ಬಿಸಿಎ ಕಲಿಯಲು ಅಂತರ ಜಿಲ್ಲಾಗಳಿಂದಲೂ ನಮ್ಮಲಿ ಪ್ರವೇಶ ಪಡೆಯುತ್ತಿದ್ದಾರೆ. ಕಾಂಪಸ್ ಸಂದರ್ಶನದಲ್ಲಿ ವಿದ್ಯಾರ್ಥಿಗಳು ಮೂಲಕ ಗ್ರಾಮೀಣ ಭಾಗದ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು. ಈ ವೇಳೆ ಎಸ್. ಎಸ್. ಸೂಡಿ, ವಿರೂಪಾಕ್ಷ .ಡಿ., ಬಸವರಾಜ ಮಡಿವಾಳರ, ಸ್ನೇಹಾ ಎಕ್ಬೋಟೆ, ನಾಗಪ್ರೀಯಾ ಹುಬ್ಬಳ್ಳಿ ಇದ್ದರು. ನಂದಿಸಲಾಯಿತು
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ? 