ರಾಂಚಿ,12 ಜಾರ್ಖಂಡ್ ವಿಧಾನಸಭೆಯ 17 ಕ್ಷೇತ್ರಗಳಿಗೆ ಇಂದು ನಡೆಯುತ್ತಿರುವ ಮೂರನೇ ಹಂತದ ಮತದಾನದಲ್ಲಿ ಇತ್ತಿಚಿನ ವರದಿಗಳ ಪ್ರಕಾರ ಸರಾಸರಿ ಶೇ15 ರಷ್ಟು ಮತದಾನದ
ವರದಿಯಾಗಿದೆ. ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಂಡಿ ಸೇರಿದಂತೆ ಒಟ್ಟಾರೆ 309 ಅಭ್ಯರ್ಥಿಗಳ ಭವಿಷ್ಯವನ್ನು ಇಂದು
ಮತದಾರರು ನಿರ್ಧರಿಸಲಿದ್ದಾರೆ. ಸಿಲ್ಲಿಯಲ್ಲಿ ಗರಿಷ್ಠ
ಪ್ರಮಾಣ ಮತದಾನವಾಗಿರುವ ವರದಿಯಾಗಿದೆ. ಜಾರ್ಖಂಡ್
ವಿಧಾನಸಭೆಗೆ ಒಟ್ಟಾರೆ ಐದು ಹಂತದಲ್ಲಿ ನಡೆಯಲಿದ್ದು
, ಇಂದು ಮೂರನೇ ಹಂತದ ಮತದಾನ ನಡೆಯುತ್ತಿದೆ. 17 ಕ್ಷೇತ್ರಗಳಲ್ಲಿ 32 ಮಹಿಳಾ ಅಭ್ಯರ್ಥಿಗಳು ಸೇರಿದಂತೆ
ಒಟ್ಟು 309 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಈ ಹಂತದಲ್ಲಿ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಂಡಿ, ಮಾಜಿ ಉಪಮುಖ್ಯಮಂತ್ರಿ
ಮತ್ತು ಆಲ್ ಜಾರ್ಖಂಡ್ ವಿದ್ಯಾರ್ಥಿ ಸಂಘ (ಎಜೆಎಸ್ಯು) ಅಧ್ಯಕ್ಷ ಸುದೇಶ್ ಮಹ್ತೋ ಸೇರಿದಂತೆ, ಸಚಿವರಾದ
ಸಿ.ಪಿ. ಸಿಂಗ್, ರಾಮಚಂದ್ರ ಸಾಹಿಸ್ ಮತ್ತು ನೀರಾ ಯಾದವ್ ಕಣದಲ್ಲಿರುವ ಪ್ರಮುಖ ನಾಯಕರಾಗಿದ್ದಾರೆ.