ರಾಣೆಬೆನ್ನೂರಲ್ಲಿ ವಿಜೃಂಭಣೆಯಿಂದ ಜರುಗಿದ ಜಿಹ್ವೇಶ್ವರ ಜಯಂತ್ಯತ್ಸವ
Jihveshwara Jayanthyasava celebrated with great pomp in Ranebennur
ರಾಣೆಬೆನ್ನೂರಲ್ಲಿ ವಿಜೃಂಭಣೆಯಿಂದ ಜರುಗಿದ ಜಿಹ್ವೇಶ್ವರ ಜಯಂತ್ಯತ್ಸವ
ರಾಣೆಬೆನ್ನೂರ 09: ಸ್ವಕುಳಸಾಳಿ ಸಮಾಜದ ಆರಾಧ್ಯ ದೈವ ಭಗವಾನ್ ಜಿಹ್ವೇಶ್ವರ ಜಯಂತೋತ್ಸವವು ನಗರದಲ್ಲಿ ಗುರುವಾರದಂದು ಸಂಭ್ರಮ ಹಾಗೂ ಸಡಗರದಿಂದ ನೂರಾರು ಭಕ್ತರ ಮಧ್ಯೆ ಅದ್ದೂರಿಯಾಗಿ ನೆರವೇರಿತು.
ದೇವರಗುಡ್ಡ ರಸ್ತೆಯಲ್ಲಿನ ತುಳಜಾಭವಾನಿ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆಯು ಮುಂಜಾನೆ ನಗರದ ಪ್ರಮುಖ ಬೀದಿಗಳಲ್ಲಿ ಜೀಹ್ವೇಶ್ವರರ ಭಾವಚಿತ್ರದ ಮೆರವಣಿಗೆ ಮತ್ತು ಪಾಲಕಿ ಉತ್ಸವವು ಜರುಗಿತು ಇದಕ್ಕೂ ಮುನ್ನ ತುಳಜಾಭವಾನಿ ದೇವಿಗೆ ಮುಂಜಾನೆಯಿಂದಲೇ ಅಭಿಷೇಕ, ಪುಷ್ಪಾಲಂಕಾರ, ಮಹಾಪೂಜೆ , ಮಂಗಳಾರತಿ ಹಾಗೂ ತೊಟ್ಟಿಲು ಉತ್ಸವ, ಪುರಾಣ ಪ್ರವಚನ ಕಾರ್ಯಕ್ರಮಗಳು ನೂರಾರು ಮಹಿಳಾಮಣಿಗಳ ಮಧ್ಯೆ ಸಂಭ್ರಮದಿಂದ ಅದ್ದೂರಿಯಾಗಿ ನೆರವೇರಿದವು.
ಇದೇ ಸಂದರ್ಭದಲ್ಲಿ ಸಮಾಜದ ಹಿರಿಯ ನಾಗರಿಕರಿಗೆ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮಗಳು ಜರುಗಿದವು. ಸ್ವಕುಳ ಸಾಳಿ ಸಮಾಜದ ಗೌರವಾಧ್ಯಕ್ಷ ಖಂಡೆಪ್ಪ ರೋಖಡೆ, ಅಧ್ಯಕ್ಷ ವಿಠಲ್ ಏಡಿಕೆ, ಮಹಿಳಾ ಮಾಜಿ ಅಧ್ಯಕ್ಷೆ ತಾರಾಬಾಯಿ ಕ್ಷೀರಸಾಗರ, ರಾಜೇಶ್ವರಿ ಏಕಬೋಟೆ, ಸುನಂದಾ ಏಕಪೋಟೆ, ತುಕಾರಾಂ ಪಾಣಿ ಬಾತೆ, ಗೋಪಾಲ್ ಕ್ಷೀರಸಾಗರ, ಪ್ರೊ. ಧೀರೇಂದ್ರ ಏಕಬೋಟೆ, ರಾಮಕೃಷ್ಣ ತಾಂಬೆ, ದೇವರಾಜ್ ರೋಖಡೆ, ಕರಬಸಪ್ಪ ಏಕಬೋಟೆ, ಪರುಶುರಾಮ ರೋಖಡೆ ಸೇರಿದಂತೆ ಜಿಹ್ವೇಶ್ವರ ಉತ್ಸವ ಸಮಿತಿ, ಮಹಿಳಾ- ಯುವಕ ಮಂಡಳಿ ಹಾಗೂ ಸ್ವಕುಳಸಾಳಿ ಸಮಾಜದ ಹಿರಿಯ- ಕಿರಿಯ ಮುಖಂಡರುಗಳು ಮಹಿಳೆಯರು ಪಾಲ್ಗೊಂಡಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 