ಉದ್ಯೋಗ ಸೃಷ್ಟಿಯೇ ಜನಸೇನಾ ಪಕ್ಷದ ಪ್ರಮುಖ ಗುರಿ: ರವಿ ಭಾರತೀಯ

ಉದ್ಯೋಗ ಸೃಷ್ಟಿಯೇ ಜನಸೇನಾ ಪಕ್ಷದ ಪ್ರಮುಖ ಗುರಿ: ರವಿ ಭಾರತೀಯ  Job creation is the main goal of Jana Sena Party: Ravi Bharatiya

ಬಳ್ಳಾರಿ 27:  ನಗರದಲ್ಲಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿ, ಸಮಾಜಮುಖಿ ರಾಜಕೀಯವನ್ನು ಕಟ್ಟುವ ನಿಟ್ಟಿನಲ್ಲಿ ಆಂಧ್ರ​‍್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ನೇತೃತ್ವದಲ್ಲಿ ಜನಸೇನಾ ಪಕ್ಷ ಕಾರ್ಯನಿರ್ವಹಿಸುತ್ತಿದೆ ಎಂದು ಜನಸೇನಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ರವಿ ಭಾರತೀಯ ಹೇಳಿದರು.

ನಗರದ ಎಸ್‌ಎಲ್ವಿ ಫಂಕ್ಷನ್ ಹಾಲ್ನಲ್ಲಿ ನಡೆದ ಪಕ್ಷದ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಇಂದಿನ ಪರಿಸ್ಥಿತಿಯಲ್ಲಿ ಯುವಕರು ನಿರುದ್ಯೋಗ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದು, ಅವರಿಗೆ ಉದ್ಯೋಗ, ಶಿಕ್ಷಣ ಹಾಗೂ ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ ಜನಸೇನಾ ಪಕ್ಷ ಜನಸೇವೆಯಲ್ಲಿ ತೊಡಗಿಕೊಂಡಿದೆ ಎಂದು ತಿಳಿಸಿದರು.“ಜನರಿಗಾಗಿ, ಜನರಿಗೋಸ್ಕರ ನಿರ್ಮಾಣವಾದ ಪಕ್ಷವೇ ಜನಸೇನಾ ಪಕ್ಷ. ಬಳ್ಳಾರಿ ಜಿಲ್ಲೆಯ ಯುವಕರು ಹಾಗೂ ಯುವತಿಯರಿಗೆ ಶಕ್ತಿ ತುಂಬುವ ಕೆಲಸವನ್ನು ಪಕ್ಷ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಪಕ್ಷದ ತತ್ವ ಹಾಗೂ ಕಾರ್ಯಕ್ರಮಗಳನ್ನು ಹೆಚ್ಚಿನ ಜನರಿಗೆ ತಲುಪಿಸಿ, ಜಿಲ್ಲೆಯಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು” ಎಂದು ಕರೆ ನೀಡಿದರು.ಸಭೆಯಲ್ಲಿ ಮಾತನಾಡಿದ ಪಕ್ಷದ ಮುಖಂಡರು, ರಾಜ್ಯದಲ್ಲಿ ಉತ್ತಮ ಆಡಳಿತ, ಯುವಕರಿಗೆ ಉದ್ಯೋಗ ಸೃಷ್ಟಿ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವ ರಾಜಕೀಯ ಪರ್ಯಾಯದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಕರ್ನಾಟಕದಲ್ಲಿಯೂ ಜನಸೇನಾ ಪಕ್ಷ ಬಲವಾಗಿ ಬೆಳೆಯಬೇಕು ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪಕ್ಷ ಸಂಘಟನೆಯ ಉಸ್ತುವಾರಿ ಮುರಳಿ ಗೌಡ, ಮುರಳಿ ಕೃಷ್ಣ, ರೂಪಾ ರೆಡ್ಡಿ, ವೆಂಕಟೇಶ, ಪದ್ಮಾವತಿ, ಸುಭಾಷ್ ಆಚಾರ್ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.ಈ ಕಾರ್ಯಕ್ರಮವನ್ನು ಎ.ಬಿ. ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕರು ಅಲ್ಲಠ ಭಾಷ್ ರವರು ನಿರೂಪಿಸಿದರು.