ಯರಗಟ್ಟಿ 09 : ಜಾತ್ರಾ ಮಹೋತ್ಸವಗಳು ಎಲ್ಲ ಸಮುದಾಯದವರನ್ನು ಒಗ್ಗೂಡಿಸುವ ಸಾಮರಸ್ಯದ ಸಂಕೇತವಾಗಿವೆ. ಅಲ್ಲದೇ ಸಂಸ್ಕೃತಿಯ ಪ್ರತಿಬಿಂಬಗಳಾಗಿವೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸಮೀಪದ ಬೆನಕಟ್ಟಿ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವದ ನಿಮಿತ್ಯ ಇತ್ತೀಚಗೆ ಹಮ್ಮಿಕೊಂಡಿದ್ದ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇವಿಯನ್ನು ಭಕ್ತಿಯಿಂದ ಪ್ರಾರ್ಥನೆ ಮಾಡಿದರೆ ಕಷ್ಟಗಳು ದೂರವಾಗಿ ನೆಮ್ಮದಿ ದೊರೆಯಲು ಸಾಧ್ಯ ಎಂದು ಹೇಳಿದರು.
ಸವದತ್ತಿ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿ, ಅನಾದಿಕಾಲದಿಂದಲೂ ಪ್ರತಿಯೊಂದು ಧರ್ಮಗಳಲ್ಲಿ ಆಚರಣೆಯಲ್ಲಿರುವ ಜಾಗರಣೆ, ಉಪವಾಸ, ವ್ರತಗಳು ಮನುಷ್ಯನ ಆರೋಗ್ಯ ರಕ್ಷಣೆಗೆ ಸಹಾಯಕವಾಗಿವೆ ಎಂದು ಹೇಳಿದರು.
ಸವದತ್ತಿ ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಶಿಂದೋಗಿ ಗ್ರಾಪಂ ಅಧ್ಯಕ್ಷ ಡಿ.ಡಿ.ಟೋಪೊಜಿ, ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ಕುಸಲಿ, ಸದಸ್ಯ ಪುಂಡಲೀಕ ಮರ್ಧನ್ನವರ, ಕರಿಯಪ್ಪ ಪೂಜೇರ, ಮಾಯಪ್ಪ ಕುರಿ, ಬಸಪ್ಪ ಚೂರಿ, ಮಹಾಂತೇಶ ಬಿಷ್ಟನ್ನವರ, ಅಪ್ಪಯಪ್ಪ ಶಿರಸಂಗಿ, ಮಲ್ಲಿಕಾರ್ಜುನ ದೇವರಮನಿ ಸೇರಿದಂತೆ ಇತರರು ಇದ್ದರು.