ಜಿನ್ನಪ್ಪಣ್ಣಾ ಚೌಗಲೆ ಲಾಲ ಬಹಾದ್ದೂರ ಸೌಹಾರ್ದ ಸಹಕಾರಿ ಶಾಖೆ ಉದ್ಘಾಟನೆ
Jinnappanna Chowgale Lal Bahadur Souharda Cooperative Branch inaugurated
ಅಥಣಿ 14 : ಶಿರಗುಪ್ಪಿಯ ಜಿನ್ನಪ್ಪಣ್ಣಾ ಚೌಗಲೆ ಲಾಲ ಬಹಾದ್ದೂರ ಕ್ರೆಡಿಟ್ ಸೌಹಾರ್ದ ಸಹಕಾರಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸಹಕಾರಿಯಾಗಲಿ ಮತ್ತು ಈ ಕ್ರೆಡಿಟ್ ಸೌಹಾರ್ದ ಸಹಕಾರಿ ಆರ್ಥಿಕವಾಗಿ ಉನ್ನತಿಯಾಗಲಿ ಎಂದು ನಾಂದಣಿ ಜೈನ ಮಠದ ಜಗದ್ಗುರು ಶ್ರೀ ಜೀನಸೇನ ಭಟ್ಟಾರಕ ಮಹಾ ಸ್ಚಾಮೀಜಿ ಹೇಳಿದರು. ಅವರು ಜಿನ್ನಪ್ಪಣ್ಣ ಚೌಗಲೆ ಲಾಲ ಬಹಾದ್ದೂರ ಸಹಕಾರಿ ಸಂಘದ 12 ನೇ ಶಾಖೆಯನ್ನು ಗುಂಡೇವಾಡಿ ಗ್ರಾಮದಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಗುಂಡೇವಾಡಿಯಲ್ಲಿ ನೂತನವಾಗಿ ಪ್ರಾರಂಭಗೊಂಡ 12 ನೇ ಶಾಖೆ ಉತ್ತರೊತ್ತರವಾಗಿ ಬೆಳೆದು ಎಲ್ಲರಿಗೂ ಆರ್ಥಿಕ ಸೌಲಭ್ಯ ಒದಗಿಸಲಿ ಎಂದು ಶುಭ ಹಾರೈಸಿದರು.ಸಹಕಾರಿ ಸಂಘದ ಅಧ್ಯಕ್ಷ ಭರಮಣ್ಣಾ ಚೌಗಲೆ ಮಾತನಾಡಿ, ಗ್ರಾಮೀಣ ಭಾಗದ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಬೇಕೆನ್ನುವ ಉದ್ದೇಶದಿಂದಲೇ ಪ್ರಾರಂಭಗೊಂಡ ನಮ್ಮ ಸಹಕಾರಿ ಸಂಘದ ಹೆಚ್ಚಿನ ಪ್ರಮಾಣದ ಶಾಖೆಗಳನ್ನು ಗ್ರಾಮೀಣ ಪ್ರದೇಶದಲ್ಲಿಯೇ ಪ್ರಾರಂಭಿಸಿದ್ದೇವೆ ಎಂದ ಅವರು 1990 ರಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭಗೊಂಡಿದ್ದ ಈ ಸಹಕಾರಿ ಸಂಘ ಇಂದು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ ಎಂದರು.
4700 ಸದಸ್ಯರಿರುವ ನಮ್ಮ ಸಹಕಾರ ಸಂಘ 22 ಕೋಟಿ 70 ಲಕ್ಷ ಶೇರ್ ಬಂಡವಾಳ, 16 ಕೋಟಿ 72 ಲಕ್ಷದಷ್ಟು ನಿಧಿಗಳನ್ನು, 167 ಕೋಟಿಗಳಷ್ಟು ಠೇವುಗಳನ್ನು ಹೊಂದಿರುವ ಸಹಕಾರಿ ಸಂಘ 93 ಕೋಟಿ 13 ಲಕ್ಷಗಳಷ್ಟು ಸಾಲಗಳನ್ನು ವಿತರಿಸಿದೆ ಎಂದ ಅವರು 186 ಕೋಟಿ ರೂ.ಗಳಷ್ಟು ದುಡಿಯುವ ಬಂಡವಾಳ ಹೊಂದಿರುವ ನಮ್ಮ ಸಹಕಾರಿ ಸಂಘ 2 ಕೋಟಿ 18 ಲಕ್ಷ ರೂ.ಗಳಷ್ಟು ಲಾಭ ಗಳಿಸಿದೆ ಎಂದರು. ಅತಿಥಿಗಳಾಗಿ ಆಗಮಿಸಿದ್ದ ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆಯ ನಿರ್ದೇಶಕ ಘೂಳಪ್ಪ ಜತ್ತಿ ಮಾತನಾಡಿ, ಸಹಕಾರ ಸಂಘಗಳಿಂದ ರೈತರು ಅವಶ್ಯಕತೆ ಎನಿಸಿದಾಗ ಸಾಲ ಪಡೆದುಕೊಳ್ಳಬೇಕು ಮತ್ತು ನಿಗದಿತ ಅವಧಿಯಲ್ಲಿ ಬಡ್ಡಿ ಮತ್ತು ಸಾಲದ ಕಂತುಗಳನ್ನು ಪಾವತಿಸಬೇಕು ಆಗ ಮಾತ್ರ ಸಂಘಗಳು ಬೆಳೆಯುತ್ತವೆ ಎಂದ ಅವರು ಗುಂಡೇವಾಡಿಯಲ್ಲಿ ಪ್ರಾರಂಭಗೊಂಡ ಜಿನ್ನಪ್ಪಣ್ಣಾ ಚೌಗಲೆ ಲಾಲ ಬಹಾದ್ದೂರ ಸಹಕಾರಿ ಸಂಘದ ಶಾಖೆಗೆ ಎಲ್ಲ ರೀತಿಯಿಂದ ಸಹಕಾರ ನೀಡುವುದಾಗಿ ಹೇಳಿದರು.
ಅತಿಥಿಗಳಾಗಿ ಸಹಕಾರಿ ಧುರೀಣರಾದ ಶಿವಾನಂದ ಗೊಲಭಾವಿ, ಅಮರ ದುರ್ಗಣ್ಣವರ, ಅಬಾ ಚವ್ಹಾಣ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಸಂಚಾಲಕ ಮಂಡಳಿಯ ಉಪಾಧ್ಯಕ್ಷ ಅಪ್ಪಾಸಾಹೇಬ ಶಿರಗುಪ್ಪೆ, ಸದಸ್ಯರಾದ ಭಾವುಸಾಹೇಬ ಕುರುಂದವಾಡೆ, ತಾತ್ಯಾಸಾಹೇಬ ಚೌಗಲೆ, ಸುರೇಶ ಚೌಗಲೆ, ಮಹಾವೀರ ಅಕಿವಾಟೆ, ಅಣ್ಣಾಸಾಬ ಚಂದೂರೆ, ನೇಮಣ್ಣಾ ತೇರದಾಳೆ, ಶಂಕರ ಸವದೆ, ಬಾಹುಬಲಿ ಬೋಲೆ, ಶ್ರೀಮತಿ ವೀಣಾ ಕಾತ್ರಾಳೆ, ಶಾಲನ ಸರ್ಜೇರಾವ ಪಾಟೀಲ, ಯಲ್ಲಪ್ಪ ಕಾಂಬಳೆ, ಮಹಾದೇವಿ ಪಾಟೀಲ ಹಾಗೂ ಗುಂಡೇವಾಡಿ ಶಾಖೆಯ ಸಲಹಾ ಸಮಿತಿಯ ಪಾಪಾಚಂದ ಬಣಜವಾಡ, ಸಿದಗೌಡ ಪಾಟೀಲ, ಸುಭಾಶ ಗೋಕಾಕ, ಸುರೇಶ ಅವತಾಡೆ, ಶಾಂತು ಬಣಜವಾಡ, ಕಲ್ಲಪ್ಪ ಕುಪವಾಡ, ಸಿದ್ಧಾರೂಢ ಗುಂಜಿಗಾಂವಿ, ಮಹಾವೀರ ದಾನೋಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ 