ಹುಬ್ಬಳ್ಳಿಯಲ್ಲಿ ಜಿತೇಂದ್ರ ಮಜೇಥಿಯಾ ಅವರಿಗೆ ಭವ್ಯ ಸನ್ಮಾನ
Jitendra Majethia felicitated in Hubballi
ಹುಬ್ಬಳ್ಳಿ 23: ಸೋಹನ ಸುರೇಶ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರಿಗೆ ಮಜೇಥಿಯಾ ಫೌಂಡೇಶನ್ ಸಂಸ್ಥಾಪಕರು , ಚೇರಮನ್, ಹಿರಿಯರಾದ ಜಿತೇಂದ್ರ ಮಜೇಥಿಯಾ ಅವರು ನೆನಪಿನ ಕಾಣಿಕೆ ಹಾಗೂ ಮಜೇಥಿಯಾ ಫೌಂಡೇಶನ್ ನ ಮಾಹಿತಿ ಪುಸ್ತಕ ನೀಡಿ ಹೃದಯ ಸ್ಪರ್ಶಿ ಯಾಗಿ ಗೌರವಿಸಿದರು.
ಈ ಸಂದರ್ಭ ನಿರ್ಮಾಣ ಆಗಿದ್ದು ಹೀಗೆ, ಮಜೇಥಿಯಾ ಫೌಂಡೇಶನ್ ಸಂಸ್ಥಾಪಕರು , ಚೇರಮನ್, ಹಿರಿಯರಾದ ಜಿತೇಂದ್ರ ಮಜೇಥಿಯಾ ಅವರಿಗೆ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಹಾಗೂ ಸಾಧನೆ ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಕ್ಕೆ ಮಜೇಥಿಯಾ ಫೌಂಡೇಶನ್ ಚಾರಿಟೇಬಲ್ ಸಂಸ್ಥೆಯ ಮೂಲಕ ಉತ್ತರ ಕರ್ನಾಟಕದ ಹುಬ್ಬಳ್ಳಿ ಜನರಿಗೆ ದಶಕಗಳಿಂದ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ, ಸಮಾಜಮುಖಿ ಉನ್ನತ ವಿಚಾರಗಳನ್ನು ಹೊಂದಿರುವ, ಹಿರಿಯ ಜೀವ, 77 ವರ್ಷ ವಯಸ್ಸಿನ, ಉತ್ಸಾಹಿ ಸಮಾಜ ಚಿಂತಕ, ಕ್ರಿಯಾ ಶೀಲ ವ್ಯಕ್ತಿತ್ವದ ಗಣ್ಯರಾದ ಸನ್ಮಾನ ಶ್ರೀ ಜಿತೇಂದ್ರ ಮಜೇಥಿಯಾ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಶಾಲು, ಮಾಲಾರೆ್ಣ ಮಾಡಿ, ಗ್ರಂಥ ನೀಡಿ ಗೌರವ ಪೂರ್ವಕವಾಗಿ ಹೆಮ್ಮೆ, ಅಭಿಮಾನದಿಂದ ಸನ್ಮಾನಿಸಿದರು. ಹುತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಶುಭಾಶಯ ಕೋರಿದರು.
ಸೋಹನ ಸುರೇಶ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷರು, ಸಾಹಿತಿ ಪ್ರೊ ಎಸ್ ಎಂ ಸಾತ್ಮಾರ, ನುಡಿ ಕನ್ನಡ ಬಳಗದ , ಕವಿ ವೀರಣ್ಣ ಹೂಲಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಮಜೇಥಿಯಾ ಫೌಂಡೇಶನ್ ಸಿ ಇ ಓ. ಡಾ ಸುನೀಲ್ ಕುಕನೂರು, ಸಿಬ್ಬಂದಿ, ಮುಂತಾದವರು ಇದ್ದರು.
ಜಿತೇಂದ್ರ ಮಜೇಥಿಯಾ ಅವರು 1949ರ ಅಕ್ಟೋಬರ್ ಒಂದು ರಂದು ಜನಿಸಿದರು. ತಂದೆ ದಯಾಲಾಲ್ ಹಾಗೂ ತಾಯಿ ಜಶೋದಾಬೆನ್. ದುರ್ಬಲ ವರ್ಗದ ಮತ್ತು ಅಸಹಾಯಕ ಜನರಿಗೆ ಸಹಾಯ ಮಾಡುವ ಸದುದ್ದೇಶವನ್ನೂ ಇಟ್ಟುಕೊಂಡು 2008ರಲ್ಲಿ ಮಜೇಥಿಯಾ ಫೌಂಡೇಶನ್ ಹುಟ್ಟು ಹಾಕಿದರು. 18ನೇ ವರ್ಷದಲ್ಲಿ ಕಾರ್ಯ ಮಾಡುತ್ತಿರುವ ಮಜೇಥಿಯಾ ಫೌಂಡೇಶನ್ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಜನೋಪಯೋಗಿ ಕಾರ್ಯಗಳನ್ನು ಹಮ್ಮಿಕೊಂಡು ಬಹುಜನರ ಬಾಳಿಗೆ ಬೆಳಕಾಗಿದ್ದಾರೆ. ಇನ್ನು ಹೆಚ್ಚು ಸಮಾಜ ಸೇವೆ ಅವರಿಂದ ಜರುಗಲಿ ಎಂದು ಪರಮಾತ್ಮನಲ್ಲಿ ಪ್ರಾರ್ಥಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 