ಏಸುಕ್ರಿಸ್ತ ಅವರೊಬ್ಬ ಮಹಾ ಮಾನವತಾವಾದಿ - ಬಸವರಾಜ್ ಶೀಲವಂತರ್
Jesus Christ was a great humanist - Basavaraj Sheelvantar
ಕೊಪ್ಪಳ 25 : ಏಸುಕ್ರಿಸ್ತ ಅವರೊಬ್ಬ ಮಹಾ ಮಾನವತಾವಾದಿ ಎಂದು ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್ ಹೇಳಿದರು. ಕೊಪ್ಪಳ ಭಾಗ್ಯನಗರ ಅವಳಿ ನಗರದ ಬಳಿಯ ನವ ನಗರದ ಇರುವಾತನು ಚರ್ಚ್‌ನಲ್ಲಿ ಗುರುವಾರ ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ಜಿಲ್ಲಾ ಪಾಸ್ಟರ್ಸ್ ಅಸೋಸಿಯೇಷನ್ ಹಾಗೂ ಭ್ರಾತೃತ್ವ ಸಮಿತಿ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸೌಹಾರ್ದತಾ ಪ್ರೇರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಸವರಾಜ್ ಶೀಲವಂತರ್ ಮುಂದುವರೆದು ಮಾತನಾಡಿ ಜನರ ಏಳ್ಗೆಗಾಗಿ ಹೋರಾಡಿ ಮಡಿದ ಅವರಿಗೆ ಎಂದೂ ಸಾವಿಲ್ಲ.ಅವರು ಸತ್ತ ನಂತರವೂ ಎಲ್ಲರೊಳಗೂ ಮರು ಹುಟ್ಟು ಪಡೆದಿರುತ್ತಾರೆ. ಅದಕ್ಕಾಗಿ ನಾವು ಅವರನ್ನು ಸ್ಮರಿಸುವ ಕಾರಣಕ್ಕಾಗಿ ಪ್ರತಿ ವರ್ಷವೂ ಅವರ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸುತ್ತೇವೆ.
ಶೋಷಣೆ ಮುಕ್ತ ಸಮಾಜ.ಶಾಂತಿ. ಸೌಹಾರ್ದತೆ ಸಮಾನತೆ ಅವರ ಆಶಯವಾಗಿತ್ತು. ಆದರೆ ಇಂದು ಜಾತಿ ಧರ್ಮದ ಹೆಸರಿನಲ್ಲಿ ದೌರ್ಜನ್ಯ.ದಬ್ಬಾಳಿಕೆ. ಕೊಲೆಗಳು ನಡೆಯುತ್ತಿವೆ ಇವು ನಿಲ್ಲಬೇಕೆಂದರೆ ನಾವು ಏಸುಕ್ರಿಸ್ತ,ಪೈಗಂಬರ್. ಬುದ್ದ,ಬಸವ. ಅಂಬೇಡ್ಕರರಂಥ ಮಾನವತಾವಾದಿಗಳ ವಿಚಾರಗಳನ್ನು ಸರಿಯಾಗಿ ಅರ್ಥೈಸಿಕೊಂಡು ಮತಾಂಧರ ವಿರುದ್ದ ಹೋರಾಡಬೇಕಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ್ ಮಾತನಾಡಿ ಏಸು ಕ್ರಿಸ್ತರು ತಮ್ಮ ಮೇಲೆ ಭರವಸೆ ಇರುವವರನ್ನು ಅವರ ಪಾಪವನ್ನು ಬಿಡಿಸಿ ಸ್ವರ್ಗಕ್ಕೆ ಸೇರಿಸಬೇಕೆಂದು ಮನುಷ್ಯ ರೂಪದಲ್ಲಿ ಭೂಮಿಗೆ ಬಂದನು.ಆತನ ಜನನವನ್ನು ಈ ತಿಂಗಳ ಪೂರ್ತಿ ಆಚರಣೆ ಮಾಡುವುದರಿಂದ ಕ್ರೈಸ್ತ ತಿಂಗಳ ಎಂದು ಕರೆಯುತ್ತೇವೆ.
ಕ್ರಿಸ್ ಮಸ್ ಹಬ್ಬವು ಬಡವರ ದೀನ ದಲಿತರ ಶ್ರಮಿಕರ ಮೇಲು ಕೀಳು ಎನ್ನದೆ ಎಲ್ಲರನ್ನೂ ಸಮಾನವಾಗಿ ಕಾಣುವಂತಹ ಆಸಕ್ತಿಯುಳ್ಳ. ಮನೋಭಾವನೆವುಳ್ಳ ದೇವರು ಏಸು ಸ್ವಾಮಿ ಆತನ ಜನನವನ್ನು ಕ್ರಿಸ್ ಮಸ್ ಹಬ್ಬವಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭ್ರಾತೃತ್ವ ಸಮಿತಿಯ ಸಂಚಾಲಕ ಎಸ್.ಎ.ಗಫಾರ್ ಮಾತನಾಡಿ ಎಲ್ಲಾ ಜಾತಿ ಜನಾಂಗದವರು ಅಣ್ಣ ತಮ್ಮಂದಿರಂತೆ ಕೂಡಿ ಬಾಳಿದರೆ ಪರಸ್ಪರ ಸೌಹಾರ್ದತೆ ಮೂಡುತ್ತದೆ. ಸೌಹಾರ್ದತೆ ಇದ್ದರೆ ನಂಬಿಕೆ ವಿಶ್ವಾಸ ಹುಟ್ಟುತ್ತದೆ.ಆಗ ಎಲ್ಲರೂ ಆರ್ಥಿಕವಾಗಿ ಸಬಲರಾದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ.ಎಲ್ಲ ಧರ್ಮಗಳ ಸಂದೇಶ ಸೌಹಾರ್ದತೆ.ಇನ್ನೊಬ್ಬರ ಧರ್ಮವನ್ನು ಗೌರವಿಸುವುದು ಆಗಿದೆ ಎಂದು ವಿವರಿಸಿದರು.
ಸ್ವಾಗತ ಗೀತಾ ಮದಕಟ್ಟಿ.ನಿರೂಪಣೆ ರಾಘು ಮದಕಟ್ಟಿ.ವಂದನಾರೆ್ಣ ಮಲ್ಲಿಕಾರ್ಜುನ್ ಜಾಲಿಹಾಳ ಮಾಡಿದರು. ಕಾರ್ಯಕ್ರಮದಲ್ಲಿ ಹನುಮಂತ ಜಾಲಿಹಾಳ. ಬಸವರಾಜ್ ಜಾಲಿಹಾಳ.ಇಸರೈಲ್ ನಾಡರ.ಲಕ್ಷ್ಮಣ ಗುಳೇದಗುಡ್ಡ. ವೀರೇಶ ತಾವರಗೇರಾ. ಮಂಜುನಾಥ್ ಗುಳೇದಗುಡ್ಡ. ಪ್ರವೀಣ್. ಪ್ರಕಾಶ್.ವಿಶ್ವಾಸ್ಮಿತ್. ನೀರೀಕ್ಷಾ. ಸೌಮ್ಯಾ.ರೇಷ್ಮೆ. ಕವನ. ಯಶೋಧಾ. ವಿಜಯಲಕ್ಷ್ಮಿ. ಶಕುಂತಲಾ ಮುಂತಾದವರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 