ಮುದ್ದೇಬಿಹಾಳದಲ್ಲಿ ಈಡಿಗ ಹಾಗೂ ಬಜಂತ್ರಿ ಸಮಾಜದಿಂದ ಜಯಂತ್ಯೋತ್ಸವ
Jayanthi celebrations by the Idiga and Bajantri communities in Muddebihal
ಮುದ್ದೇಬಿಹಾಳ, ಆ.28: ಪಟ್ಟಣದಲ್ಲಿ ನೂಲಿಯ ಚಂದಯ್ಯನವರ ಹಾಗೂ ಬ್ರಹ್ಮಶ್ರೀ ನಾರಾಯಣಗುರುಗಳ ಜಯಂತ್ಯೋತ್ಸವವನ್ನು ಈಡಿಗ ಹಾಗೂ ಬಜಂತ್ರಿ ಸಮಾಜದ ವತಿಯಿಂದ ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.
ಬೆಳಿಗ್ಗೆ ಆಲಮಟ್ಟಿ ರಸ್ತೆಯಲ್ಲಿರುವ ಬ್ರಹ್ಮಶ್ರೀ ನಾರಾಯಣಗುರುಗಳ ವೃತ್ತವನ್ನು ಅಲಂಕರಿಸಿ, ಈಡಿಗ ಸಮಾಜದ ಹಿರಿಯರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸಿಹಿ ಹಂಚುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.
ಅದೇ ರೀತಿ ತಂಗಡಗಿ ರಸ್ತೆಯಲ್ಲಿರುವ ನೂಲಿಯ ಚಂದಯ್ಯನವರ ವೃತ್ತದಲ್ಲಿ ಬಜಂತ್ರಿ ಸಮಾಜದ ವತಿಯಿಂದ ವಿವಿಧ ವಾದ್ಯಮೇಳಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಜಯಂತ್ಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಪುರಸಭೆ ಅಧ್ಯಕ್ಷ ಮೆಹಬೂಬ ಗೋಳಸಂಗಿ, ಈಡಿಗ ಸಮಾಜದ ಮುಖಂಡ ಎ. ಗಣೇಶ್, ಅನ್ನಗೌಣಿ ಟಿ. ವಿಜಯಭಾಸ್ಕರ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಕಾಮರಾಜ ಬಿರಾದಾರ, ಎಪಿಎಂಸಿ ಮಾಜಿ ಉಪಾಧ್ಯಕ್ಷ ವಿ.ಎಚ್. ವಿಜಯಕರ, ಗುರುಲಿಂಗಪ್ಪಗೌಡ ಬಿರಾದಾರ, ಸಿ.ಜಿ. ವಿಜಯಕರ, ವೀರಶೈವ ಸಮಾಜದ ತಾಲೂಕಾಧ್ಯಕ್ಷ ಪ್ರಭುರಾಜ ಕಲಬುರ್ಗಿ, ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಗುರುಣ್ತು ತಾರನಾಳ, ರಾಜೇಂದ್ರ ರಾಯಗೊಂಡ, ಭೋವಿ ಸಮಾಜದ ಮಾಜಿ ಅಧ್ಯಕ್ಷ ಪರಶುರಾಮ ನಾಲತವಾಡ,
ಸಿಕಂದರ್ ಜಾನೇವಕರ್, ಬಜಂತ್ರಿ ಸಮಾಜದ ತಾಲೂಕಾಧ್ಯಕ್ಷ ನಾಗೇಶ್ ಬಜಂತ್ರಿ, ಗೋವಿಂದ ಬಜಂತ್ರಿ, ಹಣಮಂತ ಭಂಟನೂರ, ಸಿಂಗಪ್ಪ ಬಜಂತ್ರಿ, ಸಾಬಣ್ಣ ಬಜಂತ್ರಿ, ಭೀಮಣ್ಣ ಬಜಂತ್ರಿ, ಹುಲಗಪ್ಪ ಬಜಂತ್ರಿ, ಸಾಬಣ್ಣ ನಾಗಬೇನಾಳ, ಹಣಮಂತ ರಕ್ಕಸಗಿ ಹಾಗೂ ಯಂಕಪ್ಪ ಬಜಂತ್ರಿ ಸೇರಿದಂತೆ ರೋಡಗಿ ಮತ್ತು ಚವನಭಾವಿ ಗ್ರಾಮದ ಈಡಿಗ ಸಮಾಜದ ಮುಖಂಡರು ಹಾಗೂ ಸಮಾಜದ ಬಾಂಧವರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 